More

    20ಕ್ಕೂ ಅಧಿಕ ಮನೆಗಳ ಕುಸಿತ

    ರಬಕವಿ/ಬನಹಟ್ಟಿ : ತಾಲೂಕಿನಾದ್ಯಂತ ಸತತವಾಗಿ ಸುರಿಯುತ್ತಿರುವ ಮಳೆಗೆ ಮಣ್ಣಿನ ಮನೆಗಳು ಕುಸಿಯುತ್ತಿದ್ದು ಜನರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.
    ಹಾನಿಗೊಳಗಾದ ಮನೆಗಳನ್ನು ಶುಕ್ರವಾರ ಶಾಸಕ ಸಿದ್ದು ಸವದಿ, ತಹಸೀಲ್ದಾರ್ ಎಸ್.ಬಿ. ಇಂಗಳೆ ಖುದ್ದಾಗಿ ಪರಿಶೀಲಿಸಿ ಸುದ್ದಿಗಾರರ ಜತೆ ಮಾತನಾಡಿ, ಹಾನಿಗೊಳಗಾದ ಮನೆಗಳ ಸರ್ವೇ ಕಾರ್ಯ ಮಾಡಿಸಿ ಸೂಕ್ತ ದಾಖಲೆಗಳೊಂದಿಗೆ ಸರ್ಕಾರಕ್ಕೆ ಮಾಹಿತಿ ಒದಗಿಸಲಾಗುವುದು. ಕಳೆದ ಅ.9 ರಿಂದ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ಥವಾಗಿದ್ದು ತಾಲೂಕು ವ್ಯಾಪ್ತಿಯಲ್ಲಿ 20ಕ್ಕೂ ಅಧಿಕ ಮನೆಗಳು ಬಿದ್ದಿರುವ ವರದಿಯಾಗಿದೆ ಎಂದರು.

    ಮಳೆ ಹಾನಿಗೆ ಮನೆ ಕುಸಿತ ಅಥವಾ ಸಮಸ್ಯೆ ಎದುರಾದಲ್ಲಿ ತಕ್ಷಣವೇ ಕಂದಾಯ ಇಲಾಖೆಯ ಸಹಾಯವಾಣಿ 08353-230555 ನಂಬರ್‌ಗೆ ಸಂಪರ್ಕಿಸಬೇಕು ಎಂದು ತಹಸೀಲ್ದಾರ್ ತಿಳಿಸಿದರು.

    ಸೂರಿಲ್ಲದೆ ಪರದಾಡುತ್ತಿರುವ ಕುಟುಂಬಗಳಿಗೆ ಶೀಘ್ರ ಪರಿಹಾರ ಒದಗಿಸುವ ಜತೆಗೆ ಭಾಗಶಃ ಬಿದ್ದಿರುವ ಮನೆಗಳ ಸರ್ವೇ ಕಾರ್ಯ ನಡೆಸಿ ತ್ವರಿತ ಪರಿಹಾರ ಒದಗಬೇಕು ಎಂದು ಮನೆ ಕಳೆದುಕೊಂಡ ಸಂತ್ರಸ್ತರು ಒತ್ತಾಯಿಸಿದರು.

    ಶಾಸಕರು, ಜಿಲ್ಲಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ಪ್ರತ್ಯೇಕ ಸಭೆಗಳು ನಡೆದಿವೆ. ಆಯಾ ಗ್ರಾಮ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಹಳೆಯ ಮತ್ತು ಜಂತಿ ಮನೆಗಳು ಬೀಳುವ ಲಕ್ಷಣಗಳನ್ನು ಹೊಂದಿರುವ ಮನೆಗಳಲ್ಲಿ ಜನರು ಸಾಧ್ಯವಾದಷ್ಟು ಮಲಗಬಾರದು. ಹಾನಿಗೊಳಗಾದ ಮನೆಗಳಿಗೆ ಸರ್ಕಾರದ ಆದೇಶದಂತೆ ಸೂಕ್ತ ಪರಿಹಾರ ನೀಡಲಾಗುವುದು.
    ಎಸ್.ಬಿ. ಇಂಗಳೆ, ತಹಸೀಲ್ದಾರ್, ರಬಕವಿ-ಬನಹಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts