More

    15 ಲಕ್ಷ ರೂ. ಕ್ಯಾಶ್ ಪ್ರೈಜ್ ಕೊಡುತ್ತೇವೆಂದು 1.64 ಲಕ್ಷ ರೂ. ಮೋಸ

    ಹಾವೇರಿ: 15 ಲಕ್ಷ ರೂ. ಕ್ಯಾಶ್ ಪ್ರೈಜ್ ಬಂದಿದೆ ಎಂದು ನಂಬಿಸಿ ಅದನ್ನು ನೀಡಲು ಪ್ರೋಸೆಸಿಂಗ್ ಫೀಸ್ ಆಗಿ 1.64 ಲಕ್ಷ ರೂ. ಹಾಕಿಸಿಕೊಂಡು ರೈತರೊಬ್ಬರಿಗೆ ಮೋಸ ಮಾಡಿದ ಕುರಿತು ಇಲ್ಲಿಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
    ಹಾನಗಲ್ಲ ತಾಲೂಕಿನ ಉಪ್ಪುಣಸಿ ಗ್ರಾಮದ ದ್ಯಾವಪ್ಪ ಸೋಮಯ್ಯ ಈಳಿಗೇರ (55) ಮೋಸ ಹೋದ ರೈತ.
    ಇವರಿಗೆ ಮ್ಯಾಷೋ ಕಂಪನಿ ಮ್ಯಾನೇಜರ್ ಎಂದು ಫೋನ್ ಮಾಡಿದ ವ್ಯಕ್ತಿ ನಿಮಗೆ 15 ಲಕ್ಷ ರೂ. ಕ್ಯಾಶ್ ಪ್ರೈಜ್ ಬಂದಿದೆ. ಅದನ್ನು ನೀಡಲು ಪ್ರೋಸೆಸಿಂಗ್ ಫೀಸ್, ಇನಕಮ್ ಟ್ಯಾಕ್ಸ್ ಚಾರ್ಜಸ್ ಹಾಗೂ ಜಿಎಸ್‌ಟಿ ಸೇರಿ 1.64 ಲಕ್ಷ ರೂ. ತುಂಬಬೇಕು ಎಂದು ಹೇಳಿದ್ದಾನೆ. ದ್ಯಾವಪ್ಪ ಪೋನ್‌ಪೇ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ನಂತರ ದ್ಯಾವಪ್ಪನಿಗೆ ಮರಳಿ ಯಾವುದೇ ಹಣ ನೀಡದೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts