ಸಂಸತ್​ನಲ್ಲಿ ರಾಹುಲ್​ ಕಣ್​ ಸನ್ನೆ, ಟ್ವಿಟರ್​ನಲ್ಲಿ ರಮ್ಯಾ ವಾರ್​!

ಬೆಂಗಳೂರು: ಲೋಕಸಭಾ ಕಲಾಪದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರೆ, ಮತ್ತೊಂದೆಡೆ ಮಾಜಿ ಸಂಸದೆ ರಮ್ಯಾ ಸದನದ ಹೊರಗೆ ಟ್ವಿಟರ್​ನಲ್ಲಿ ಮೋದಿ ನೀಡಿದ್ದ ಭರವಸೆಗಳು ಏನಾದವು? ಎಂದು ಸರಣಿ ಟ್ವೀಟ್​ ಮಾಡಿ ಪರೋಕ್ಷವಾಗಿ ಅವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​ ಪಕ್ಷದ ಸೋಷಿಯಲ್​ ಮೀಡಿಯಾ ವಿಂಗ್​ ಮುಖ್ಯಸ್ಥೆಯಾಗಿರುವ ರಮ್ಯಾ, ಮೇಕ್​ಇನ್​ ಇಂಡಿಯಾ ಯೋಜನೆ ಏನಾಗಿದೆ? ಉದ್ಯೋಗ ಎಲ್ಲಿ? ನಿಮ್ಮ ಭರವಸೆಗಳು ಏನಾದವು? ಎಂದು 2001 ರಿಂದ 2017ರ ವರೆಗೆ ಉದ್ಯೋಗ ಸೃಷ್ಟಿ ಕುರಿತ ಅಂಕಿಅಂಶಗಳನ್ನು ಹೊಂದಿರುವ ಮಾಹಿತಿ ನೀಡಿ ಮೋದಿಯನ್ನು ಪ್ರಶ್ನಿಸಿದ್ದಾರೆ.

ನಿಮ್ಮಿಂದ ನಮ್ಮ ದೇಶದ ರೈತರು ಸೋಲನುಭವಿಸಿದ್ದಾರೆ ಎಂದು ಉಲ್ಲೇಖಿಸಿದ್ದರೆ, ಮತ್ತೊಂದು ಟ್ವೀಟ್​ನಲ್ಲಿ ಬಿಜೆಪಿ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿಸಿದೆ ಮತ್ತು ಬಡವರನ್ನು ಇನ್ನೂ ಬಡವರನ್ನಾಗಿಸಿದೆ ಎಂದು ದೂಷಿಸಿದ್ದಾರೆ.

ಇನ್ನೂ ರಾಹುಲ್​ ಗಾಂಧಿ ಸದನದಲ್ಲಿ ಮಾತನಾಡುವ ವೇಳೆ ರಮ್ಯಾ ಮಾಡಿರುವ ಟ್ವೀಟ್​ನಲ್ಲಿ, ಬಿಜೆಪಿ ನಾಯಕರಿಗೆ ಭೂಕಂಪನವಾಗುತ್ತಿರುವ ಅನುಭವವಾಗುತ್ತಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.

Rahul Gandhi hugs Narendra Modi

ಸಂಸತ್​ನಲ್ಲಿ ಮೋದಿ ಅಪ್ಪಿಕೊಂಡ ರಾಹುಲ್​ ಕಣ್​ಸನ್ನೆ ಗುಟ್ಟೇನು ಗೊತ್ತೆ? ಮೊದಲು ಪ್ರಧಾನಿ ವಿರುದ್ಧ ತೀವ್ರ ವಾಗ್ದಾಳಿ, ಕೊನೆಯಲ್ಲಿ ನಮೋಗೆ ಶರಣು ಅವಿಶ್ವಾಸ ಗೊತ್ತುವಳಿ ಮತಕ್ಕೂ ಮುನ್ನ ಶುಕ್ರವಾರ ರಾಹುಲ್​ ಕುತೂಹಲದ ನಡೆ #RahulGandhi #NarendraModi #NoConfidenceMotion #DighvijayNews

Dighvijay News – ದಿಗ್ವಿಜಯ ನ್ಯೂಸ್ ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಜುಲೈ 20, 2018