ಅಂಡಮಾನ್​ಗೆ ಇಂದು ಮಾನ್ಸೂನ್

ನವದೆಹಲಿ: ದಕ್ಷಿಣ ಅಂಡಮಾನ್​ನಲ್ಲಿ ಭಾರಿ ಮಳೆಯಾಗುತ್ತಿದ್ದು, ಭಾನುವಾರ ಮಧ್ಯಾಹ್ನ ಬಂಗಾಳ ಕೊಲ್ಲಿ ಹಾಗೂ ನಿಕೋಬಾರ್ ದ್ವೀಪಗಳಿಗೆ ಮುಂಗಾರು ಪ್ರವೇಶಿಸಲಿದೆ.

ಅಂಡಮಾನ್​ನಲ್ಲಿ 40-50 ಕಿಮೀ ಪ್ರತಿ ಗಂಟೆ ವೇಗದಲ್ಲಿ ಗಾಳಿ ಬೀಸಲಿದೆ. ಜೂನ್ ಮೊದಲ ವಾರದಲ್ಲಿ ಕೇರಳಕ್ಕೆ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.

ಕೆಲ ಪ್ರದೇಶಗಳಿಗೆ ವಾಡಿಕೆಗಿಂತ ಮೊದಲೇ ಮಾನ್ಸೂನ್ ಪ್ರವೇಶಿಸಿದ್ದು, ಮುಂದಿನ ನಾಲ್ಕು ದಿನಗಳ ವರೆಗೂ ಅಂಡಮಾನ್ ದ್ವೀಪದಲ್ಲಿ ಮಳೆ ಸುರಿಯಲಿದೆ. ಶನಿವಾರದಿಂದ ಬುಧವಾರದವರೆಗೆ ನಿಕೋಬಾರ್ ಮತ್ತು ಬಂಗಾಳಕೊಲ್ಲಿಯ ಪ್ರದೇಶಗಳಲ್ಲಿ ಸಾಧಾರಣ ಮಳೆ ಸುರಿಯಲಿದೆ.

Leave a Reply

Your email address will not be published. Required fields are marked *