26.7 C
Bengaluru
Sunday, January 19, 2020

ಪ್ರೀತಿಯ ಮಡಿಲಲ್ಲಿ ಹಾಕಿಕೊಂಡು ಬೆಳೆಸಿದ್ದ ತಾಯಿಯ ಅಗಲಿಕೆ ನೋವು ಸಹಿಸಲಾಗುತ್ತಿಲ್ಲ: ಜನಾರ್ದನ ರೆಡ್ಡಿ

Latest News

ಎಲ್ಲರೂ ದಾಸಶ್ರೇಷ್ಠರನ್ನು ಸ್ಮರಿಸಿ

ತಿ.ನರಸೀಪುರ: ಮಾನವೀಯ ಮೌಲ್ಯಗಳನ್ನು ಪ್ರಚುರಪಡಿಸಿದ ಕನಕದಾಸರಂತಹ ದಾಸಶ್ರೇಷ್ಠರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಾಸಕ ಎಂ.ಅಶ್ವಿನ್‌ಕುಮಾರ್ ಅಭಿಪ್ರಾಯಪಟ್ಟರು. ಪಟ್ಟಣದ ಶ್ರೀ ಗುಂಜಾನರಸಿಂಹ ದೇವಾಲಯದ...

ಕಳಪೆ ಬಿತ್ತನೆ ತೊಗರಿ ವಿತರಣೆ ಆರೋಪ

ಹಿರಿಯೂರು: ಕೃಷಿ ಇಲಾಖೆ ಮುಂಗಾರು ಹಂಗಾಮಿನಲ್ಲಿ ವಿತರಿಸಿದ್ದ ಬಿತ್ತನೆ ತೊಗರಿ ಕಳಪೆಯಾಗಿದೆ ಎಂದು ಆರೋಪಿಸಿ ಶನಿವಾರ ಕೃಷಿ ಇಲಾಖೆ ಬಳಿ ನೂರಾರು ರೈತರು...

ಪೋಲಿಯೋ ಲಸಿಕೆ ಅಭಿಯಾನ

ಚಿತ್ರದುರ್ಗ: ಹೊಳಲ್ಕೆರೆ ರಸ್ತೆ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪೊಲೀಸ್ ಡಿ.ಮಲ್ಲಿಕಾರ್ಜುನ್ ಪೋಲಿಯೋ ಅಭಿಯಾನಕ್ಕೆ ಮಗುವಿಗೆ ಲಸಿಕೆ...

ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ

ಕೊಂಡ್ಲಹಳ್ಳಿ: ಮಗು ಐದು ವರ್ಷದೊಳಗಿದ್ದರೆ ಈ ಹಿಂದೆ ಹಾಕಿಸಿದ್ದರೂ ಸಹ ಮತ್ತೊಮ್ಮೆ ಲಸಿಕೆ ಹಾಕಿಸುವುದು ಕಡ್ಡಾಯ ಎಂದು ಡಾ.ಟಿ.ಶಿವಕುಮಾರ್ ತಿಳಿಸಿದರು. ಗ್ರಾಮದಲ್ಲಿ ಭಾನುವಾರ ಆರೋಗ್ಯ...

ಆರೋಗ್ಯ ಮಕ್ಕಳು ದೇಶದ ಆಸ್ತಿ

ಚಳ್ಳಕೆರೆ: ಆರೋಗ್ಯವಂತ ಮಕ್ಕಳಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ನಗರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ...

ಬಳ್ಳಾರಿ: ಬಳ್ಳಾರಿ ನನ್ನ ತವರು ಎನ್ನುತ್ತಿದ್ದರು ಸುಷ್ಮಾ ಸ್ವರಾಜ್.​ ಗಾಲಿ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಜತೆ ಅವಿನಾಭಾವ ಸಂಬಂಧ ಹೊಂದಿದ್ದರು. ಅವರಿಬ್ಬರೂ ತಮ್ಮ ಮಕ್ಕಳೆಂದು ಹೇಳುತ್ತಿದ್ದರು. ಇಂದು ಬೆಳಗ್ಗೆಯಷ್ಟೇ ಶ್ರೀರಾಮುಲು ಅವರು ಸುಷ್ಮಾ ಸ್ವರಾಜ್​ ಅವರೊಂದಿಗೆ ಕಳೆದ ದಿನಗಳ ನೆನಪನ್ನು ಹಂಚಿಕೊಂಡಿದ್ದರು.

ಇದೀಗ ಮಾಜಿ ಸಚಿವ ಜನಾರ್ದನ ರೆಡ್ಡಿ ತಮ್ಮ ಫೇಸ್​ಬುಕ್ ಖಾತೆಯಲ್ಲಿ ಸುಷ್ಮಾ ಸ್ವರಾಜ್​ ಬಗ್ಗೆ ಬರೆದುಕೊಂಡಿದ್ದಾರೆ. ಅವರು ಭಾರತಾಂಬೆಯ ಹೆಮ್ಮೆಯ ಪುತ್ರಿ. ಭಾರತೀಯ ನಾರಿ ಸ್ವರೂಪದ ಪ್ರತಿರೂಪ ಎಂದಿದ್ದಾರೆ. ದೇಶಭಕ್ತಿ, ಸಾಮಾಜಿಕ ಕಳಕಳಿ, ಎಲ್ಲಕ್ಕಿಂತ ಹೆಚ್ಚಾಗಿ ನಂಬಿಕೆ, ಪ್ರೀತಿ, ವಿಶ್ವಾಸದ ಮತ್ತೊಂದು ಹೆಸರು ಸುಷ್ಮಾ ಸ್ವರಾಜ್​ ಎಂದು ಬರೆದಿದ್ದಾರೆ.

ನನ್ನ ಜೀವನದಲ್ಲಿ ನನಗೆ ಜನ್ಮಕೊಟ್ಟ ತಾಯಿ ರುಕ್ಮಿಣಮ್ಮ ಚೆಂಗಾರೆಡ್ಡಿ ಒಂದು ಕಡೆಯಾದರೆ, ನನ್ನ ರಾಜಕೀಯ ಬದುಕಿಗೆ ಬೆಳಕು ತೋರಿಸಿ, ನನ್ನನ್ನು ಪ್ರೀತಿ, ವಿಶ್ವಾಸದ ಮಡಿಲಲ್ಲಿ ಹಾಕಿಕೊಂಡು ಬೆಳೆಸಿದ ಇನ್ನೋರ್ವ ತಾಯಿ ಸುಷ್ಮಾ ಸ್ವರಾಜ್​. ಅವರ ಮುಖದ ತೇಜಸ್ಸೇ ಅಂಥದ್ದು. ಅವರೀಗ ನಮ್ಮನ್ನು ಅಗಲಿದ್ದಾರೆ ಎಂದರೆ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ. ಪುತ್ರನಿಗೆ ಕೊಡುವ ವಾತ್ಸಲ್ಯವನ್ನು ಅವರು ನನಗೆ ಕೊಟ್ಟಿದ್ದು. ಇನ್ನು ಅವರಿಲ್ಲ ಎಂಬುದು ನನ್ನನ್ನು ನೋವಿಗೆ ದೂಡಿದೆ ಎಂದು ಅಕ್ಷರನಮನ ಸಲ್ಲಿಸಿದ್ದಾರೆ.

ಬಳ್ಳಾರಿಯಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಕೇವಲ 18 ದಿನಗಳಲ್ಲಿ ಕನ್ನಡ ಭಾಷೆ ಕಲಿತು, ನಾವು ಮತ್ತು ನಮ್ಮ ಕುಟುಂಬ ಮಾತ್ರವಲ್ಲದೆ ಇಡೀ ಜಿಲ್ಲೆ, ರಾಜ್ಯ, ವಿಶ್ವದ ಗಮನವನ್ನು ಸೆಳೆದ ಅಪ್ರತಿಮ ಮೇಧಾವಿ ಸುಷ್ಮಾ ಸ್ವರಾಜ್. ನಮಗೆ ಕೊಟ್ಟ ಮಾತಿನಂತೆ ಸತತ 13 ವರ್ಷಗಳ ಕಾಲ ನಾವು ನಡೆಸುವ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ವರಮಹಾಲಕ್ಷ್ಮೀ ಪೂಜೆಗೆ ಆಗಮಿಸಿದ್ದು ನಮ್ಮೆಲ್ಲರ ಪೂರ್ವ ಜನ್ಮದ ಪುಣ್ಯ ಎಂದಿದ್ದಾರೆ.

1999ರ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡ ಅವರನ್ನು ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ ತೆರಳಿದ ಸಂದರ್ಭದಲ್ಲಿ ಅವರ ಸೋಲಿನ ದುಃಖವನ್ನು ಭರಿಸಲಾಗದೆ ನಾನು ಮತ್ತು ನನ್ನ ಸ್ನೇಹಿತ ಶ್ರೀರಾಮುಲು ಕಣ್ಣಲ್ಲಿ ನೀರು ತಂದುಕೊಂಡಾಗ ಒಬ್ಬ ತಾಯಿಯಂತೆ ನಮ್ಮನ್ನು ಸಮಾಧಾನಪಡಿಸಿದ ಮಹಾನ್ ತಾಯಿಯನ್ನು ನನ್ನ ಜೀವನದ ಕೊನೇ ಉಸಿರಿರುವವರೆಗೂ ಮರೆಯಲು ಸಾಧ್ಯವಿಲ್ಲ.

ನನ್ನ ಪುತ್ರಿ ಬ್ರಹ್ಮಣಿಗೆ ಸುಷ್ಮಾ ಸ್ವರಾಜ್​ ಎಂದರೆ ವಿಶೇಷ ಪ್ರೀತಿಯಾಗಿತ್ತು. ಅವರು ಪ್ರತಿ ಬಾರಿ ಬಳ್ಳಾರಿಗೆ ಆಗಮಿಸಿದಾಗಲೂ ಅವರನ್ನು ಬರಮಾಡಿಕೊಳ್ಳಲು ನನ್ನ ಪತ್ನಿ ಲಕ್ಷ್ಮೀ ಅರುಣಾ ಎರಡು ದಿನಗಳ ಮುಂಚೆಯೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಒಟ್ಟಾರೆ ಆ ತಾಯಿ ಬಳ್ಳಾರಿಗೆ ಬರುತ್ತಾರೆಂದರೆ ನಮಗೆ ದೊಡ್ಡ ಹಬ್ಬವಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.

ಏಳು ಬಾರಿ ಸಂಸದೆಯಾಗಿ, ಅತಿ ಕಿರಿಯ ವಯಸ್ಸಿನಲ್ಲಿಯೇ ಹರಿಯಾಣ ರಾಜ್ಯದ ಸಚಿವೆಯಾಗಿ, ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವೆಯಾಗಿ ಮತ್ತು ವಿರೋಧ ಪಕ್ಷದ ನಾಯಕಿಯಾಗಿ ಕೆಲಸ ಮಾಡಿದ್ದಾರೆ. ಈ ದೇಶಕ್ಕಾಗಿ ಅವರನ್ನೇ ಸಮರ್ಪಿಸಿಕೊಂಡಿದ್ದರು. ಅವರು ದೇಶಪ್ರೇಮಿ.
ವರಮಹಾಲಕ್ಷ್ಮೀ ವ್ರತದ ಈ ದಿನಗಳಲ್ಲಿ ತಾಯಿಯ ಅಗಲುವಿಕೆಯ ಈ ಸುದ್ದಿ ಕೇಳಿ ನಮಗೆ ಬರಸಿಡಿಲು ಅಪ್ಪಳಿಸಿದಂತೆ ಆಗಿದೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. 

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...