Monday, 12th November 2018  

Vijayavani

ಕಳಚಿತು ರಾಜಕೀಯ ರಂಗದ ಮತ್ತೊಂದು ಕೊಂಡಿ- ಬಾರದ ಲೋಕಕ್ಕೆ ಅನಂತ್ ಕುಮಾರ್ ಪಯಣ - ಶೋಕದ ಕಡಲಲ್ಲಿ ಬಿಜೆಪಿ ಪಾಳಯ        ಅಗಲಿದ ನಾಯಕನ ಅಂತಿಮ ದರ್ಶನ- ಇನ್ನು ಕೆಲವೇ ಹೊತ್ತಲ್ಲಿ ಬೆಂಗಳೂರಿಗೆ ಪ್ರಧಾನಿ ಆಗಮನ- ಅದಮ್ಯ ಚೇತನ ನೇತಾರನ ಗುಣಗಾನ        ನಾಳೆ ವೈದಿಕ ಸಂಪ್ರದಾಯದಂತೆ ಅಂತ್ಯಸಂಸ್ಕಾರ- ಬೆಳಗ್ಗೆ 8ಗಂಟೆಯಿಂದ ಸಾರ್ವಜನಿಕ ದರ್ಶನ - ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳೋರಿಗಾಗಿ ವಿಶೇಷ ರೈಲು        ಜೈಲು ಹಕ್ಕಿಯಾಗಿರೋ ರೆಡ್ಡಿಗೆ ಸಿಗುತ್ತಾ ಜಾಮೀನು- ನಾಳೆ ನಡೆಯಲಿದೆ ಅರ್ಜಿ ವಿಚಾರಣೆ- ಪರಪ್ಪರ ಅಗ್ರಹಾರದಲ್ಲಿ ದಿನಕಳೆದ ನಾಯಕ        ಸಿಲಿಕಾನ್ ಸಿಟಿಯಲ್ಲಿ ಎದೆ ಝಲ್ಲೆನಿಸುವ ಘಟನೆ- ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು- ಡೆತ್​ನೋಟ್ ಬರೆದಿಟ್ಟು ಸೂಸೈಡ್        ಕಾರ್ತಿಕ ಮಾಸದ ಮೊದಲ ಸೋಮವಾರ- ಶಿವ ದೇವಾಲಯಗಳಲ್ಲಿ ವಿಶೇಷ ಪೂಜೆ- ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಂದಿಮೂರ್ತಿಗೆ ರುದ್ರಾಭಿಷೇಕ       
Breaking News

ತಾಯಿ ಆಸ್ತಿಗೆ ಕಣ್ಣು ಹಾಕಿದ ಮಕ್ಕಳಿಗೆ 1 ಲಕ್ಷ ರೂ.ದಂಡ!

Monday, 20.08.2018, 3:05 AM       No Comments

|ಜಗನ್ ರಮೇಶ್

ಬೆಂಗಳೂರು: ತಾತನಿಂದ ತಾಯಿಗೆ ಬಳುವಳಿಯಾಗಿ ಬಂದಿದ್ದ ಜಮೀನಿನ ಮೇಲೆ ಕಣ್ಣು ಹಾಕಿ ನ್ಯಾಯಾಲಯದ ಕದಬಡಿದಿದ್ದ ಮೂವರು ಮಕ್ಕಳಿಗೆ 1 ಲಕ್ಷ ರೂ. ದಂಡ ವಿಧಿಸಿ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ತಮ್ಮ ಅನುಮತಿ ಇಲ್ಲದೆಯೇ ಜಮೀನು ಮಾರಾಟ ಮಾಡಲಾಗಿದ್ದು, ಇದರಲ್ಲಿ ತಮಗೂ ಪಾಲು ಕೊಡಿಸಬೇಕೆಂದು ತಾಯಿ ಹಾಗೂ ಜಮೀನು ಖರೀದಿಸಿದ್ದವರ ವಿರುದ್ಧ ಮಕ್ಕಳು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಧೀಶ ರೋಣ ವಾಸುದೇವ, ಮಗಳಿಗೆ ತಂದೆಯಿಂದ ಬಳುವಳಿಯಾಗಿ ಬರುವ ಆಸ್ತಿ ಹಕ್ಕು ಆಕೆಯದ್ದೇ ಆಗಿರುತ್ತದೆ. ಮಕ್ಕಳೂ ಸೇರಿ ಬೇರ್ಯಾರಿಗೂ ಆ ಆಸ್ತಿಯ ಮೇಲೆ ಹಕ್ಕು ಇರುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿ ಅರ್ಜಿಯನ್ನು ವಜಾಗೊಳಿಸಿದ್ದಾರೆ.

ಸುಪ್ರೀಂ ತೀರ್ಪು ಉಲ್ಲೇಖ: ಹಿಂದು ಉತ್ತರಾಧಿಕಾರ ಕಾಯ್ದೆ ಪ್ರಕಾರ, ತಾಯಿ ಆಸ್ತಿ ಮೇಲೆ ಮಕ್ಕಳಿಗೆ ಅಧಿಕಾರ ಇಲ್ಲ. ವೈಯಕ್ತಿಕ ಲಾಭ ಗಳಿಸುವ ದುರುದ್ದೇಶದಿಂದ ಅರ್ಜಿ ಸಲ್ಲಿಸಲಾಗಿದೆ. ಸುಳ್ಳು ದೂರಿನಿಂದ ಕೋರ್ಟ್ ಸಮಯ ವ್ಯರ್ಥವಾಗಿದೆ ಎಂದು ಕೋರ್ಟ್ ಅರ್ಜಿ ವಜಾಗೊಳಿಸಿದೆ. ಬೋಗಸ್ ಅರ್ಜಿಗಳ ಕುರಿತು ಅಧೀನ ನ್ಯಾಯಾಲಯಗಳು ಕೂಲಂಕಷವಾಗಿ ಪರಿಶೀಲಿಸಿ, ಆರಂಭಿಕ ಹಂತದಲ್ಲೆ ವಜಾಗೊಳಿಸಬೇಕು. ಇಂಥ ಅರ್ಜಿಗಳನ್ನು ಪರಿಗಣಿಸಬಾರದು. ಅಗತ್ಯ ಬಿದ್ದಲ್ಲಿ ಪ್ರತಿವಾದಿಗಳಿಗೆ ತಗಲುವ ವ್ಯಾಜ್ಯದ ವೆಚ್ಚವನ್ನು ಅರ್ಜಿದಾರರಿಂದಲೇ ವಸೂಲಿ ಮಾಡಬೇಕು ಎಂಬ ಸುಪ್ರೀಂಕೋರ್ಟ್ ತೀರ್ಪನ್ನು ಕೋರ್ಟ್ ಆದೇಶದಲ್ಲಿ ಉಲ್ಲೇಖ ಮಾಡಿದೆ.

ಏನಿದು ಪ್ರಕರಣ?

ಬೆಂಗಳೂರು ಉತ್ತರ ತಾಲೂಕಿನ ಗಿಡದಕೋನೇನಹಳ್ಳಿ ಮುದ್ದಯ್ಯನ ಪಾಳ್ಯದ ಮರಿಹೊನ್ನಮ್ಮ ತಮ್ಮ ಹೆಸರಿನಲ್ಲಿದ್ದ ಜಮೀನನ್ನು ನಾಗರಭಾವಿಯ ಚಿಕ್ಕಣ್ಣ ಎಂಬುವವರಿಗೆ ಮಾರಾಟ ಮಾಡಿದ್ದರು. ಜಮೀನು ಖರೀದಿಸಿದ್ದ ಚಿಕ್ಕಣ್ಣ ಭೂ ಪರಿವರ್ತನೆ ಮಾಡಿ ಮಾರಾಟ ಮಾಡಿದ್ದರು. ಭೂಮಿ ಮಾರಾಟ ಪ್ರಶ್ನಿಸಿ ಮರಿಹೊನ್ನಮ್ಮ ಮಕ್ಕಳಾದ ಮಾರೇಗೌಡ, ಮುನಿರಾಜು ಹಾಗೂ ಕಮಲಾ ಕೋರ್ಟ್ ಮೆಟ್ಟಿಲೇರಿದ್ದರು. ನಿವೇಶನ ಖರೀದಿಸಿದ್ದವರ ಪೈಕಿ ಮಂಜುಳಾ ಶ್ಯಾಮ್ ಪ್ರಸಾದ್ ಹಾಗೂ ಎಚ್. ಸುಜಾತಾ ಕೋರ್ಟ್​ಗೆ ಲಿಖಿತ ಹೇಳಿಕೆ ಸಲ್ಲಿಸಿದ್ದರು. ಮಂಜುಳಾ ಪರ ವಕೀಲ ಸುರೇಶ್ ವೈ.ಎಂ., ಹಿಂದು ಉತ್ತರಾಧಿಕಾರ ಕಾಯ್ದೆ ಸೆಕ್ಷನ್ 14(1) ಪ್ರಕಾರ ಮಹಿಳೆಗೆ ತಂದೆಯಿಂದ ಬರುವ ಆಸ್ತಿ ಅಥವಾ ಮಹಿಳೆಯ ಸ್ವಯಾರ್ಜಿತ ಆಸ್ತಿ ಮೇಲಿನ ಸಂಪೂರ್ಣ ಹಕ್ಕು ಆಕೆಯದ್ದೇ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಪೂರ್ವಜರ ಆಸ್ತಿ ಎನಿಸಿಕೊಳ್ಳಬೇಕೆಂದರೆ ಅದು ತಂದೆ, ತಂದೆಯ ತಂದೆ ಅಥವಾ ತಂದೆಯ ತಾತನಿಂದ ಬಂದಿರಬೇಕು. ಆದರೆ, ಈ ಪ್ರಕರಣದಲ್ಲಿ ಜಮೀನು ಮಾಲೀಕ ವೆಂಕಟರಮಣಪ್ಪಗೆ ಗಂಡು ಮಕ್ಕಳೇ ಇರಲಿಲ್ಲ. ಅವರ ಮರಣದ ನಂತರ ಮೂವರು ಹೆಣ್ಣು ಮಕ್ಕಳ ಪಾಲಿಗೆ ಸಮನಾಗಿ ಆಸ್ತಿ ಹಂಚಿಕೆಯಾಗಿದೆ. ತಮ್ಮ ಪಾಲಿನ ಆಸ್ತಿ ಹಕ್ಕು ಮರಿಹೊನ್ನಮ್ಮ ಅವರದ್ದೇ, ಅವರು ಸ್ವ ಇಚ್ಛೆಯಿಂದಲೆ ಜಮೀನು ಮಾರಾಟ ಮಾಡಿದ್ದಾರೆಂದು ತಿಳಿಸಿದ್ದರು.

Leave a Reply

Your email address will not be published. Required fields are marked *

Back To Top