ಹಂಪಿ ಕನ್ನಡ ವಿವಿ ಹಾಸ್ಟೆಲ್​ನಲ್ಲಿ ಆಹಾರ ಸೇವಿಸಿದ 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ: ಆರು ಜನರ ಸ್ಥಿತಿ ಗಂಭೀರ

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಹಾಸ್ಟೆಲ್​ನಲ್ಲಿ ಸೋಮವಾರ ರಾತ್ರಿ ಊಟ ಸೇವಿಸಿದ 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ. ಇವರ ಪೈಕಿ ಆರು ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.

ರಾಜ್ಯದ ವಿವಿಧೆಡೆಗಳಿಂದ ಎಂ.ಎ, ಪಿಎಚ್​.ಡಿ ವ್ಯಾಸಂಗಕ್ಕಾಗಿ ವಿದ್ಯಾರ್ಥಿನಿಯರು ಹಂಪಿ ಕನ್ನಡ ವಿವಿಯಲ್ಲಿ ದಾಖಲಾತಿ ಪಡೆದುಕೊಂಡಿದ್ದಾರೆ. ಇವರೆಲ್ಲರೂ ವಿವಿಯ ವಿದ್ಯಾಥಿನಿಯರ ನಿಲದಲ್ಲಿ ವಾಸವಾಗಿದ್ದಾರೆ. ಇಲ್ಲಿ ಕೊಟ್ಟ ರಾತ್ರಿಯ ಭೋಜನದ ಬಳಿಕ ಮಜ್ಜಿಗೆ ಸೇವಿಸಿದ್ದಾರೆ. ಮಜ್ಕಿಗೆ ಸೇವಿಸುತ್ತಲೇ ವಿದ್ಯಾರ್ಥಿನಿಯರಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡಿದೆ. ಅಸ್ವಸ್ಥರಾದವರನ್ನು ಕುಡಲೇ ಕಮಲಾಪುರ ಹಾಗೂ ಹೊಸಪೇಟೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ‌ ಕನ್ನಡ‌ ವಿವಿ ಕುಲಪತಿ ಡಾ.ಸ.ಚಿ.ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ವಿವಿ ಸಿಬ್ಬಂದಿ ಮತ್ತು ಬೋಧಕವರ್ಗದವರು ಉಪಸ್ಥಿತರಿದ್ದರು, ವಿದ್ಯಾರ್ಥಿನಿಯರ ಆರೈಕೆ ಮಾಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)