ಶಿವಮೊಗ್ಗ: ಗುರುಬಸವಣ್ಣನವರು ವಿಶ್ವಕ್ಕೆ ನೀಡಿದ ವಿಶ್ವಮಾನ್ಯ ಸಾಧನೆಗಳನ್ನು ಪ್ರಪಂಚಕ್ಕೇ ಪಸರಿಸಿದವರು ಮಾತೆ ಮಹಾದೇವಿ ಮಾತಾಜೀ ಎಂದು ಕೈಗಾರಿಕೋದ್ಯಮಿ ಹಾಲಪ್ಪ ಹೇಳಿದರು.
ರಾಷ್ಟ್ರೀಯ ಬಸವದಳ ಟ್ರಸ್ಟ್‌ನಿಂದ ಏರ್ಪಡಿಸಿದ್ದ ಕೂಡಲ ಸಂಗಮ ಬಸವಧರ್ಮ ಪೀಠದ ದ್ವಿತೀಯ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಅವರ ಜಯಂತ್ಯುತ್ಸವ ಹಾಗೂ ಲಿಂಗೈಕ್ಯ ಸಂಸ್ಮರಣೆಯಲ್ಲಿ ಮಾತನಾಡಿದ ಅವರು, ಪೂಜ್ಯ ಮಾತೆಯವರ ಗುರು ಬಸವಣ್ಣನವರ ಕುರಿತ ಭಕ್ತಿ, ತ್ಯಾಗ ಹಾಗೂ ಅವರ ಸಮಾಜಮುಖಿ ಕಾರ್ಯಗಳು ನಮ್ಮೆಲ್ಲರಿಗೂ ಸದಾ ಆದರ್ಶವಾಗಿದೆ ಎಂದರು.
ರಾಷ್ಟ್ರೀಯ ಬಸವದಳ ಟ್ರಸ್ಟ್‌ನ ಪ್ರಮುಖರಾದ ಮೂಲಿಮನಿ, ಯೋಗೀಶ್ ನಿರ್ವಿಕಲ್ಪ, ಬಾಳಾನಂದ, ಶಾಂತಮ್ಮ, ನಾಗರತ್ನ, ಅನಸೂಯಮ್ಮ, ರತ್ನಮ್ಮ, ಲತಾ ಮುಂತಾದವರಿದ್ದರು.