ಉದ್ಯೋಗ ಮೇಳದ ಸದುಪಯೋಗಕ್ಕೆ ಪ್ರಚಾರ ಅಗತ್ಯ

ಮೊಳಕಾಲ್ಮೂರು: ಉದ್ಯೋಗ ಮೇಳದ ಸದುಪಯೋಗಕ್ಕೆ ವ್ಯಾಪಕ ಪ್ರಚಾರ ನೀಡಬೇಕೆಂದು ತಹಸೀಲ್ದಾರ್ ಎಸ್. ಅನಿತಾಲಕ್ಷ್ಮಿಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ತುಮಕೂರು, ಚಿತ್ರದುರ್ಗ ಜಿಲ್ಲಾ ಉದ್ಯೋಗ ವಿನಿಮಯ ಇಲಾಖೆಯಿಂದ ತುಮಕೂರಿನಲ್ಲಿ ನಡೆಯುವ ಉದ್ಯೋಗ ಮೇಳ ಕುರಿತ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ವಿದ್ಯೆ ಕಲಿತವರು ನಿರುದ್ಯೋಗಿಗಳಾಗುವುದು ಸರಿಯಲ್ಲ. ಸರ್ಕಾರಿ ಹುದ್ದೆ ಆಸೆ ಬಿಟ್ಟು ತಮ್ಮ ತಮ್ಮ ಕೌಶಲ ಆಧಾರದ ಮೇಲೆ ಉದ್ಯೋಗ ಕಂಡುಕೊಳ್ಳುವ ಜಾಣ್ಮೆ ಬೆಳೆಸಿಕೊಳ್ಳಬೇಕು. ಪ್ರಸ್ತುತ ಉತ್ತಮ ವಾಕ್ಚಾತುರ್ಯ, ಕೌಶಲ ಉಳ್ಳವರಿಗೆ ಎಲ್ಲೆಡೆ ಬೇಡಿಕೆ ಇದೆ. ನೂರಾರು ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ. 18 ರಿಂದ 35 ವಯೋಮಾನದ ಪದವೀಧರರಿಗೆ ಫೆ.16-17ರಂದು ತುಮಕೂರಿನಲ್ಲಿ ಉದ್ಯೋಗ ಮೇಳ ನಡೆಯಲಿದೆ. ಅರ್ಹರು ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಉದ್ಯೋಗ ಮೇಳದ ನೋಡಲ್ ಅಧಿಕಾರಿ ರುದ್ರೇಗೌಡ, ಅಧಿಕಾರಿಗಳಾದ ಟಿ. ಗುರುಮೂರ್ತಿ, ಬಸವರಾಜ್, ಹೊನ್ನಪ್ಪ, ಚೇತನ, ಎಸ್.ರುಕ್ಮಿಣಿ, ಸೂರಯ್ಯ ಇತರರಿದ್ದರು.