ಸೇನೆಗೆ ಇನ್ನಷ್ಟು ಶಸ್ತ್ರಾಸ್ತ್ರ ಬಲ

ನವದೆಹಲಿ: ಸೇನಾಪಡೆಗಳಿಗೆ ಶಸ್ತ್ರಾಸ್ತ್ರ ಬಲ ತುಂಬಲು ಮುಂದಾಗಿರುವ ರಕ್ಷಣಾ ಸಚಿವಾಲಯ, ಬ್ರಹ್ಮೋಸ್ ಸಹಿತ -ಠಿ; 3 ಸಾವಿರ ಕೋಟಿ ಮೊತ್ತದ ವಿವಿಧ ಭದ್ರತಾ ಸಾಮಗ್ರಿ ಖರೀದಿಸಲು ನಿರ್ಧರಿಸಿದೆ. ಇದರಲ್ಲಿ ಅತಿವೇಗದ ಬ್ರಹ್ಮೋಸ್ ಕ್ಷಿಪಣಿ, ಆರ್ಮಡ್ ರಿಕವರಿ ವೆಹಿಕಲ್ (ಎಆರ್​ವಿ) ಕೂಡ ಸೇರಿದೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯ ರಕ್ಷಣಾ ಸಾಮಗ್ರಿ ಸ್ವಾಧೀನ ಮಂಡಳಿ (ಡಿಎಸಿ) ಖರೀದಿಗೆ ಒಪ್ಪಿಗೆ ನೀಡಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ದೇಶೀಯ ತಂತ್ರಜ್ಞಾನದಲ್ಲಿ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್ ಕ್ಷಿಪಣಿಯನ್ನು -ಠಿ; 6,977 ಕೋಟಿ ವೆಚ್ಚದಲ್ಲಿ ಖರೀದಿಸಲಾಗುತ್ತಿರುವ 2 ಯುದ್ಧ ನೌಕೆಗಳಿಗೆ ಅಳವಡಿಸ ಲಾಗುತ್ತದೆ. ಭೂಸೇನೆಯ ಪ್ರಮುಖ ಯುದ್ಧ ಟ್ಯಾಂಕ್ ಅರ್ಜುನ್​ಗೆ ಎಆರ್​ವಿಗಳನ್ನು ಜೋಡಿಸಲಾಗುತ್ತದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಅಭಿವೃದ್ಧಿ ಪಡಿಸಿರುವ ಈ ಎಆರ್​ವಿಗಳನ್ನು ಸರ್ಕಾರಿ ಸ್ವಾಮ್ಯದ ಬಿಇಎಂಎಲ್ ಸಂಸ್ಥೆ ನಿರ್ವಿುಸಿದೆ.

ಬ್ರಹ್ಮೋಸ್ ವಿಶೇಷ

ಬ್ರಹ್ಮೋಸ್ ಸರಣಿಯಲ್ಲಿ ಶಬ್ದಕ್ಕಿಂತ ವೇಗವಾಗಿ ಚಲಿಸುವ ಕ್ಷಿಪಣಿ ಮಹತ್ವದ್ದಾಗಿದೆ. ಇದನ್ನು ಯುದ್ಧ ನೌಕೆ, ಜಲಾಂತರ್ಗಾಮಿ, ವಿಮಾನ ಮತು ಭೂಮೇಲ್ಮೈನಿಂದಲೂ ಹಾರಿಸಲು ಅನುಕೂಲವಾಗುವಂತೆ ಸಿದ್ಧಪಡಿಸಲಾಗಿದೆ. 3,400ರಿಂದ 3,700 ಕಿ.ಮೀ. ಗುರಿಯನ್ನು ಭೇದಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಗಂಟೆಗೆ 2,100ರಿಂದ 2,300 ಕಿ.ಮಿ.ವೇಗದಲ್ಲಿ ಮುನ್ನುಗ್ಗುತ್ತದೆ. ಇಂತಹ ಒಂದು ಕ್ಷಿಪಣಿಗೆ ಅಂದಾಜು -ಠಿ; 19 ಕೋಟಿ ವೆಚ್ಚ ತಗುಲುತ್ತದೆ.