ಬನ್ನೇರುಘಟ್ಟ ಕಾಡಂಚಲ್ಲಿ 30ಕ್ಕೂ ಹೆಚ್ಚು ಕಾಡಾನೆಗಳು!; ಸುತ್ತಮುತ್ತಲ ನಿವಾಸಿಗರಲ್ಲಿ ಭಾರಿ ಆತಂಕ..

ಆನೇಕಲ್​: ಒಂಟಿ ಸಲಗ ಅಥವಾ ಬೆರಳೆಣಿಕೆಯ ಆನೆಗಳು ಕಾಣಿಸಿಕೊಳ್ಳುತ್ತಿದ್ದ ಆನೇಕಲ್​ ಸುತ್ತಮುತ್ತಲ ಪ್ರದೇಶದಲ್ಲಿ ಇದೇ ಮೊದಲ ಸಲ 30ಕ್ಕೂ ಹೆಚ್ಚು ಕಾಡಾನೆಗಳು ಒಟ್ಟಿಗೇ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ಆನೇಕಲ್-ಕನಕಪುರ ರಸ್ತೆಯ ತಟ್ಟೆಕೆರೆ ಬಳಿ ಆನೆಗಳ ದೊಡ್ಡ ಹಿಂಡು ರಸ್ತೆ ದಾಟಿರುವ ವಿಡಿಯೋ ದಾರಿಹೋಕರ ಮೊಬೈಲ್​ಫೋನ್​ನಲ್ಲಿ ಸೆರೆಯಾಗಿದ್ದು, ಬಿರುಸಾಗಿ ಕಾಡಾನೆಗಳು ಸಾಗುತ್ತಿರುವ ದೃಶ್ಯ ನಿಜಕ್ಕೂ ಮೈನವಿರೇಳಿಸುವಂತಿದೆ. ಹೀಗೆ ಕಾಡಾನೆಗಳು ಸಾಗುತ್ತಿರುವಾಗ ವಾಹನ ನಿಲ್ಲಿಸಿಕೊಂಡು ವಿಡಿಯೋ ಮಾಡಿಕೊಂಡಿರುವ ಸವಾರರು ಅದನ್ನು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ‘ನಾಯಿಗೆ ರಕ್ತ ಬೇಕಾಗಿದೆ!’; … Continue reading ಬನ್ನೇರುಘಟ್ಟ ಕಾಡಂಚಲ್ಲಿ 30ಕ್ಕೂ ಹೆಚ್ಚು ಕಾಡಾನೆಗಳು!; ಸುತ್ತಮುತ್ತಲ ನಿವಾಸಿಗರಲ್ಲಿ ಭಾರಿ ಆತಂಕ..