ರಾತ್ರಿ ಬೆಳಗಾಗುವುದರೊಳಗೆ ಬಿಜೆಪಿ ಸೇರಿದ 80ಕ್ಕೂ ಹೆಚ್ಚು ಮೈತ್ರಿ ಪಕ್ಷದ ಮುಖಂಡರು!

ಚಿಕ್ಕಮಗಳೂರು: ಲೋಕಸಭೆ ಚುನಾವಣೆ ಬೆನ್ನಲ್ಲೇ ಮೂರು ಪಕ್ಷಗಳು ಬಿರುಸಿನ ಪ್ರಚಾರವನ್ನು ಕೈಗೊಂಡಿದ್ದು, ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿ ಪಕ್ಷಕ್ಕೆ ಭಾರೀ ಹೊಡೆತ ಬಿದ್ದಂತಾಗಿದೆ.

80ಕ್ಕೂ ಹೆಚ್ಚು ಮೈತ್ರಿಪಕ್ಷದ ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಬೂತ್​ಮಟ್ಟದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ತಾಲೂಕು, ಹೋಬಳಿ ಮಟ್ಟದ ಬಹುತೇಕ ಜೆಡಿಎಸ್ ಮುಖಂಡರು ಬಿಜೆಪಿ ಸೇರಿದ್ದಾರೆ.

ಶೃಂಗೇರಿ ಮಾಜಿ ಶಾಸಕ ಜೀವರಾಜ್ ಸಮ್ಮುಖದಲ್ಲಿ ಜೆಡಿಎಸ್‌ನ ಖಾಂಡ್ಯಾ ಹೋಬಳಿಯ ಸಂದೇಶ್ ಗೌಡ ಬಿಜೆಪಿ ಸೇರ್ಪಡೆಯಾಗಿದ್ದು, ಚುನಾವಣೆಗೆ ಒಂದು ದಿನ ಬಾಕೀ ಇರುವಾಗಲೇ ಜೆಡಿಎಸ್‌ಗೆ ಬಿಗ್ ಶಾಕ್ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)

4 Replies to “ರಾತ್ರಿ ಬೆಳಗಾಗುವುದರೊಳಗೆ ಬಿಜೆಪಿ ಸೇರಿದ 80ಕ್ಕೂ ಹೆಚ್ಚು ಮೈತ್ರಿ ಪಕ್ಷದ ಮುಖಂಡರು!”

  1. BJP shall be carefull with these jumpers. There is no iota of doubt that these are opportunists. Distinct possibility is, they may cheat even BJP in near future.

Leave a Reply

Your email address will not be published. Required fields are marked *