ಬೀಜ ಸಿಗದಿದ್ದಕ್ಕೆ ರೈತರ ಆಕ್ರೋಶ

ಮೋರಟಗಿ: ಗ್ರಾಮದಲ್ಲಿನ ಕೃಷಿ ಕೇಂದ್ರದ ಹೆಚ್ಚುವರಿ ಬೀಜ ಮಾರಾಟ ಕೇಂದ್ರದಲ್ಲಿ ತೊಗರಿ ಬೀಜ ದಾಸ್ತಾನು ಮುಗಿದ ಹಿನ್ನೆಲೆ ಬೀಜ ಸಿಗದೆ ಇರುವ ರೈತರು ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕಿನ ಕಕ್ಕಳಮೇಲಿ ಗ್ರಾಮದ ರೈತ ಮಲ್ಲಪ್ಪ ಡಿದ್ದಿಮನಿ ಮಾತನಾಡಿ, ಪ್ರಾರಂಭದ ಮೊದಲದಿನ ರೈತರಿಗೆ ತೊಗರಿ ಬೀಜ ಬಿತ್ತನೆ ಮಾಡಿದರು. ನಂತರ 3 ದಿನಗಳಿಂದ ಬಂದಾಗಿದೆ. ನಾವು ಎಲ್ಲ ಕೆಲಸ ಬಿಟ್ಟು 200 ರೂ. ಖರ್ಚು ಮಾಡಿ ತೊಗರಿ ಬೀಜ ಕೋಡತಾರಂತ 3 ದಿನಗಳಿಂದ ಕಾಯುತ್ತಿದ್ದೇವೆ. ಆದರೆ ಕೇಂದ್ರದ ಬಾಗಿಲೇ ತೆಗೆದಿಲ್ಲ. ಅಧಿಕಾರಿಗಳ ಮೊಬೈಲಿಗೆ ೆನ್ ಮಾಡಿದರೆ ಸ್ವಿಚ್ ಆಪ್ ಅಂತ ಬರುತ್ತದೆ. ರೈತರು ಏನು ಮಾಡಬೇಕು? ಎಂದು ಪ್ರಶ್ನಿಸಿದರು.
ಪ್ರಾರಂಭದಲ್ಲಿ ರೈತರು ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎಂದು ಬಣ್ಣದ ಮಾತುಗಳನ್ನು ಆಡಿದ ಅಧಿಕಾರಿ ಇಲ್ಲಿಗೆ ಬಂದು ಬೀಜಗಳು ಬಂದಿಲ್ಲ ಎಂದು ಸೌಜನ್ಯಕ್ಕಾದರೂ ಹೇಳಬೇಕು. ಈಗ ಹೊಲ ಹಸಿಯಾಗಿದೆ. ಈಗ ಬಿತ್ತನೆ ಮಾಡಿದರೆ ನಾಟಿಯಾಗುತ್ತದೆ. ಇನ್ನೆರಡು ದಿನ ಬಿಟ್ಟರೆ ಹೊಲ ಹಸಿ ಆರುತ್ತದೆ. ಆಗ ತೊಗರಿ ಬೀಜ ಕೊಟ್ಟರೆ ಏನು ಮಾಡಬೇಕು. ಬೀಜ ವಿತರಣೆ ಮಾಡದಿದ್ದಲ್ಲಿ ರಸ್ತೆ ಬಂದ್ ಮಾಡಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ತೊಗರಿ ಬೀಜ ಪಡೆಯಲು ಬಂದ ರೈತರಾದ ರಸೂಲ ಭಾಸಗಿ, ಚಂದ್ರಾಮ ಕೆಂಬಾವಿ, ಬುಡ್ಡಾ ಶಿರಶ್ಯಾಡ, ಕನ್ನಪ್ಪ ಕೆರಿಗೊಂಡ, ಮಲ್ಲಪ್ಪ ಘಾಳಿ, ಭೀಮಾಶಂಕರ ಹೋಳಿ, ಕೆರೆಪ್ಪ ಎವೂರ, ರಾಜು ಶಿರಷ್ಯಾಡ, ಚಿನ್ನಪ್ಪ ಕುಂಬಾರ, ಶಂಕ್ರೆಪ್ಪ ಶಿರಸಗಿ, ಕಾಶಿನಾಥ ಬೋನಾಳ, ರಜಾಕ ಮುಲ್ಲಾ, ಸುಲ್ತಾನ ಯರಗಲ್, ಲಕ್ಷ್ಮಣ ಅರಕೇರಿ, ವಿಠ್ಠು ಜಾಲಿಗಿಡದ ಸೇರಿದಂತ ಕುಳೆಕುಮಟಗಿ, ಶಿರಸಗಿ, ಚಿಕ್ಕಹವಳಗಿ, ಬಗಲೂರ, ಹಂಚಿನಾಳ, ಗಬಸಾವಳಗಿ, ಕಕ್ಕಳಮೇಲಿ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯ ರೈತರು ಇದ್ದರು.

Leave a Reply

Your email address will not be published. Required fields are marked *