ಸಿನಿಮಾ

300ಕ್ಕೂ ಹೆಚ್ಚು ಯುವಕರು ಬಿಜೆಪಿಗೆ

ಚಿಕ್ಕಪೇಟೆ ವಾರ್ಡ್ 9ರ ಪ್ರಮುಖರಾದ ದಿನೇಶ್ ಕುಮಾರ್, ರಾಮಯ್ಯ ಜತೆಗೆ 300ಕ್ಕೂ ಹೆಚ್ಚಿನ ಯುವಕರು ಬಿಜೆಪಿಗೆ ಸೇರ್ಪಡೆಯಾದರು. ಗಾಂಧಿನಗರ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಮತ್ತಿತರರಿದ್ದರು.

ಬೆಂಗಳೂರು: ಗಾಂಧಿನಗರ ಕ್ಷೇತ್ರದಲ್ಲಿ ನೂರಾರು ಯುವಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಚಿಕ್ಕಪೇಟೆ ವಾರ್ಡ್ 9ರ ಪ್ರಮುಖರಾದ ದಿನೇಶ್ ಕುಮಾರ್, ರಾಮಯ್ಯ ಜತೆಗೆ 300ಕ್ಕೂ ಹೆಚ್ಚಿನ ಯುವಕರು ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು. ಈ ಎಲ್ಲರನ್ನೂ ಗಾಂಧಿನಗರ ಬಿಜೆಪಿ ಅಭ್ಯರ್ಥಿ ಸಪ್ತಗಿರಿಗೌಡ ಆತ್ಮೀಯವಾಗಿ ಬರಮಾಡಿಕೊಂಡರು. ಬಿಬಿಎಂಪಿ ಮಾಜಿ ಸದಸ್ಯ ಬಿಟಿಎಸ್ ನಾಗರಾಜ್, ಬೆಂಗಳೂರು ಮಹಾನಗರ ಒಬಿಸಿ ಮೋರ್ಚಾದ ಅಧ್ಯಕ್ಷ ಮನೋಜ್ ರಾವ್ ಸಿಂಧಿ ಇನ್ನಿತರರು ಹಾಜರಿದ್ದರು.

ಇನ್ನು ಸಪ್ತಗಿರಿಗೌಡ ಭಾನುವಾರ ಕ್ಷೇತ್ರದ ವಿವಿಧೆಡೆ ಹಲವಾರು ಮುಖಂಡರು ಹಾಗೂ ಯುವಕರ ಜತೆಗೂಡಿ ಬಿರುಸಿನ ಮತಯಾಚನೆ ಮಾಡಿದರು. ಗಿರಿಜಾ ಗಾರ್ಡನ್, ಮಂತ್ರಿ ಸ್ಟೋರ್ ಮುಂತಾದೆಡೆ ಮತಯಾಚಿಸಿ, ಈ ಬಾರಿ ತಮಗೆ ಅವಕಾಶ ನೀಡಿದರೆ ಜನರ ಆಶೋತ್ತರ ಈಡೇರಿಸಿಕೊಡುವ ಆಶ್ವಾಸನೆ ನೀಡಿದರು. ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್, ಗುಜರಾತ್ ಲೋಕಸಭಾ ಸದಸ್ಯ ಸುನಿಲ್ ಸಿಂಘ್ವಿ, ಬಿಬಿಎಂಪಿ ಮಾಜಿ ಸದಸ್ಯ ಬಿ.ಟಿ.ಎಸ್. ನಾಗರಾಜ್, ಪಳನಿ ಹಾಗೂ ಪಕ್ಷದ ಅನೇಕರು ಸಪ್ತಗಿರಿಗೌಡ ಅವರೊಂದಿಗೆ ಕೈಜೋಡಿಸಿ ಬಿಜೆಪಿ ಅಭ್ಯರ್ಥಿಯನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

Latest Posts

ಲೈಫ್‌ಸ್ಟೈಲ್