ಮೊದಲ ಮತ ಚಲಾಯಿಸಿದ ಮಗಳಿಗೆ ಐದು ಸಾವಿರ ನಗದು ನೀಡಿದ ತಾಯಿ

ಮಡಿಕೇರಿ: ದೇಶಾದ್ಯಂತ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಮೊದಲ ಬಾರಿಗೆ ಮತ ಚಲಾಯಿಸಿದ ಮಗಳಿಗೆ ತಾಯಿ ಭರ್ಜರಿ ಗಿಫ್ಟ್ ನೀಡಿದ್ದಾರೆ.

ವೋಟು ಮಾಡುವಂತೆ ಪ್ರೋತ್ಸಾಹಿಸಿ ತಾಯಿ ಮಗಳಿಗೆ ಉಡುಗೊರೆ ನೀಡಿದ್ದಾರೆ. ವಿದ್ಯಾರ್ಥಿನಿ ಮೈಥಿಲಿ ಮುತ್ತಮ್ಮ ಮೊದಲ ಬಾರಿಗೆ ತಮ್ಮ ಮತವನ್ನು ಚಲಾಯಿಸಿದ್ದಾರೆ.

ವೋಟು ಮಾಡಲೆಂದು ಮಂಗಳೂರಿನಿಂದ ಬಂದು ಮಡಿಕೇರಿ ನಗರಸಭೆ ಶಾಲೆಯಲ್ಲಿ ಮತ ಚಲಾಯಿಸಿದ ಮೈಥಿಲಿಗೆ ತಾಯಿ 5,000 ರೂ. ಗಿಫ್ಟ್ ನೀಡಿದ್ದಾರೆ.

Leave a Reply

Your email address will not be published. Required fields are marked *