ಅಧಿಕಾರಿಗಳ ಎಡವಟ್ಟು: ಬಿತ್ತನೆ ಬೀಜಕ್ಕಾಗಿ ಯಾದಗಿರಿ ರೈತರ ಪರದಾಟ

ಯಾದಗಿರಿ: ಮುಂಗಾರು ಪ್ರಾರಂಭವಾಗಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಬಿತ್ತನೆ ಕಾರ್ಯ ಪ್ರಾರಂಭಿಸಿದ್ದಾರೆ. ಆದರೆ ಕೃಷಿ ಇಲಾಖೆ ಅಧಿಕಾರಿಗಳ ಎಡವಟ್ಟಿನಿಂದಾಗಿ ಸರಿಯಾದ ಸಮಯಕ್ಕೆ ಬಿತ್ತನೆ ಬೀಜ ಸಿಗದೆ 32 ಗ್ರಾಮಗಳ ರೈತರು ಪರಡಾಡುತ್ತಿದ್ದು, ಬಿತ್ತನೆ ಕಾರ್ಯ ವಿಳಂಬವಾಗಲಿದೆ ಎಂಬ ಆತಂಕದಲ್ಲಿದ್ದಾರೆ.

ಯಾದಗಿರಿಯ ಗುರುಮಠಕಲ್​ ನಗರದ ರೈತ ಸಂಪರ್ಕ ಕೇಂದ್ರಕ್ಕೆ ತೊಗರಿ, ಹೆಸರು ಹಾಗೂ ಉದ್ದು ಬೀಜಗಳಿಗಾಗಿ ರೈತರು ಬಂದಿದ್ದಾರೆ. ಆದರೆ ಬಿತ್ತನೆ ಬೀಜ ಸಿಗದಿರುವ ಹಿನ್ನೆಲೆಯಲ್ಲಿ ರೈತರು ಕಳೆದ 4 ದಿನಗಳಿಂದ ಬಿತ್ತನೆ ಬೀಜಕ್ಕಾಗಿ ಕಾದು ಕುಳಿತಿದ್ದಾರೆ. 32 ಗ್ರಾಮಗಳ ರೈತರು ಬಿತ್ತನೆ ಬೀಜ ಪಡೆಯಲು ಪರದಾಡುತ್ತಿದ್ದಾರೆ.

ಕೃಷಿ ಇಲಾಖೆ ಬೇಡಿಕೆಗೆ ತಕ್ಕಷ್ಟು ಬಿತ್ತನೆ ಬೀಜ ಸಂಗ್ರಹವಿದೆ ಎಂದು ಈ ಮೊದಲು ತಿಳಿಸಿತ್ತು. ಆದರೆ ರೈತ ಸಂಪರ್ಕ ಕೇಂದ್ರಕ್ಕೆ 250 ಕ್ವಿಂಟಾಲ್​ ತೊಗರಿ ಬೀಜದ ಬದಲಾಗಿ ಕೇವಲ 150 ಕ್ವಿಂಟಾಲ್​ ತೊಗರಿ ಬೀಜ ಪೂರೈಸಲಾಗಿದೆ. 100 ಕ್ವಿಂಟಾಲ್​ ಹೆಸರು ಬೀಜದ ಬದಲು 14 ಕ್ವಿಂಟಾಲ್​ ಮಾತ್ರ ಕೇಂದ್ರಕ್ಕೆ ಬಂದಿದೆ, ಉದ್ದಿನ ಬೀಜ ಸಹ ಕೇವಲ 14 ಕ್ವಿಂಟಾಲ್​ ಬಂದಿದೆ. ಹಾಗಾಗಿ ಎಲ್ಲಾ ರೈತರಿಗೂ ಬಿತ್ತನೆ ಬೀಜ ಸಿಗುತ್ತಿಲ್ಲ.

ಕೃಷಿ ಇಲಾಖೆಯ ಈ ಕ್ರಮದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *