ಬೆಂಗಳೂರು: ರಾಜ್ಯದಲ್ಲಿ ಕರೊನಾ ಪರಿಸ್ಥಿತಿ ತೀರ ಗಂಭೀರವಾಗುತ್ತಿದೆ. ನಿನ್ನೆಯಿಂದ 24 ಗಂಟೆಯಲ್ಲಿ ಪತ್ತೆಯಾಗುವ ಸೋಂಕಿತರ ಸಂಖ್ಯೆ ನೋಡಿದರೆ ಆತಂಕ ಹುಟ್ಟದೆ ಇರದು.
ಕಳೆದ 24ಗಂಟೆಯಲ್ಲಿ ಬರೋಬ್ಬರಿ 1267 ಮಂದಿಯಲ್ಲಿ ಕರೊನಾ ದೃಢಪಟ್ಟಿದ್ದು, ಬೆಂಗಳೂರು ನಗರವೊಂದರಲ್ಲೇ 783 ಹೊಸ ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಆದರೆ ಇಂದು ಕೇವಲ 220 ಸೋಂಕಿತರಷ್ಟೇ ಗುಣಮುಖರಾಗಿ, ಡಿಸ್ಚಾರ್ಜ್ ಆಗಿದ್ದಾರೆ. 16 ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13, 190ಕ್ಕೆ ಏರಿದ್ದು, ಸಕ್ರಿಯ ಪ್ರಕರಣಗಳು 5472. ಸೋಂಕಿನಿಂದ ಚೇತರಿಸಿಕೊಂಡವರು ಇಲ್ಲಿಯವರೆಗೆ ಒಟ್ಟು 7507 ಮಂದಿ. ಮೃತಪಟ್ಟವರ ಸಂಖ್ಯೆ 207 ಆಗಿದೆ.
ಹಾಗೇ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ ನಾಲ್ವರು, ದಕ್ಷಿಣ ಕನ್ನಡದಲ್ಲಿ 3, ಧಾರವಾಡ ಮತ್ತು ಹಾಸನದಲ್ಲಿ ತಲಾ ಒಬ್ಬರು, ಬಾಗಲಕೋಟೆಯಲ್ಲಿ ಇಬ್ಬರು, ತುಮಕೂರಲ್ಲಿ ಇಬ್ಬರು, ಮೈಸೂರು, ಬಳ್ಳಾರಿ, ಕಲಬುರಗಿಯಲ್ಲಿ ತಲಾ ಒಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ.
ಯಾವ ಜಿಲ್ಲೆಯಲ್ಲಿ ಎಷ್ಟು…?
ಬೆಂಗಳೂರು-783
ದಕ್ಷಿಣ ಕನ್ನಡ-97
ಬಳ್ಳಾರಿ-71
ಉಡುಪಿ-40
ಕಲಬುರಗಿ-34
ಹಾಸನ-31
ಗದಗ-30
ಬೆಂಗಳೂರು ಗ್ರಾಮಾಂತರ-27
ಧಾರವಾಡ-18
ಮೈಸೂರು-18
ಬಾಗಲಕೋಟೆ-17
ಉತ್ತರ ಕನ್ನಡ-14
ಹಾವೇರಿ-12
ಕೋಲಾರ-11
ಬೆಳಗಾವಿ-8
ಬೀದರ್ ಮತ್ತು ಚಿತ್ರದುರ್ಗ ತಲಾ 7
ರಾಯಚೂರು, ಮಂಡ್ಯ, ದಾವಣಗೆರೆ-ತಲಾ 6
ವಿಜಯಪುರ-5
ಶಿವಮೊಗ್ಗ-4
ಚಿಕ್ಕಬಳ್ಳಾಪುರ, ಕೊಪ್ಪಳ, ಚಿಕ್ಕಮಗಳೂರು, ಕೊಡಗು-ತಲಾ 3
ತುಮಕೂರು-2
ಯಾದಗಿರಿ-1