More

  ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ; ಕ್ರೋಧಿನಾಮ ಸಂವತ್ಸರದಲ್ಲಿ ಒಳಿತಿಗಿಂತ ಕೆಡಕು ಹೆಚ್ಚು

  ಧಾರವಾಡ: ಭಾರತೀಯ ಪರಂಪರೆಯಲ್ಲಿ ಕ್ರೋಽನಾಮ ಸಂವತ್ಸರ ನಡೆದಿದೆ. ಇದರ ಹೆಸರಿನಲ್ಲೇ ಕ್ರೊಧ ಇದೆ. ಈ ಸಂವತ್ಸರ ಒಳಿತಿಗಿಂತ ಕೆಡಕನ್ನು ಹೆಚ್ಚು ಮಾಡುತ್ತದೆ. ಭೂಮಿ, ಅಗ್ನಿ, ಆಕಾಶ, ವಾಯು, ಜಲ ಐದರಿಂದಲೂ ತೊಂದರೆ ಇದೆ. ಆಕಾಶ ತತ್ವ ಏನು ಎಂದು ಶ್ರಾವಣದಲ್ಲಿ ಹೇಳುತ್ತೇನೆ ಎಂದು ಕೋಡಿಮಠದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.
  ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಅವರ ಮನೆಗೆ ಮಂಗಳವಾರ ಭೇಟಿ ನೀಡಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.
  ಸುರಿದಲ್ಲೇ ಮಳೆ ಸುರಿಯುತ್ತದೆ. ಬೆಳೆ ಬಂದಲ್ಲಿ ಬಂತು, ಹೋದಲ್ಲಿ ಹೋಯಿತು. ಭೂಕುಸಿತ, ಭೂಕಂಪ, ಜಲಪ್ರಳಯ ಲಕ್ಷಣ ಇದೆ. ವಿಪರೀತ ಗಾಳಿಯಿಂದಲೂ ತೊಂದರೆ ಆಗಲಿದೆ. ಆದರೂ ಸುಭೀಕ್ಷೆಗೆ ಏನೂ ತೊಂದರೆ ಇಲ್ಲ ಎಂದರು.
  ಅತAತ್ರದಲ್ಲೇ ರಾಷ್ಟçದಲ್ಲಿ ಅಽಕಾರಕ್ಕಾಗಿ ಕೂಡಿದ್ದಾರೆ. ಇನ್ನೂ ಅಂಗಡಿ ಒಪನ್ ಆಗಿಲ್ಲ, ವ್ಯಾಪಾರ ಶುರುವಾಗಲಿ. ರಾಷ್ಟç ರಾಜಕಾರಣದ ಶ್ರಾವಣದಲ್ಲಿ ಭವಿಷ್ಯ ಹೇಳುವೆ. ಈಗಲೇ ಅಶುಭ ನುಡಿಯಬಾರದು. ಶುಭವೋ, ಅಶುಭವೋ ಎಂದು ಶ್ರಾವಣದಲ್ಲಿ ಹೇಳುವೆ ಎಂದರು.
  ಮಹಾಭಾರತದಲ್ಲಿ ಅಭಿಮನ್ಯುವಿನ ಬಿಲ್ಲಿನ ದಾರವನ್ನು ಕರ್ಣನಿಂದ ಕತ್ತರಿಸಿದರು. ದುರ್ಯೋಧನನ ತೊಡೆ ಒಡೆಸಿದ ಕೃಷ್ಣ ಈಗ ಇಲ್ಲ. ಹೀಗಾಗಿ ದುರ್ಯೋಧನ ಗೆಲ್ಲುತ್ತಾನೆ ಎಂದು ಮಾರ್ಮಿಕವಾಗಿ ನುಡಿದರು.
  ಜಗತ್ತಿನಲ್ಲಿ ೨- ೩ ಪ್ರಧಾನಿಗಳ ಸಾವು ಆಗಲಿದೆ. ದೊಡ್ಡವರಿಗೆ ನೋವು, ತಾಪ, ದುಃಖ ಆಗಲಿದೆ. ಕರೆಯದೆ ಬರುವವನು ಕೋಪ, ಬರೆಯದೇ ಓದುವವನು ಕಣ್ಣು, ಬರಗಾಲಿನಲ್ಲಿ ನಡೆಯುವವನು ಮನಸ್ಸು. ಈ ಮೂರೂ ನಿಯಂತ್ರಣದಲ್ಲಿಡಬೇಕು. ಜನ ದುಡ್ಡು, ಅಽಕಾರ ಮುಖ್ಯ ಎಂದು ಹೊರಟಿದ್ದಾರೆ. ಅಧಃಪತನಕ್ಕೆ ಇವೇ ಕಾರಣ ಎಂದರು.

  See also  ಎಲ್ಲೆಡೆ ಸೌಹಾರ್ದತೆ ನೆಲೆಯೂರಲಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts