ಛತ್ತೀಸ್‌ಗಢ: ( Grandson Thrashes Grandmother) ವೃದ್ಧೆಯೊಬ್ಬಳಿಗೆ ಮೊಮ್ಮಗ ಕ್ರಿಕೆಟ್ ಬ್ಯಾಟ್‌ನಿಂದ ಮನಬಂದಂತೆ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಾಯ್‌ಪುರದ ಪುರಾನಿ ಬಸ್ತಿ ಪೊಲೀಸ್ ಪ್ರದೇಶದ ಅಮರ್ ಪುರಿ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ.
ವೃದ್ಧೆಯ ಮೇಲೆ ಹಲ್ಲೆ ನಡೆಸಿದ ಬಳಿಕ ಯುವಕ ಆಕೆಗೆ ಎಚ್ಚರಿಕೆ ನೀಡಿ ಮತ್ತೆ ಮನೆಯೊಳಗೆ ಹೋಗಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಯಾವ ಕಾರಣಕ್ಕೆ ವೃದ್ಧೆ ಮೇಲೆ ಹಲ್ಲೆ ಮಾಡಿದ್ದಾನೆ. ಈ ಘಟನೆ ನಡೆಸಿರುವುದು ಯಾವಾಗ ಎನ್ನುವ ಹೆಚ್ಚಿನ ಮಾಹಿತಿ ಇಲ್ಲ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರಾಕ್ಷಸ ಮೊಮ್ಮಗನ ವಿರುದ್ಧ ಕಿಡಿಕಾರಿದ್ದಾರೆ.
कोई कैसे अपनी दादी को इस तरह बैट से पीट सकता है!
दादी जिसने बचपन में चलना सिखाया उसी को बेरहमी से पीटना बहुत दुखद है।
हमारे समाज के लिए भी चिंताजनक है
वीडियो छत्तीसगढ़ की राजधानी रायपुर का है
@gyanendrat1 pic.twitter.com/Rg1nScGCbf
— Ravi Miri (Vistaar News) (@Ravimiri1) November 5, 2024
ವಿಡಿಯೋ ವೈರಲ್ ಆಗುತ್ತಿದ್ದಂತೆ ಕುಟುಂಬದವರೆಲ್ಲರೂ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸ್ಥಳೀಯರು ಅಧಿಕಾರಿಗಳಿಗೆ ವೀಡಿಯೊವನ್ನು ಒಪ್ಪಿಸಿದ್ದಾರೆ ಎನ್ನಲಾಗಿದೆ.