ಮರ‌್ಲಹಳ್ಳಿಯಲ್ಲಿ ಮಲಿಯಮ್ಮ ದೇವಿ ಜಾತ್ರೆ

ಮೊಳಕಾಲ್ಮೂರು: ತಾಲೂಕಿನ ಮರ‌್ಲಹಳ್ಳಿಯ ಗ್ರಾಮದೇವತೆ ಮಲಿಯಮ್ಮ ದೇವಿ ಜಾತ್ರಾ ಮಹೋತ್ಸವ ವೈಭವದಿಂದ ನೆರವೇರಿತು.
ಮೂರು ವರ್ಷಕ್ಕೊಮ್ಮೆ ನಡೆವ ಜಾತ್ರೆಗೆ ಗ್ರಾಮವನ್ನು ತಳಿರು ತೋಣಗಳಿಂದ ಅಲಂಕರಿಸಲಾಗಿತ್ತು. ಎಲ್ಲ ಮನೆಗಳಲ್ಲೂ ಸಂಭ್ರಮವಿತ್ತು.
ಪದ್ಧತಿಯಂತೆ ಆಂಧ್ರದ ರಾಯದುರ್ಗದ ಜಿನಗಾರ ಮನೆಯಲ್ಲಿ ಶಾಶ್ತ್ರೋಕ್ತವಾಗಿ ದೇವಿಮೂರ್ತಿಯನ್ನು ಸಿಂಗರಿಸಲಾಯಿತು. ಸೋಮವಾರ ಮೆರವಣಿಗೆ ಮೂಲಕ ದೇವಿಯನ್ನು ಗ್ರಾಮಕ್ಕೆ ಕರೆತಂದು ದೊಡ್ಡ ಆಲದ ಮರದಡಿಯ ಉದ್ಭವಮೂರ್ತಿ ಸನ್ನಿಧಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಅಂದು ರಾತ್ರಿ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು.
ಮಂಗಳವಾರ ಬೆಳಗ್ಗೆ ಭಕ್ತರಿಂದ ಬೇವಿನ ಸೀರೆ, ಹರಕೆ, ಹಣ್ಣು, ಕಾಯಿ ಸೇವೆ ನಡೆಯಿತು. ರೋಗ, ಸಂಕಷ್ಟಗಳಿಂದ ಜನ-ಜಾನುವಾರುಗಳನ್ನು ಕಾಪಾಡುವಂತೆ ಅಕ್ಕಪಕ್ಕದ ಗ್ರಾಮಸ್ಥರು ಪ್ರಾರ್ಥಿಸಿದರು.
ರೋಗ ರುಜಿನ, ಬರಗಾಲ ಕಾಡಿದರೆ ಗ್ರಾಮಸ್ಥರೆಲ್ಲ ದೇವಿಗೆ ಅನ್ನ, ಮೊಸರು ನೈವೇದ್ಯ ಸಲ್ಲಿಸಿ, ಎಲ್ಲರೂ ಒಂದೆಡೆ ಕುಳಿತು ಪ್ರಸಾದ ಸೇವಿಸುತ್ತಾರೆ. ದೇವಿಯ ಅನುಗ್ರಹದಿಂದ ಸಂಕಷ್ಟ ನಿವಾರಣೆಯಾಗಿ ಇಷ್ಟಾರ್ಥ ಸಿದ್ಧಿಸುತ್ತವೆ.
ದಾನಸೂರನಾಯಕ, ಗ್ರಾಮದ ಮುಖಂಡ