More

    ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್​ ಕೊರತೆ: 20ಕ್ಕೂ ಹೆಚ್ಚು ಕರೊನಾ ರೋಗಿಗಳ ಸಾವು

    ಚಾಮರಾಜನಗರ: ಆಮ್ಲಜನಕ ಸಿಗದೇ ಉಸಿರಾಟದ ಸಮಸ್ಯೆ ಉಂಟಾಗಿ 20ಕ್ಕೂ ಹೆಚ್ಚು ಕರೊನಾ ರೋಗಿಗಳು ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.

    ಭಾನುವಾರ ರಾತ್ರಿ 16 ಮಂದಿ ಮತ್ತು ಇಂದು ಬೆಳಗಿನ ಜಾವ 4ಕ್ಕೂ ಹೆಚ್ಚು ಜನರು ಆಕ್ಸಿಜನ್ ಸಿಗದೆ ನರಳಾಡಿ ಪ್ರಾಣಬಿಟ್ಟಿದ್ದಾರೆ. ಆಕ್ಸಿಜನ್ ಸಿಲಿಂಡರ್​ಗಳು ಬರುವಷ್ಟರಲ್ಲಿ ಕರೊನಾ ರೋಗಿಗಳ ಕೊನೆಯುಸಿರೆಳೆದಿದ್ದಾರೆ.

    ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲಾಸ್ಪತ್ರೆಯ ಮುಂದೆ ದೌಡಾಯಿಸಿದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಸ್ಪತ್ರೆಯ ಮುಂಭಾಗ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.

    ಚಾಮರಾಜನಗರದಲ್ಲಿ ಆಕ್ಸಿಜನ್​ ಸಿಗದೆ ಕರೊನಾ ರೋಗಿಗಳ ಸಾವು: ಮೈಸೂರು ಡಿಸಿ ವಿರುದ್ಧ ಗಂಭೀರ ಆರೋಪ

    ಲಸಿಕೆಗೆ ಹೆದರಿ ಪೋಡು ಬಿಟ್ಟು ಕಾಡಿಗೆ ಗಿರಿಜನರ ಓಟ!; ತಪ್ಪು ತಿಳಿವಳಿಕೆಯಿಂದ ಇಂಜೆಕ್ಷನ್ ಪಡೆಯಲು ಹಿಂದೇಟು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts