ಬೆಂಗಳೂರು : ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ ಹೊಸದಾಗಿ 50,112 ಕರೊನಾ ಪ್ರಕರಣಗಳು ವರದಿಯಾಗಿದ್ದು, 346 ಜನರು ಕರೊನಾಕ್ಕೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 4,87,288 ತಲುಪಿದೆ. ಇಂದು ರಾಜ್ಯಾದ್ಯಂತ 26,841 ಜನರು ಚಿಕಿತ್ಸೆ ಪಡೆದು ಬಿಡುಗಡೆಗೊಂಡಿದ್ದಾರೆ.
ಬೆಂಗಳೂರು ನಗರ ಎಂದಿನಂತೆ ಪ್ರಥಮ ಸ್ಥಾನದಲ್ಲಿದ್ದು, 23,106 ಪ್ರಕರಣಗಳು ವರದಿಯಾಗಿವೆ. ಒಟ್ಟು 161 ಜನರು ಸಾವಪ್ಪಿದ್ದಾರೆ. ಎರಡನೇ ಅತಿಹೆಚ್ಚು ಸೋಂಕುಗಳು ವರದಿಯಾಗಿರುವ ಜಿಲ್ಲೆ ಮೈಸೂರು – ಒಟ್ಟು 2,790 ಪ್ರಕರಣಗಳು ಮತ್ತು 10 ಸಾವು ವರದಿಯಾಗಿದೆ. ಮೂರನೇ ಸ್ಥಾನದಲ್ಲಿರುವ ತುಮಕೂರಿನಲ್ಲಿ 2,335 ಹೊಸ ಪ್ರಕರಣಗಳು ದಾಖಲಾಗಿದ್ದು, 12 ಸಾವು ಸಂಭವಿಸಿವೆ.
ವಿದೇಶಿ ನೆರವು ಬಾಕ್ಸ್ಗಳಲ್ಲಿ ಕೂತು ಜಂಕ್ ಆಗಲು ಬಂದಿಲ್ಲ : ದೆಹಲಿ ಹೈಕೋರ್ಟ್
ಕರೊನಾ ಪೀಡಿತ ತಂದೆಗೆ ನೀರು ಕುಡಿಸಲು ಸೆಣಸಾಡಿದ ಮಗಳು ! ಮನ ಕಲಕುವ ವಿಡಿಯೋ