ಅಳುವ ಕಂದನ ತುಟಿಗೆ ಫೆವಿಕ್ವಿಕ್​ ಹಚ್ಚಿ ಬಾಯಿಮುಚ್ಚಿಸಿದ ತಾಯಿ

ಪಟನಾ: ಇಲ್ಲೊಬ್ಬಳು ತಾಯಿ ತನ್ನ ಮಗುವಿನ ಅಳು ನಿಲ್ಲಿಸಲು ವಿಚಿತ್ರ ಮಾರ್ಗ ಕಂಡುಕೊಂಡಿದ್ದಾಳೆ. ಮಗುವಿನ ತುಟಿಗಳಿಗೆ ಫೆವಿಕ್ವಿಕ್​ ಹಾಕಿ ಅಂಟಿಸುವ ಮೂಲಕ ಅಳು ನಿಲ್ಲಿಸಿದ್ದು, ಈಗ ಆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಹಾರದ ಛಾಪ್ರಾದಲ್ಲಿ ಘಟನೆ ನಡೆದಿದ್ದು, ಮಹಿಳೆಯ ಪತಿಯೇ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತಾನು ಏನೋ ಕೆಲಸದ ನಿಮಿತ್ತ ಹೊರಗಡೆ ಹೋಗಿದ್ದೆ. ವಾಪಸ್​ ಬಂದು ಎಷ್ಟು ಹೊತ್ತಾದರೂ ಮಗು ಸುಮ್ಮನೇ ಇತ್ತು. ಹೋಗಿ ನೋಡಿದಾಗ ಅದರ ಬಾಯಿಯಿಂದ ಸಣ್ಣ ಪ್ರಮಾಣದಲ್ಲಿ ನೊರೆ ಬರುತ್ತಿತ್ತು.

ಆತಂಕಗೊಂಡು ಪತ್ನಿ ಶೋಭಾ ಬಳಿ ಕೇಳಿದೆ. ಅದಕ್ಕೆ, ಮಗು ಯಾವಾಗಲೂ ಅಳುತ್ತಿತ್ತು. ಹಾಗಾಗಿ ಅದರ ತುಟಿಗಳಿಗೆ ಫೆವಿಕ್ವಿಕ್​ ಹಚ್ಚಿದೆ. ಈಗ ಅಳುತ್ತಿಲ್ಲ ಎಂದು ಆಕೆ ಉತ್ತರಿಸಿದ್ದಾಗಿ ಮಗುವಿನ ತಂದೆ ಮಾಹಿತಿ ತಿಳಿಸಿದ್ದಾರೆ.

ಮಗುವಿಗೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.