
ರಾಯಚೂರು ಮುನ್ನೂರುಕಾಪು ಸಮಾಜದಿಂದ ಆಯೋಜಿತ 25ನೇ ವರ್ಷದ ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬ ಗುರುವಾರ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ಧೂರಿ ತೆರೆ ಕಂಡಿತು.
ಭಾರದ ಕಲ್ಲು ಎಳೆಯುವ ಎತ್ತುಗಳ ಸ್ಪರ್ಧೆ, ಪೈಲ್ವಾನ್ ಕುಸ್ತಿ, ಕೈಕಲ್ಲು ಎತ್ತುವ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹೀಗೆ ವೈವಿಧ್ಯಮಯವಾಗಿ ಅನೇಕ ಕಾರ್ಯಕ್ರಮಗಳನ್ನು ಎಂಟು ದಿನಗಳ ಕಾಲ ನಿರ್ವಹಿಸಲಾಗಿತ್ತು.
ಈ ಭಾರಿ ಬೆಳ್ಳಿ ಹಬ್ಬದ ಅಂಗವಾಗಿ ಮುಂಗಾರು ಮ್ಯಾರಥನ್ ಓಟ, ಕವಿಗೋಷ್ಠಿ, ರಂಗೋಲಿ ಸ್ಪರ್ಧೆ,ಚಿತ್ರಕಲಾ ಶಿಬಿರ,ಪ್ರಬಂಧ ಸ್ಪರ್ಧೆ, ಹಾಗೂ ಸಮಾಜ ಸೇರಿ ವಿವಿಧ ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಎಂಟು ದಿನಗಳ ಈ ಸಮಾರಂಭಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬ ಖ್ಯಾತಿಗೆ ನಿದರ್ಶನವಾಗಿತ್ತು. ನೃತ್ಯ ಹಾಗೂ ರಂಗೋಲಿ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಿಗೆ ಕೊನೆಯ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಮುಂಗಾರು ಸಾಂಸ್ಕೃತಿಕ ಬೆಳ್ಳಿ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು 45 ಕ್ಕೂ ಅಧಿಕ ತಂಡಗಳು ಪಾಲ್ಗೊಂಡಿದ್ದವು. ಸ್ಥಳೀಯರು ಸೇರಿದಂತೆ ಕರ್ನಾಟಕ, ತೆಲಂಗಾಣ, ಹಾಗೂ ಮಹಾರಾಷ್ಟ್ರ ಕೇರಳ ದೇಶದ ವಿವಿಧ ರಾಜ್ಯಗಳಿಂದ ತಂಡಗಳು ಆಗಮಿಸಿದ್ದವು.
ಪೈಲ್ವಾನ್ ಕುಸ್ತಿ ಇಂದು ಸಂಜೆ ಎಪಿಎಂಸಿ ಆವರಣದಲ್ಲಿ ನಡೆಸಲಾಯಿತು. ಬೆಳಗಾವಿ, ಮೈಸೂರು, ಧಾರವಾಡ ಶಿವಮೊಗ್ಗ ಸೇರಿದಂತೆ ನೆರೆಯ ರಾಜ್ಯಗಳಿಂದಲೂ ಪೈಲ್ವಾನ್‌ಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಪೈಲ್ವಾನ್‌ಗಳ ಪಟ್ಟು ಪ್ರತಿ ಪಟ್ಟು ಕುಸ್ತಿ ಆಟ ವೀಕ್ಷಕ ರನ್ನು ರೋಚಕಗೊಳ್ಳುವಂತೆ ಮಾಡಿತು.
ಪೈಲ್ವಾನ್ ಕುಸ್ತಿಯನ್ನು ವೀಕ್ಷಿಸಲು ಕುಳಿತಿದ್ದ ಪ್ರೇಕ್ಷಕರು ಕೇಕೇ ಮತ್ತು ಸಿಳ್ಳೆಗಳ ಮೂಲಕ ಕುಸ್ತಿ ಪಟುಗಳಿಗೆ ಪ್ರೋತ್ಸಾಹಿಸಿದರು. ಮುಂಗಾರು ಕ್ರೀಡೆ ಕುಸ್ತಿ ಅಂದ್ರೆ ಸಾಕು ಅದರ ಖದರೇ ಬೇರೆ. ಕುಸ್ತಿಯಲ್ಲಿ ಪೈಲ್ವಾನರು ತೊಡೆ ತಟ್ಟಿ ಅಖಾಡ ಪ್ರವೇಶಿಸಿದರು, ನೋಡುಗರು ಕೇಕೆ, ಸಿಳ್ಳೆಗಳನ್ನ ಹಾಕುತ್ತಿರುವುದು. ಪೈಲ್ವಾನರಂತೂ ಗೆಲುವು ನಂದೇ ಎಂದು ಎದುರಾಳಿ ವಿರುದ್ಧ ಭರ್ಜರಿ ಫೈಟಿಂಗ್ ಮಾಡುತ್ತಿದ್ದರು. ಪೈಲ್ವಾನರು ಅಖಾಡದ ಮಣ್ಣನ್ನು ಮೈಗೆ ಹಚ್ಚಿಕೊಂಡು, ಎದುರಾಳಿಗೂ ಮಣ್ಣು ಮುಕ್ಕಿಸಿ ಭರ್ಜರಿ ಸೆಣಸಾಟ ಮಾಡುತ್ತಿದ್ದರು.
ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬದ ರೂವಾರಿ ಹಾಗೂ ಮಾಜಿ ಶಾಸಕ ಎ.ಪಾಪಾರೆಡ್ಡಿ, ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಕಾರ್ಯದರ್ಶಿ ಜಿ.ಬಸವರಾಜ ರೆಡ್ಡಿ, ಹಾಗೂ ಇತರೆ ಪ್ರತಿಯೊಬ್ಬ ಮುಖಂಡರು ಈ ಕಾರ್ಯಕ್ರಮ ಯಶಸ್ವಿಗೆ ಶ್ರಮಿಸುವ ಮೂಲಕ ರಾಯಚೂರು ಸಾಂಸ್ಕೃತಿಕ ಬೆಳ್ಳಿ ಹಬ್ಬವನ್ನು ಅದ್ಧೂರಿಯಾಗಿ ನಿರ್ವಹಿಸಿದರು.