ಮೃತಪಟ್ಟ ಶಿಶುವನ್ನು ಅಂತ್ಯಕ್ರಿಯೆಗೆ ಒಯ್ಯುವಾಗ ಮಿಸುಕಾಡಿದ ಅನುಭವ…ವಾಪಸ್​ ಕರೆತಂದವರಿಗೆ ವೈದ್ಯರು ಹೇಳಿದ್ದೇನು?

ಮಂಗಳೂರು: ಮೃತಪಟ್ಟಿದೆ ಎಂದು ವೈದ್ಯರು ಘೊಷಿಸಿದ ಭ್ರೂಣಾವಸ್ಥೆಯ ಶಿಶುವನ್ನು ಅಂತ್ಯಸಂಸ್ಕಾರಕ್ಕೆಂದು ಕೊಂಡೊಯ್ಯುತ್ತಿದ್ದಾಗ ಮಿಸುಕಾಡಿದ ಅನುಭವವಾಗಿದ್ದು, ಕುಟುಂಬ ಸದಸ್ಯರು ಮರಳಿ ಲೇಡಿಗೋಷನ್ ಆಸ್ಪತ್ರೆಗೆ ಕರೆತಂದಿದ್ದಾರೆ.

ಶಿಶು ಗರ್ಭದಲ್ಲಿ ಆರೋಗ್ಯಕರವಾಗಿ ಬೆಳೆಯುತ್ತಿಲ್ಲ ಎನ್ನುವುದನ್ನು ಸ್ಕ್ಯಾನಿಂಗ್ ಮೂಲಕ ವೈದ್ಯರಿಂದ ಖಚಿತಪಡಿಸಿಕೊಂಡ ಬಂಟ್ವಾಳ ತಾಲೂಕು ಬಡಗಬೆಳ್ಳೂರು ನಿವಾಸಿ ಲೇಡಿಗೋಶನ್ ಆಸ್ಪತ್ರೆಗೆ ದಾಖಲಾಗಿದ್ದರು. ಮಂಗಳವಾರ ಮಾತ್ರೆ ಮೂಲಕ ಅಬಾರ್ಷನ್ ಮಾಡಿಸಲಾಯಿತು. ಭ್ರೂಣ 150 ಗ್ರಾಂ ತೂಕ ಹೊಂದಿತ್ತು.

ಮೃತ ಸ್ಥಿತಿಯಲ್ಲಿದ್ದ ಭ್ರೂಣಾವಸ್ಥೆ ಶಿಶುವಿನ ದೇಹವನ್ನು ಅಂತ್ಯಸಂಸ್ಕಾರಕ್ಕೆ ಒಯ್ಯಲಾಯಿತು. ವಾಹನದಲ್ಲಿ ಮಗುವಿನ ಕೈ ಮಿಸುಕಾಡಿತು ಎಂದು ಭಾವಿಸಿದ ಮನೆಮಂದಿ ಶಿಶುವನ್ನು ವಾಪಸ್ ಆಸ್ಪತ್ರೆಗೆ ಕರೆತಂದರು. ಪರೀಕ್ಷಿಸಿದ ವೈದ್ಯರು ಶಿಶು ಜೀವಂತವಿರುವ ಯಾವುದೇ ಲಕ್ಷಣಗಳಿಲ್ಲ ಎಂದು ಹೇಳಿದ್ದರಿಂದ ಮತ್ತೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

Leave a Reply

Your email address will not be published. Required fields are marked *