blank

ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಚಿತ್ರ ವಿಮರ್ಶೆ: ಕಳ್ಳರ ಕರಾಮತ್ತಿನಲ್ಲಿ ಮನರಂಜನೆಯ ಹೂರಣ

blank

ಚಿತ್ರ: ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು
ನಿರ್ದೇಶನ: ಕೇಶವ್ ಮೂರ್ತಿ
ನಿರ್ಮಾಣ: ರವೀಂದ್ರನ್, ಕುಬೇಂದ್ರನ್
ತಾರಾಗಣ: ದಿಲೀಪ್ ರಾಜ್, ಮಧುಸೂದನ್ ಗೋವಿಂದ್, ಪ್ರಸನ್ನ ವಿ.ಶೆಟ್ಟಿ, ಶಿಲ್ಪಾ ಮಂಜುನಾಥ್, ಅಪೂರ್ವ ಭಾರದ್ವಾಜ್

blank

ಶಿವ ಸ್ಥಾವರಮಠ
ಮನುಷ್ಯನ ಮನಸ್ಥಿತಿ ಹಾಗೂ ಪರಿಸ್ಥಿತಿ ವಿಧ ವಿಧ. ಇದರಲ್ಲಿ ಕಳ್ಳತನವನ್ನೇ ವೃತ್ತಿ ಮಾಡಿಕೊಂಡಿರುವವರದು ಬೇರೆ ಏನಿಲ್ಲ. ಕೆಲವರು ಹೊಟ್ಟೆಪಾಡಿಗಾಗಿ ಕದ್ದರೆ, ಇನ್ನು ಕೆಲವರಿಗೆ ಅದೊಂದು ಕಾಯಿಲೆ. ಇನ್ನು ಕೆಲವರು, ಶ್ರೀಮಂತರಿಂದ ಕದ್ದು ಬಡವರಿಗೆ ನೀಡಬೇಕು ಎನ್ನುವ ರಾಬಿನ್ ಹುಡ್‌ನಂತಹ ಉದಾರ ಮನೋಭಾವ. ಈ ಮೂವರು ಕಳ್ಳರೇ, ಆದರೆ, ಉದ್ದೇಶ ಬೇರೆ ಬೇರೆ. ಇಂತಹದ್ದೇ ಮೂವರ ಬದುಕಿನ ಕಥೆಯೇ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’.

ಸಿನಿಮಾದ ಟೈಟಲ್ ಹೇಳುವಂತೆ ರೈಲ್ವೇ ಹಾಗೂ ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಕಳ್ಳರ ಕಾಟದಿಂದ ತಪ್ಪಿಸಿಕೊಳ್ಳಲು ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಎಂದು ಫಲಕ ಹಾಕಿರುತ್ತಾರೆ. ಇಲ್ಲಿ ಅಂತಹ ಫಲಕಗಳು ಕಾಣಸಿಗುವುದಿಲ್ಲ. ಮೇಲಾಗಿ ಇವರು ಕಳ್ಳತನ ಮಾಡುವುದಿಲ್ಲ ಬಿಡು ಎನ್ನುವಷ್ಟು ಮುಗ್ಧತೆ, ಶ್ರೀಮಂತಿಕೆ ಇರುವ ಹಾಗೂ ಅಧಿಕಾರಸ್ಥ ವ್ಯಕ್ತಿಗಳು. ಆದರೆ, ಅವರೇ ಕಳ್ಳತನ ಮಾಡುತ್ತಿರುತ್ತಾರೆ. ಇಲ್ಲಿ ಯಾರನ್ನೂ ನಂಬಲು ಸಾಧ್ಯವಿಲ್ಲ ಎನ್ನುವಂತ ಕಥೆಯನ್ನು ಕುತೂಹಲದೊಂದಿಗೆ ನಿರೂಪಿಸಿದ್ದಾರೆ ನಿರ್ದೇಶಕ ಕೇಶವ್ ಮೂರ್ತಿ.

ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು ಚಿತ್ರ ವಿಮರ್ಶೆ: ಕಳ್ಳರ ಕರಾಮತ್ತಿನಲ್ಲಿ ಮನರಂಜನೆಯ ಹೂರಣ

blank

ಒಬ್ಬ ಇನಾಯತ್ (ಪ್ರಸನ್ನ). ವಾಟರ್ ಫಿಲ್ಟರ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾನೆ. ಮುಂದೆ ಬದುಕಿನ ಹೊಣೆಗಾರಿಕೆಗಾಗಿ ಅಡ್ಡದಾರಿ ಹಿಡಿಯುತ್ತಾನೆ. ಇನ್ನೊಬ್ಬ ರೋಹಿತ್ (ಮಧುಸೂದನ್) ಈತನಿಗೆ ಕ್ಲೆಪ್ಟೋಮೇನಿಯಾ. ಶ್ರೀಮಂತನಾಗಿದ್ದರೂ, ಕಳ್ಳತನ ಮಾಡುವುದು ಒಂದು ಮಾನಸಿಕ ಕಾಯಿಲೆ. ಈತನ ಕಳ್ಳತನಕ್ಕೆ ಪಾಲುದಾರಳು ರತ್ನಾ (ಅಪೂರ್ವ ಭಾರದ್ವಾಜ್). ಕೊನೆಯದಾಗಿ ಅಲ್ಬರ್ಟ್ (ದಿಲೀಪ್ ರಾಜ್) ಶ್ರೀಮಂತರನ್ನು ಹನಿಟ್ರ್ಯಾಪ್ ಮೂಲಕ ಖೆಡ್ಡಾ ತೋಡಿ ಅವರಿಂದ ಹಣ ವಸೂಲಿ ಮಾಡಿ ಬಡವರಿಗೆ ಹಂಚುವಾತ. ಈ ಮೂವರ ಕಥೆಗಳನ್ನು ಪ್ರತ್ಯೇಕವಾಗಿಯೇ ನಿರೂಪಿಸಲಾಗಿದೆ. ಹಾಗಾಗಿ, ಮನುಷ್ಯನ ವಿವಿಧ ರೀತಿಯ ಪರಿಸ್ಥಿತಿ, ಮನಸ್ಥಿತಿಯನ್ನು ಅರ್ಥ ಮಾಡಿಸುವ ಪ್ರಯತ್ನ ಮಾಡಲಾಗಿದೆ. ಶುರುವಿನಿಂದಲೇ ಸೀಟಿನ ತುದಿಗೆ ಕೂರಿಸುವ ಕುತೂಹಲವನ್ನು ಕಥೆಯಲ್ಲಿ ನಿರ್ದೇಶಕರು ಕಾಪಾಡಿಕೊಂಡಿದ್ದಾರೆ. ಮೊದಲರ್ಧದಲ್ಲಿ ಮನರಂಜನೆ ನೀಡಿದರೆ, ದ್ವಿತೀರ್ಯಾದಲ್ಲಿ ಸ್ಲೋ ಎನಿಸಿದರು ಕಥೆ ಆಪ್ತವಾಗುತ್ತದೆ. ಪ್ರಸನ್ನ ಇನಾಯತ್ ಪಾತ್ರದಲ್ಲಿ ಜೀವಿಸಿದ್ದಾರೆ. ಮಧುಸೂದನ್, ಅಪೂರ್ವ ಪಾತ್ರಗಳು ರಂಜಿಸುತ್ತವೆ. ದಿಲೀಪ್ ಹಾಗೂ ಶಿಲ್ಪಾ ಪಾತ್ರಗಳು ಗಮನಸೆಳೆಯುತ್ತವೆ. ಕಂಟೆಂಟ್ ಜತೆಗೆ ಎಂಟರ್‌ಟೇನ್ಮೆಂಟ್ ಬಯಸುವವರಿಗೆ ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಸೂಕ್ತ ಆಯ್ಕೆ.

Share This Article

ರಾತ್ರಿ ಮಲಗುವ ಮುನ್ನ ಪಾತ್ರೆಗಳನ್ನು ತೊಳೆದಿಡಬೇಕು ಯಾಕೆ ಗೊತ್ತಾ?; ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ | Reason Behind

ಹಿಂದೂ ಧರ್ಮಗ್ರಂಥಗಳಲ್ಲಿ ನಮ್ಮ ಸೌಕರ್ಯ, ಅದೃಷ್ಟ ಮತ್ತು ಆರೋಗ್ಯದ ಬಗ್ಗೆ ಅನೇಕ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅದನ್ನು…

ಶೀತ-ಕೆಮ್ಮಿನಿಂದ ಬಳಲುತ್ತಿದ್ದೀರಾ?; ಈ ಮನೆಮದ್ದು ಬಳಸಿ ಸಮಸ್ಯೆಗೆ ಗುಡ್​ಬೈ ಹೇಳಿ | Health Tips

ಚಳಿಗಾಲದಲ್ಲಿ ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ಶೀತ, ಕೆಮ್ಮು, ಗಂಟಲು ನೋವು, ಎದೆನೋವು, ನೆಗಡಿ, ತಲೆನೋವು ಮುಂತಾದ…

ಪಿರಿಯಡ್ಸ್​​ ಸಮಯದಲ್ಲಿ ನಿದ್ರಾಹೀನತೆ ಅನುಭವಿಸುವುದು ಏಕೆ?; ಇಲ್ಲಿದೆ ತಿಳಿದುಕೊಳ್ಳಲೇಬೇಕಾದ ಮಾಹಿತಿ | Health Tips

ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ (PMS) ಇದು ಸಾಮಾನ್ಯವಾಗಿ ಮಹಿಳೆಯ ಋತುಚಕ್ರದ ಮೊದಲು ಕಾಣಿಸಿಕೊಳ್ಳುತ್ತದೆ. ಮೂಡ್ ಸ್ವಿಂಗ್ಸ್,…