ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಹಿಂಪಡೆಯಲು ರಾಯಚೂರು ವಕೀಲರ ಸಂಘ ಒತ್ತಾಯ

ರಾಯಚೂರು: ಕೇಂದ್ರ ಸರ್ಕಾರ ಜಾರಿಗೊಳಿಸಿದ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಹಿಂಪಡೆಯುವಂತೆ ಒತ್ತಾಯಿಸಿ ಜಿಲ್ಲಾ ಸಂಘದ ನೇತೃತ್ವದಲ್ಲಿ ವಕೀಲರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದು, ಶುಕ್ರವಾರ ಪ್ರತಿಭಟನೆ ನಡೆಸಿ ಎಡಿಸಿ ಗೋವಿಂದರೆಡ್ಡಿ ಮೂಲಕ ಪ್ರಧಾನಿಗೆ ಮನವಿ ಸಲ್ಲಿಸಿದರು.

ಕಾಯ್ದೆ ತಿದ್ದುಪಡಿಯಿಂದ ಜನ ಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ದಂಡ ನಿಗದಿ ಅವೈಜ್ಞಾನಿಕವಾಗಿದೆ. ಜನರ ಹಿತ ದೃಷ್ಟಿಯ ಕಾಯ್ದೆಗಳನ್ನು ಜಾರಿಗೆ ತರಲು ಕ್ರಮ ವಹಿಸಿದರೆ ಉತ್ತಮ. ಆದರೆ, ತಿದ್ದುಪಡಿ ಕಾಯ್ದೆಯಿಂದ ವಾಹನ ಚಾಲಕರು, ಮಾಲೀಕರು ಸಂಕಷ್ಟ ಅನುಭವಿಸುವಂತಾಗಿದೆ. ಕೂಡಲೆ ಕೇಂದ್ರ ಸರ್ಕಾರ ಕಾಯ್ದೆ ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾಧ್ಯಕ್ಷ ಎನ್.ಭಾನುರಾಜ್, ಉಪಾಧ್ಯಕ್ಷ ಪಿ.ಬಸವರಾಜ, ಪ್ರ.ಕಾ.ಶ್ರೀಧರ ಯಲಿ, ನಜೀರ್ ಆಹ್ಮದ್, ಮಲ್ಲಿನಾಥ ಹಿರೇಮಠ, ನಜೀರ್ ಆಹ್ಮದ್, ಎಸ್.ರಾಮು ಸೇರಿ ಹಿರಿಯ, ಕಿರಿಯ ವಕೀಲರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *