ಸಿಲಿಕಾನ್​​ ಸಿಟಿಯಲ್ಲಿ ತಾಯಂದಿರ ದಿನ ಆಚರಿಸಿದ ಬಿಬಿಎಂಪಿ, ಕೇಕ್ ಕತ್ತರಿಸಿ ಸಂಭ್ರಮ

ಬೆಂಗಳೂರು: ತಾಯಂದಿರ ದಿನಾಚರಣೆಯನ್ನು ದೇಶದೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಈ ದಿನವನ್ನು ವಿಭಿನ್ನವಾಗಿ ಏರ್ಪಡಿಸಿ ತಾಯಂದಿರ ಮಹತ್ವ ಸಾರಿದೆ.

ನಗರದ ವಸಂತಪುರದಲ್ಲಿ ತಾಯಂದಿರ ದಿನಾಚರಣೆಯನ್ನು ಬಿಬಿಎಂಪಿ ವಿಜೃಂಭಣೆಯಿಂದ ಆಚರಿಸಿತು. ಪಿಂಕ್​​ ಬೂತ್​​​​​ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ತಾಯಂದಿರ ದಿನವನ್ನು ಆಚರಿಸಲಾಗಿದೆ.

ಮಹಾಪೌರರಾದ ಗಂಗಾಂಬಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. 10 ಕೆ.ಜಿ. ಕೇಕ್​​ ಕತ್ತರಿಸುವ ಮೂಲಕ ಸಂಭ್ರಮದ ಕಾರ್ಯಕ್ರಮ ನಡೆಯಿತು.

ತಾಯಂದಿರ ದಿನಾಚರಣೆ ಪ್ರಯುಕ್ತ ಕ್ರಿಯೇಟಿವ್​​​ ಎನ್ನುವ ತಂಡದಿಂದ ಮಹಿಳೆಯರ ಬ್ಯಾಡ್ಮಿಂಟನ್​​ ಟೂರ್ನಮೆಂಟ್​​ ಆಯೋಜನೆ ಮಾಡಲಾಯಿತು. ಟೂರ್ನಿಯನ್ನು ಮೇಯರ್​ ಹಾಗೂ ವಾರ್ಡ್​ ನಂಬರ್​​​​​​​​​ 197 ಸದಸ್ಯೆ ಶೋಭಾಗೌಡ ಅವರು ಚಾಲನೆ ನೀಡಿದರು.(ದಿಗ್ವಿಜಯ ನ್ಯೂಸ್​)