ತಾಯಿ ಚಿತೆಗೆ ಬೆಂಕಿ ಇಡುವ ಸಮಯದಲ್ಲಿ ಹೃದಯಾಘಾತದಿಂದ ಮಗ ಸಾವು

ಕಾರವಾರ: ಮೃತ ತಾಯಿ ಚಿತೆಗೆ ಬೆಂಕಿ ಇಡುವ ಸಮಯದಲ್ಲಿ ಹೃದಯಾಘಾತದಿಂದ ಮಗನೊಬ್ಬ ಸಾವಿಗೀಡಾಗಿರುವ ಘಟನೆ ಕಾರವಾರ ತಾಲೂಕಿನ ಸಿದ್ಧರ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಮಂಜುನಾಥ್ (49) ಮೃತ. ತಾಯಿ ಸಾವಿತ್ರಿ ಕೊಳಂಬಕರ್ ಮಂಗಳವಾರ ಮೃತಪಟ್ಟಿದ್ದರು. ತಾಯಿ ಸಾವಿನಿಂದ ಆಘಾತಕ್ಕೊಳಗಾಗಿದ್ದ ಮಂಜುನಾಥ್, ಸಂಜೆ ತಾಯಿಯ ಅಂತ್ಯಕ್ರಿಯೆ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ಮೃತ ಮಂಜುನಾಥನ ದೇಹ ಮರಣೋತ್ತರ ಪರೀಕ್ಷೆಗೆ ಜಿಲ್ಲಾ ‌ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕಾರವಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *