ನಾಳಿನ ಬಂದ್​ಗೆ ಸಂಘಟನೆಗಳು ಹಿಂದೇಟು ; ಶಾಲಾ ಕಾಲೇಜುಗಳಿಗೆ ರಜೆ ಇಲ್ಲ

>

ಬೆಂಗಳೂರು: ಕೇಂದ್ರ ಸರ್ಕಾರದ ಮೋಟಾರು ವಾಹನ (ತಿದ್ದುಪಡಿ) ಮಸೂದೆ-2017 ನ್ನು ಹಿಂಪಡೆಯುವಂತೆ ಆಗ್ರಹಿಸಿ ಆ. 7ರಂದು ಕೇಂದ್ರ ಕಾರ್ಮಿಕ ಸಂಘಟನೆಗಳು ನೀಡಿರುವ ಬಂದ್​ಗೆ ಬೆಂಬಲ ನೀಡಲು ಕೆಲವು ಸಂಘಟನೆಗಳು ಒಪ್ಪಿಗೆ ನೀಡಿಲ್ಲ ಎನ್ನಲಾಗಿದೆ.

ಸಾರಿಗೆ ನಿಗಮದ ನೌಕರರಲ್ಲಿಯೇ ಒಡಕು ಮೂಡಿದೆ. ಸಾರಿಗೆ ನೌಕರರ ಮುಖಂಡ ಅನಂತಸುಬ್ಬರಾವ್​ ತಮ್ಮ ಸಂಘಟನೆ ಬಂದ್​ಗೆ ಬೆಂಬಲ ನೀಡುವುದಿಲ್ಲ ಎಂದಿದ್ದಾರೆ.

ಬಿಎಂಟಿಸಿ, ಕೆಎಸ್​ಆರ್​ಟಿಸಿ ನೌಕಕರಿಗೂ ಮುಷ್ಕರದಲ್ಲಿ ಭಾಗಿಯಾಗದಂತೆ ನಿಗಮ ಸೂಚನೆ ನೀಡಿದೆ. ಯಾರಾದರೂ ಮುಷ್ಕರದಲ್ಲಿ ಪಾಲ್ಗೊಂಡರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ ಎನ್ನಲಾಗಿದೆ.

ಶಾಲಾ ಕಾಲೇಜುಗಳಿಗೆ ರಜೆಯಿಲ್ಲ

ಇನ್ನು ಮುಷ್ಕರದಲ್ಲಿ ಭಾಗವಹಿಸದೆ ಇರಲು ಲಾರಿ ಮಾಲೀಕರ ಸಂಘಗಳೂ ನಿರ್ಧಾರ ಮಾಡಿವೆ. ಬಂದ್​ ಹಿನ್ನೆಲೆಯಲ್ಲಿ ಯಾವುದೇ ಶಾಲೆ, ಕಾಲೇಜುಗಳಿಗೂ ರಜಾ ಇಲ್ಲ. ನಾಳೆ ಒಂದು ದಿನದ ಮಟ್ಟಿಗೆ ಪಾಲಕರೇ ಮಕ್ಕಳನ್ನು ಕರೆತರಲು ಖಾಸಗಿ ಶಾಲಾ ಒಕ್ಕೂಟಗಳು ಮನವಿ ಮಾಡಿವೆ.

ಓಲಾ-ಉಬರ್ ಬೆಂಬಲ

ಇನ್ನು ಓಲಾ-ಉಬರ್ ಟ್ಯಾಕ್ಸಿ ಅಸೋಸಿಯೇಷನ್ ನಾಳಿನ ಮುಷ್ಕರಕ್ಕೆ ಬೆಂಬಲ ನೀಡಲಿದೆ ಎಂದು ಓಲಾ ಟ್ಯಾಕ್ಸಿ ಅಸೋಸಿಯೇಷನ್​ ಅಧ್ಯಕ್ಷ ತನ್ವೀರ್​ ತಿಳಿಸಿದ್ದಾರೆ.

ನಾಳೆಯ ಮುಷ್ಕರಕ್ಕೆ ಕೆಲವೇ ಸಂಘಟನೆಗಳು ಬೆಂಬಲ ನೀಡಿದ್ದಾರೆ.