ತಾಯಂದಿರು ಮಕ್ಕಳಿಗೆ ಶಿಸ್ತು, ಸನ್ನಡತೆ ಬೆಳೆಸಲು ಸಲಹೆ

ಆಲೂರು: ತಾಯಂದಿರು ತಮ್ಮ ಮಕ್ಕಳಲ್ಲಿ ಶಿಸ್ತು, ಸನ್ನಡತೆ, ಸಹನೆ ಮುಂತಾದ ಗುಣಗಳನ್ನು ಬೆಳೆಸುವುದು ಅಗತ್ಯವಾಗಿದೆ ಎಂದು ಕದಾಳು ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ರಾಜಣ್ಣ ತಿಳಿಸಿದರು.

ತಾಲೂಕಿನ ಹಂಪನಗುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಶಾರದ ಪೂಜೆ ಹಾಗೂ ಉಚಿತ ಗಣಕಯಂತ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಗುಣಮಟ್ಟದ ಉತ್ತಮ ಶಿಕ್ಷಣ ಕೊಡಿಸುವುದರಲ್ಲಿ ಶಿಕ್ಷಕರ ಪಾತ್ರದೊಂದಿಗೆ ಪಾಲಕರ ಪಾತ್ರ ಹೆಚ್ಚಾಗಿ ಬೇಕಿದೆ. ಜತೆಗೆ ಅವರ ಆದ್ಯ ಕರ್ತವ್ಯ ಆಗಿದೆ. ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ಅಂಕ ಗಳಿಕೆ ಹಾಗೂ ಸಾಮಾನ್ಯ ಜ್ಞಾನಕ್ಕೆ ಹೆಚ್ಚಿನ ಮಹತ್ವವಿದ್ದು, ಅವು ವಿದ್ಯಾರ್ಥಿಗಳ ಜೀವನ ಶೈಲಿಯನ್ನೇ ಬದಲಾಯಿಸುತ್ತಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಶಿಕ್ಷಕರಷ್ಟೇ ಪಾಲಕರಿಗೂ ಜವಾಬ್ದಾರಿ ಇದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಎಂ.ಎಚ್.ಬಿ ಪೆಟ್ರೋನೆಟ್ ಕಂಪನಿ ಬೆಂಗಳೂರು ಸಂಸ್ಥೆಯ ಹಾಸನ ವಿಭಾಗದ ವತಿಯಿಂದ ಶಾಲೆಗೆ ಸುಮಾರು 50 ಸಾವಿರ ರೂ. ಬೆಲೆ ಬಾಳುವ ಗಣಕಯಂತ್ರ ಹಾಗೂ ಪಿಠೋಪರಣವನ್ನು ಉಡುಗೊರೆಯಾಗಿ ನೀಡಲಾಯಿತು.

ಕಾರ್ಯಕ್ರಮದಲ್ಲಿ ಪೆಟ್ರೋನೆಟ್ ಕಂಪನಿ ಸಿಬ್ಬಂದಿ ಕುಮಾರಸ್ವಾಮಿ, ಶಾಲಾ ಮುಖ್ಯೋಪಾಧ್ಯಾಯ ಚಂದ್ರಪ್ಪ, ಸಹ ಶಿಕ್ಷಕರಾದ ರಾಮಚಂದ್ರ, ಚನ್ನಬಸಪ್ಪ, ಸುಂದರಾಮ್, ದೇವೀರಮ್ಮ, ವಾಸಂತಿ, ಜೀನತ್ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.

Leave a Reply

Your email address will not be published. Required fields are marked *