ತಾಯಿಗಾಗಿ ಸ್ಕೂಟರ್​ನಲ್ಲಿ ಯಾತ್ರೆ

ಚಿಕ್ಕಮಗಳೂರು: ತಾಯಿಯನ್ನು ಒಂದು ವರ್ಷದಿಂದ ಎಂಟು ರಾಜ್ಯ ಸುತ್ತಿಸಿ ಧಾರ್ವಿುಕ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಕಣ್ತುಂಬಿಕೊಳ್ಳಲು ಅನುವು ಮಾಡಿದ ಆಧುನಿಕ ಶ್ರವಣಕುಮಾರ ಮೈಸೂರಿನ ಡಿ.ಕೃಷ್ಣಕುಮಾರ್.

ತನ್ನ ಹಳೆಯ ಸ್ಕೂಟರ್​ನಲ್ಲೇ ಅಮ್ಮನನ್ನು ಕೂರಿಸಿಕೊಂಡು 13 ತಿಂಗಳಿನಿಂದ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಗೋವಾ ಸೇರಿ ಎಂಟು ರಾಜ್ಯಗಳನ್ನು ಸುತ್ತಿದ್ದಾರೆ. ಪ್ರತಿ ರಾಜ್ಯದಲ್ಲೂ ಒಂದರಿಂದ ಎರಡು ತಿಂಗಳ ತನಕ ಸುತ್ತಿ ಆ ರಾಜ್ಯದ ಹೆಸರಾಂತ ಸ್ಥಳಗಳನ್ನು ವೀಕ್ಷಿಸಿದ್ದಾರೆ. ದೇವಸ್ಥಾನ, ಮಠ, ಮಂದಿರಗಳಲ್ಲಿ ಊಟೋಪಚಾರ, ವಿಶ್ರಾಂತಿ ಪಡೆದಿದ್ದಾರೆ.

ನಾಲ್ಕು ವರ್ಷದ ಹಿಂದೆ ತಂದೆ ದಕ್ಷಿಣಾಮೂರ್ತಿ ಅಗಲಿದ ಬಳಿಕ ತಾಯಿ ಚೂಡಾಮಣಿ ಅವರಿಗೆ ಏಕಾಂಗಿತನ ಕಾಡದಿರಲಿ ಎಂಬ ಸಲುವಾಗಿ ಮಗ ಮೈಸೂರಿನ ಡಿ.ಕೃಷ್ಣಕುಮಾರ್ ಬ್ರಹ್ಮಚರ್ಯು ಅವಲಂಬಿಸಿ ಅವರೊಂದಿಗೆ ಉತ್ತರ ಭಾರತದತ್ತ ಕಾರಿನಲ್ಲಿ ಪ್ರವಾಸ ಕೈಗೊಂಡಿದ್ದರು. ಆನಂತರ ಕಾಪೋರೇಟ್ ವಲಯದಲ್ಲಿ ಕೆಲಸ ಮಾಡಿ ಹಣ ಸಂಪಾದಿಸಿ ಒಂದು ವರ್ಷದಿಂದ ತನ್ನ ಹಳೆಯ ಸ್ಕೂಟರ್​ನಲ್ಲಿ ಯಾತ್ರೆ ಆರಂಭಿಸಿದರು. ಶಂಕರಮಠದ ವ್ಯವಸ್ಥಾಪಕ ಯೋಗೀಶ್ ಶರ್ಮ ಸಹಕಾರದಲ್ಲಿ ಶಂಕರಮಠದಲ್ಲಿ ತಂಗಿ ಬೆಂಗಳೂರಿಗೆ ತೆರಳಿದರು.

Leave a Reply

Your email address will not be published. Required fields are marked *