More

  ಸೊಸೆಯ ಮೃತದೇಹ ನೋಡಲು ಹೋಗುವ ವೇಳೆ ಹೃದಯಾಘಾತವಾಗಿ ಅತ್ತೆಯೂ ಸಾವು: ಮಂಡ್ಯದಲ್ಲೊಂದು ಹೃದಯ ವಿದ್ರಾವಕ ಪ್ರಕರಣ

  ನಾಗಮಂಗಲ: ಹೃದಯಾಘಾತದಿಂದ ಮೃತಪಟ್ಟ ಸೊಸೆಯ ಮೃತದೇಹ ನೋಡಲು ಹೋಗುತ್ತಿದ್ದ ಅತ್ತೆಯೂ ಮಾರ್ಗಮಧ್ಯೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
  ತಾಲೂಕಿನ ಕಾಡ ಅಂಕನಹಳ್ಳಿ ಗ್ರಾಮದ ಹುಚ್ಚಮ್ಮ(80), ಸುಶೀಲಮ್ಮ(45) ಮೃತರು. ಕಳೆದ ೩ ದಿನಗಳ ಹಿಂದೆ ಸೊಸೆ ಸುಶೀಲಮ್ಮ ಉಸಿರಾಟದ ತೊಂದರೆಯಿಂದ ಬೆಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಾಗಿ ಗುರುವಾರ ಸಂಜೆ ಡಿಸ್ಚಾರ್ಜ್ ಆಗಿ ಮನೆಗೆ ಬರುವಾಗ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ.
  ಇತ್ತ ಸೊಸೆಯ ಮೃತದೇಹ ನೋಡಲು ಹೋಗುವ ಸಂದರ್ಭ ಹುಚ್ಚಮ್ಮ ಕೂಡ ಮೃತಪಟ್ಟಿದ್ದಾರೆ. ಇಬ್ಬರ ಸಾವಿನಿಂದಾಗಿ ಮೃತರ ಕುಟುಂಬದಲ್ಲಿ ನೀರವ ಮೌನ ಆವರಿಸಿದೆ. ಅಂತೆಯೇ ಇಬ್ಬರನ್ನು ಒಟ್ಟಿಗೆ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ‌.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts