More

    17 ಕೋಟಿಗೂ ಹೆಚ್ಚು ಪ್ಯಾನ್​ ಕಾರ್ಡ್​ಗಳು ತಮ್ಮ ಮೌಲ್ಯವನ್ನೇ ಕಳೆದುಕೊಳ್ಳಲಿವೆ: ಮಾರ್ಚ್​ 31 ಅದರ ಕೊನೆ ದಿನ

    ನವದೆಹಲಿ: ಮಾರ್ಚ್​ 31ರಂದು ಸುಮಾರು 17.58 ಕೋಟಿ ಭಾರತೀಯರ ಪ್ಯಾನ್​ ಕಾರ್ಡ್​ಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳಲಿವೆ. ಪ್ಯಾನ್​ ಕಾರ್ಡ್​ಗಳಿಗೆ ಆಧಾರ್​ ಲಿಂಕ್​ ಮಾಡಲು ಸಾಕಷ್ಟು ಸಮಯ ನೀಡಲಾಗಿದ್ದು ಮಾರ್ಚ್​ 31ರೊಳಗೆ ಲಿಂಕ್​ ಮಾಡದಿದ್ದರೆ ಅವುಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳಲಿವೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

    2018ರಲ್ಲಿ ಸುಪ್ರೀಂ ಕೋರ್ಟ್​ ಪ್ಯಾನ್​ ಕಾರ್ಡ್​ಗಳಿಗೆ ಆಧಾರ್​ ಲಿಂಕ್​ ಮಾಡುವುದು ಕಡ್ಡಾಯ ಎಂದು ಆದೇಶ ಹೊರಡಿಸಿತ್ತು. ಪ್ಯಾನ್​ಗೆ ಆಧಾರ್​ ಲಿಂಕ್​ ಮಾಡದಿದ್ದರೆ ಆದಾಯ ತೆರಿಗೆ ಇಲಾಖೆಯ ಯಾವುದೇ ಸೇವೆಗಳಿಗೆ ನಾಗರಿಕರು ಅರ್ಹರಾಗುವುದಿಲ್ಲ ಎಂದು ಹೇಳಲಾಗಿತ್ತು. ಅಂದಿನಿಂದ ಅನೇಕ ಬಾರಿ ಪ್ಯಾನ್​ಗೆ ಆಧಾರ್​ ಲಿಂಕ್​ ಮಾಡಲು ಕೊನೆಯ ದಿನವನ್ನು ನೀಡಿ ಅದನ್ನು ವಿಸ್ತರಿಸುತ್ತಾ ಬರಲಾಗಿದೆ. ಹಾಗೆ ವಿಸ್ತರಣೆ ಮಾಡಿ 2020ರ ಮಾರ್ಚ್​ 31ರೊಳಗೆ ಲಿಂಕ್​ ಮಾಡಬೇಕು ಎಂದು ಕೊನೆಯ ದಿನಾಂಕವನ್ನು ಪ್ರಕಟಿಸಿ ತಿಂಗಳುಗಳು ಉರುಳಿದೆ. ಆದರೂ ಅನೇಕರು ಲಿಂಕ್​ ಮಾಡಿಲ್ಲ ಎನ್ನಲಾಗಿದೆ.

    ಭಾರತದಲ್ಲಿ ಈವರೆಗೆ ಸುಮಾರು 30.75 ನಾಗರಿಕರು ತಮ್ಮ ಪ್ಯಾನ್​ ಕಾರ್ಡ್​ಗಳಿಗೆ ಆಧಾರ್​ ಲಿಂಕ್​ ಮಾಡಿದ್ದಾರೆ. ಇನ್ನೂ 17.58 ಕೋಟಿ ಜನರು ಆಧಾರ್​ ಲಿಂಕ್​ ಮಾಡುವುದು ಬಾಕಿ ಇದೆ.

    ಮಾರ್ಚ್​ 31ರ ನಂತರ ಆಧಾರ್​ ಲಿಂಕ್​ ಆಗದ ಪ್ಯಾನ್​ ಕಾರ್ಡ್​ಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳಲಿದ್ದು, ಪ್ಯಾನ್ ಕಾರ್ಡ್​ ಹೊಂದಿರುವವನು ಆಧಾರ್​ ಲಿಂಕ್​ ಮಾಡಿದ ನಂತರ ಅದರ ಮೌಲ್ಯ ವಾಪಾಸಾಗುವುದು ಎಂದು ತಿಳಿಸಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts