ಜೂ.6ರಂದು ಕೇರಳಕ್ಕೆ ಮುಂಗಾರು ಪ್ರವೇಶ

ನವದೆಹಲಿ: ಈ ಬಾರಿ ಮುಂಗಾರು ವಾಡಿಕೆಗಿಂತ ಐದು ದಿನ ತಡವಾಗಿ (ಜೂ.6)ಕೇರಳ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ವರ್ಷ ಸಾಮಾನ್ಯ ಮಳೆಯಾಗಲಿದ್ದು, ಒಟ್ಟಾರೆ ಶೇ.95 ಮಳೆ ನಿರೀಕ್ಷಿಸಲಾಗಿದೆ.

ಹವಾಮಾನ ಇಲಾಖೆ ನಿರೀಕ್ಷೆಯನ್ನು ಆಧರಿಸಿ ಕೃಷಿ ಸಚಿವಾಲಯ ಆಕಸ್ಮಿಕ ಪರಿಸ್ಥಿತಿಗಳ ಯೋಜನೆಗೆ ತಯಾರಿ ನಡೆಸಿಕೊಳ್ಳಲು ಮುಂದಾಗಿದೆ. ಮಾನ್ಸೂನ್ ತಡವಾಗಿ ಪ್ರವೇಶಿಸುತ್ತಿರುವುದರಿಂದ ಒಟ್ಟು ಮಳೆಯ ಪ್ರಮಾಣದ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳುವ ಹಾಗಿಲ್ಲ ಎಂದು ಇಲಾಖೆ ಸ್ಪಷ್ಟನೆ ನೀಡಿದೆ.

Leave a Reply

Your email address will not be published. Required fields are marked *