ಚಿತ್ರದುರ್ಗ: ಹೊಳಲ್ಕೆರೆ ತಾಲೂಕಿನಲ್ಲೊಂದು ಹೃದಯ ವಿದ್ರಾವಕ ಘಟನೆ ನಡೆದಿದೆ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ ತಾಯಿ ತನ್ನ 10 ತಿಂಗಳ ಮಗುವನ್ನು ನೀರಿನಲ್ಲಿ ಮುಳುಗಿಸಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಐನಳ್ಳಿ ಗ್ರಾಮದ ಆಶಾಬಾಯಿ (24) ಮೃತ ಮಹಿಳೆ. ಹೆರಿಗೆಯ ಬಳಿಕ ಅನಾರೋಗ್ಯ ಕಾಡುತ್ತಿತ್ತು. ಇದರಿಂದಲೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ತಾನು ಸತ್ತರೆ ಮಗು ಅನಾಥವಾಗುತ್ತದೆ ಎಂಬ ಕಾರಣಕ್ಕೆ ಮಗುವನ್ನು ನೀರಿನ ಟಬ್ನಲ್ಲಿ ಮುಳುಗಿಸಿ ಹತ್ಯೆ ಮಾಡಿದ ಬಳಿಕ, ತಾನೂ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ನೋಟ್ನಲ್ಲಿ ಕೂಡ, ಅನಾರೋಗ್ಯ, ನೋವಿನ ಕಾರಣದಿಂದ ಸಾಯುತ್ತಿದ್ದೇನೆ ಎಂದು ಬರೆದಿಟ್ಟಿದ್ದಾರೆ.
ಆಶಾಬಾಯಿ ಲಂಬಾಣಿಹಟ್ಟಿಯ ಹೇಮಂತ್ ಜತೆ ಎರಡು ವರ್ಷದ ಹಿಂದೆ ಪ್ರೇಮ ವಿವಾಹ ಆಗಿದ್ದರು.ಚಿಕ್ಕಜಾಜೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)