ಸಿದ್ದಾಪುರ: ಗುರುವಾರ ರಾತ್ರಿ ಗುಡುಗು ಸಹಿತ ಸುರಿದ ಮಳೆ ಮತ್ತು ಭರ್ಜರಿ ಗಾಳಿಗೆ ತಾಲೂಕಿನ ಅನೇಕ ಕಡೆ ಮರಗಳು ಧರೆಗುರುಳಿವೆ. ಅನೇಕ ಕಡೆ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದ ಕಾರಣ 50ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಹೆಸ್ಕಾಂ ಹಾನಿ ಅನುಭವಿಸಿದೆ. ತಾಲೂಕಿನ ಗ್ರಾಮೀಣ ಪ್ರದೇಶದ ಹಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಸಿದ್ದಾಪುರದಿಂದ ಹಾರ್ಸಿಕಟ್ಟಾ ಮಾರ್ಗವಾಗಿ ಗೋಳಿಮಕ್ಕಿಗೆ ತೆರಳುವ ಮಾರ್ಗದ ಅನೇಕ ಕಡೆ ರಸ್ತೆಯ ಮೇಲೆ ಮರ ಮುರಿದುಬಿದ್ದಿತ್ತು. ಇದರಿಂದಾಗಿ ಶುಕ್ರವಾರ ಮಧ್ಯಾಹ್ನದವರೆಗೂ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಬಹುತೇಕ ಮುಖ್ಯ ರಸ್ತೆಗಳಲ್ಲಿ ಮರ ಬಿದ್ದು ಸಮಸ್ಯೆ ಉಂಟಾಗಿತ್ತು.
ಪೊಟೊ: 26ಶಿರಸಿ7: ಸಿದ್ದಾಪುರ ತಾಲೂಕಿನಲ್ಲಿ ಗುರುವಾರ ರಾತ್ರಿಯ ಗಾಳಿ ಮಳೆಗೆ ವಿದ್ಯುತ್ ತಂತಿಯ ಮೇಲೆ ಮರ ಬಿದ್ದಿರುವುದು.