22.5 C
Bengaluru
Sunday, January 19, 2020

ಮಂಗಗಳ ಕಾಟಕ್ಕೆ ಕನಸಲ್ಲೂ ಬೆಚ್ಚುವ ಮಂದಿ!

Latest News

ಪ್ರಾಚಾರ್ಯರ ಧೋರಣೆ ಖಂಡಿಸಿ ಪ್ರತಿಭಟನೆ

ಬಸವನಬಾಗೇವಾಡಿ: ಕಾಲೇಜಿನಲ್ಲಿ ವಿವೇಕಾನಂದರ ಜಯಂತಿ ಆಚರಣೆಗೆ ನಿರಾಕರಿಸಿದ್ದನ್ನು ಖಂಡಿಸಿ ಎಬಿವಿಪಿ ಕಾರ್ಯಕರ್ತರ ನೇತೃತ್ವದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿಗಳು ಶನಿವಾರ...

ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ: ಜಿಲ್ಲಾಧಿಕಾರಿ ಪಾಟೀಲ ಅಭಿಮತ

ವಿಜಯಪುರ : ಸರ್ಕಾರಿ ನೌಕರರು ಮತ್ತು ಶಾಲಾ ಕಾಲೇಜುಗಳಿಗೆ ಮಕ್ಕಳನ್ನು ಬಿಡಲು ಬರುವ ಪಾಲಕರು, ಕಾಲೇಜು ವಿದ್ಯಾರ್ಥಿಗಳು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಕುರಿತಂತೆ...

ಪೋಲಿಯೋ ಲಸಿಕಾ ಕಾರ್ಯಕ್ರಮ

ರಾಣೆಬೆನ್ನೂರ: ಪೋಲಿಯೋ ಮುಕ್ತ ಭಾರತವನ್ನಾಗಿ ಮಾಡುವ ಉದ್ದೇಶದಿಂದ ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಬೇಕು. ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು...

ಇಬ್ಬರು ಮನೆಗಳ್ಳರು ಖಾಕಿ ಬಲೆಗೆ

ಗದಗ: ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬಂಧಿಸುವಲ್ಲಿ ಗದಗ ಗ್ರಾಮೀಣ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಸೆಟ್ಲಮೆಂಟ್ ನಿವಾಸಿಗಳಾದ ಸುರೇಶ...

ಕಾಲನಲ್ಲಿ ಲೀನವಾದ ‘ಪ್ರಳಯ’

ಅಕ್ಕಿಆಲೂರ: ಹೋರಿ ಬೆದರಿಸುವ ಕಾರ್ಯಕ್ರಮದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಸಮೀಪದ ಮಲಗುಂದ ಗ್ರಾಮದ ಪ್ರಳಯ ಎಂಬ ಹೆಸರಿನ ಹೋರಿ ಶನಿವಾರ ಅನಾರೊಗ್ಯದಿಂದ ಅಸುನಿಗಿದ್ದು,...

| ಶ್ರೀಪತಿ ಹೆಗಡೆ ಹಕ್ಲಾಡಿ

ಕಮಲಶಿಲೆ: ಮಂಗ ಬಂತು ಎಂದು ತೋಟಕ್ಕೆ ಎಲ್ಲಾದರೂ ಓಡಿಸೋಕೆ ಬಾಗಿಲು, ಕಿಟಕಿ ತೆರೆದಿಟ್ಟು ಹೋದರೆ ಅಡುಗೆ ಮನೆ ಒಳಗಿದ್ದ ಅನ್ನದ ಪಾತ್ರೆಯೇ ಖಾಲಿ… ಸಂಬಾರ ಪಾತ್ರೆ ಯಾವುದೋ ಹಾಡಿ ಮೂಲೆಯಲ್ಲಿ ಬಿದ್ದಿರುತ್ತದೆ. ಕಾಲೊರೆಸುವ ಬಟ್ಟೆ ಆಟದ ಗೊಂಬೆ.. ಇಡೀ ಮನೆಯೇ ಅಸ್ತವ್ಯಸ್ತ..ಇದು ಮಾರುತಿ ಮಹಿಮೆ!

ಮುರಿದು ಬಿದ್ದ ಬಾಳೆ ಮರ, ಶಿಬಿರೆದ್ದ ಬಾಳೆ ಕಂದು, ಬಾಗಿಕೊಂಡ ಅಡಕೆ ಮರದ ಸೋಗೆ, ತೋಟದ ಸುತ್ತ ಚೆಲ್ಲಾಪಿಲ್ಲಿಯಾಗಿ ಬಿದ್ದ ಎಳೆನೀರು ಚಿಪ್ಪು, ಸೀಬಿ ಬಿಸಾಕಿದ ಅಡಕೆ.. ಕಿತ್ತು ಬಿಸುಟಿದ ತರಕಾರಿ ಗಿಡ, ಹೀಗೆ ಸಾಗುತ್ತದೆ ಮಂಗಳ ದಾಂಧಲೆ ಪುರಾಣ. ಮಾರುತಿ ಕಾಟಕ್ಕೆ ಇಡೀ ಕಮಲಶಿಲೆ ಕೃಷಿಕರು ಕಂಗಾಲಾಗಿದ್ದಾರೆ.

ಮಂಗಗಳ ಉಪಟಳ ನೆನೆಸಿಕೊಂಡು ಕೃಷಿಕರು ಕನಸಲ್ಲೂ ಬೆಚ್ಚುತ್ತಾರೆ. ಇನ್ನು ಮನೆಗೋ ತೋಟಕ್ಕೋ ಲಗ್ಗೆಯಿಟ್ಟ ಮಂಗಗಳ ಹಿಂಡು ಓಡಿಸುವ ಸಾಹಸ ನಿಜಕ್ಕೂ ಅಡ್ವೆಂಚರ್! ಓಡಿಸಲು ಹೋದವರನ್ನೇ ಅಟ್ಟಿಸಿಕೊಂಡು ಬರುವಷ್ಟು ಧಾರ್ಷ್ಟೃ ತೋರಿಸುತ್ತವೆ. ಸಾಕು ನಾಯಿಗಳು ಮಂಗನ ಸಹವಾಸವೇ ಬೇಡ ಎಂದು ಮೂಲೆಯಲ್ಲಿ ಮುದುರಿ ಕೂರವಷ್ಟರ ಮಟ್ಟಿಗೆ ವಿಲನ್ ಮಂಗಗಳು!

ಹಳ್ಳಿಹೊಳೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಶೆಟ್ಟಿಪಾಲು, ಜಿಬ್ರಜಡ್ಡು, ಬರೇಗುಂಡಿ, ವಾಟೆಬಚ್ಚಲು, ಚಕ್ರ ಮೈದಾನ ಮುಂತಾದೆಡೆಯಲ್ಲೂ ಮಂಗಗಳ ಕಾಟ ಇದ್ದರೂ ಕಮಲಶಿಲೆಯಲ್ಲಿ ಇರುವಷ್ಟು ಜೋರಿಲ್ಲ. ಒಂದೊಂದು ಹಿಂಡಲ್ಲಿ 50-100 ಮಂಗಗಳ ಹಿಂಡಿದ್ದು ಅವುಗಳು ಮೂರು ಪಂಗಡವಾಗಿರುತ್ತವೆ. ಕಮಲಶಿಲೆ ದೇವಸ್ಥಾನ ಬಳಿ ಒಂದು ತಂಡವಿದ್ದರೆ, ದೇವಸ್ಥಾನ ಮೇಲ್ಬಾಗ ಮತ್ತೊಂದು ತಂಡ. ಅಡಕೆ ತೋಟದ ಮೇಲ್ಭಾಗ ಮತ್ತೊಂದು ತಂಡದ ಆಡಳಿತ. ತಂಡಗಳ ನಡುವೆ ಹೊಡೆದಾಟ ಶುರುವಾದರೆ, ಇಡೀ ವಾತಾವರಣ ಯುದ್ಧೋನ್ಮಾದಕ್ಕೆ ಒಳಗಾದಂತೆ ಭಾಸವಾಗುತ್ತದೆ. ಅವುಗಳ ಕೂಗಾಟ ಅರಚಾಟ ಎಂಟೆದೆಯಲ್ಲೂ ನಡುಕು ಹುಟ್ಟಿಸುವಷ್ಟು ಕ್ರೂರ.

ಕಮಲಶಿಲೆ ಕೃಷಿಕರ ತೋಟ ಸುತ್ತಿ ಬಂದರೆ ಮಂಗಗಳ ಕ್ರೌರ್ಯ ಅನಾವರಣ. ಅಲ್ಲಲ್ಲಿ ಸುಲಿದು ಹಾಕಿದ ತೆಂಗಿನಕಾಯಿ ನಾರು, ಕುಡಿದು ಬಿಸಾಕಿದ ಎಳೆನೀರು ಚಿಪ್ಪು, ಸೀಬಿ ಬಿಸಾಕಿದ ಅಡಕೆ ಮಂಗಗಳ ಅಡಾವುಡಿಗೆ ಸಾಕ್ಷಿ. ವರ್ಷಕ್ಕೆ 30 ಸಾವಿರ ಕಾಯಿ ಕೊಯ್ಯುತ್ತಿದ್ದ ರೈತನ ತೆಂಗಿನ ತೋಟದಲ್ಲಿ ಬಿಡುವ ಕಾಯಿ ಈಗ ಮನೆ ಖರ್ಚಿಗೂ ಸಾಲುತ್ತಿಲ್ಲ! ಸಣ್ಣ ಪುಟ್ಟ ಕೃಷಿಕರು ದುಡ್ಡು ಕೊಟ್ಟು ಕಾಯಿ ತಂದು ತಿನ್ನಬೇಕು. ಬಾಳೆಕಾಯಿ, ಬಾಳೆಹಣ್ಣು ರೈತರು ಅಂಗಡಿಯಿಂದ ತರಬೇಕು. ತರಕಾರಿ ಮಂಗಗಳಿಗೆ ಸ್ವಾಹಾ. ಮಂಗಗಳ ಉಪಟಳಕ್ಕೆ ಕೃಷಿಕರು ಕಂಗಾಲಾಗಿದ್ದು, ಅರಣ್ಯ ಇಲಾಖೆ ಮಂಗಗಳ ಹಿಡಿದು ಬೇರೆ ಕಡೆ ಬಿಟ್ಟು ಬರಬೇಕು ಎನ್ನೋದು ಕೃಷಿಕರ ಒತ್ತಾಯ. ಮಂಗಗಳು ಕಮಲಶಿಲೆ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತರನ್ನೂ ಬಿಡುತ್ತಿಲ್ಲ!

ಹೊಡೆಯೋ ಹಾಗಿಲ್ಲ! ಮಂಗ ಕೊಂದರೆ ಪಾಪ ಬರುತ್ತದೆ ಎಂಬ ಭಯ ಮಂಗಗಳನ್ನು ಭಯ ಮುಕ್ತವಾಗಿರಿಸಿದೆ. ಆರಂಭದಲ್ಲಿ ಪಟಾಕಿ, ಗರ್ನಾಲ್ ಸಿಡಿಸಿದರೆ ಪರಾರಿ ಆಗುತ್ತಿದ್ದ ಮಂಗಗಳಿಗೆ ಈಗ ಪಟಾಕಿಯ ಭಯವೂ ಇಲ್ಲ. ಬಂದೂಕಿದ್ದವರು ಚುನಾವಣೆ ಸಂದರ್ಭ ಠೇವಣಿ ಇಟ್ಟಿದ್ದು ವಾಪಸ್ ತರುವ ವೇಳೆ ಅರ್ಧ ತೋಟವೇ ಖಾಲಿಯಾಗಿದೆ. ಕಾಡುಪ್ರಾಣಿಗಳ ಹೊಡೆದರೆ ಕಾನೂನು ಸುಮ್ಮನಿರೋಲ್ಲ ಎಂಬ ಭಯ ಕೂಡ ಕಾಡುಪ್ರಾಣಿಗಳನ್ನು ಅಟ್ಟಕ್ಕೇರಿಸಿದೆ. ಮಂಗಗಳು ಸಿಕ್ಕಾಪಟ್ಟೆ ಚೀರಾಡಿದರೆ ಅಪಶಕುನ ಎಂಬ ನಂಬಿಕೆ ಇರೋದ್ರಿಂದ ಕೃಷಿ ಹಾಳಾಗೋ ಜತೆಗೆ ಊರಿಗೆ ಮುಂದೇನು ಕಾದಿದೆಯೋ ಇನ್ನುವ ಭಯ ಕೂಡ ಇದೆ. ಕಮಲಶಿಲೆ ಆಸುಪಾಸು ಹುಲಿ ಇದೆ ಎಂಬ ಸುದ್ದಿಯೂ ಹರಡಿದ್ದು, ಹುಲಿ ಕಂಡರೆ ಮಂಗಗಳು ಹೆಚ್ಚು ಕಿರುಚುತ್ತವೆ ಎಂಬ ಪ್ರತೀತಿಯಿಂದ ಹುಲಿ ಭಯವನ್ನೂ ಹುಟ್ಟು ಹಾಕಿದೆ. ಒಟ್ಟಿನಲ್ಲಿ ಮಂಗಗಳ ಧಾಂಗುಡಿಯಿಂದ ಕಮಲಶಿಲೆ ಜನರ ನೆಮ್ಮದಿಯೇ ಹಾಳಾಗಿದ್ದು, ಜನರನ್ನು ರಕ್ಷಿಸೋದು ಯಾರು ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಮಂಗ ಉಪಟಳದಿಂದ ಕಾಯಿ ಹಣಕೊಟ್ಟು ತರುವಂತಾಗಿದೆ. ಕಿಟಕಿ ಬಾಗಿಲು ತೆರೆದಿಟ್ಟರೆ ಮನೆಯೊಳಗೆ ನುಗ್ಗಿ ಲೂಟಿ ಮಾಡುತ್ತವೆ. ಮಂಗನ ಎಷ್ಟು ಓಡಿಸಿದರೂ ಅವು ಕ್ಯಾರೆ ಮಾಡಲ್ಲ. ಸಾಕುನಾಯಿಗಳು ಲೆಕ್ಕಕ್ಕೇ ಇಲ್ಲ.ಇಡೀ ದಿನ ಅವುಗಳನ್ನು ಓಡಿಸಿ, ರಾತ್ರಿ ನಿದ್ದೆ ಕಣ್ಣಲ್ಲೂ, ಕನಸಲ್ಲೂ ಮಂಗಗಳದೇ ಹಾವಳಿ. ಅಡಕೆ ತೋಟದಲ್ಲೇ ಠಿಕಾಣಿ ಹೂಡಿ, ರಾತ್ರಿಯೂ ಮಂಗಗಳ ಕೂಗಾಟ. ಅವುಗಳ ಹೊಡೆದಾಟದ ಧ್ವನಿ ಜನರನ್ನು ಚಿಂತೆಗೀಡು ಮಾಡಿದೆ. ಒಂದೆಡೆ ಹುಲಿ ಬಂದರೆ ಮಂಗಗಳು ರಾತ್ರಿ ಕೂಗುತ್ತವೆ ಎನ್ನುವ ಜನ, ಇನ್ನೊಂದೆಡೆ ಈ ರೀತಿ ಮಂಗಗಳು ರಾತ್ರಿ ಕೂಗುವುದು ಊರಿಗೆ ಅನಿಷ್ಟದ ಸೂಚನೆ ಎನ್ನುತ್ತಾರೆ. ಇದಕ್ಕೆ ಪರಿಹಾರ ಹೇಗೆ ಎಂಬ ಚಿಂತೆ ಕಾಡುತ್ತಿದೆ.

|ಪೂರ್ಣಿಮಾ ಎನ್.ಭಟ್ಟ, ಸಾಹಿತಿ ಕಮಲಶಿಲೆ

 

ಕೃಷಿ ಕಾರ್ಮಿಕ ದುಬಾರಿ ಕೃಷಿ, ಧಾರಣೆ ಏರಿಳಿತ ಬೇರುಹುಳ ಕಾಟದಿಂದ ಕೃಷಿ ಮಾಡುವುದೇ ಕಷ್ಟವಾಗಿರುವ ಕಾಲದಲ್ಲಿ ಕಾಡು ಪ್ರಾಣಿಗಳ ಸಮಸ್ಯೆ ಕೃಷಿಯಿಂದ ವಿಮುಖರಾಗಿ ಮಾಡುತ್ತಿವೆ. ಕಾಡುಕೋಣ, ಜಿಂಕೆ, ಕಣೆಹಂದಿ, ಹಂದಿ, ಮಂಗಗಳ ಕಾಟಕ್ಕೆ ಕೃಷಿ ಉಸಾಬರಿಯೇ ಬೇಡ ಎನಿಸಿಬಿಟ್ಟಿದೆ. ವರ್ಷಕ್ಕೆ 25 ಸಾವಿರ ಕಾಯಿ ಬಿಡುವ ತೆಂಗಿನ ತೋಟದಲ್ಲಿ ಈಗ ತಿನ್ನೋಕು ಸಾಕಾಗೋಲ್ಲ. ಅಡಕೆ ಮಿಳ್ಳೆ ಬಿಡುವಾಗ ಮಂಗಗಳ ಕಾಟದಿಂದ ಇಳುವರಿ ಖೋತಾ ಆಗುತ್ತಿದೆ. ಅರಣ್ಯ ಇಲಾಖೆಗೆ ಮನವಿ ಮಾಡಿದರೆ ಪ್ರಯೋಜನಕ್ಕೆ ಬರೋದಿಲ್ಲ. ಪರಿಹಾರದ ಮಾತು ಮರೀಚಿಕೆ. ಅರಣ್ಯ ಇಲಾಖೆ ತಕ್ಷಣ ಮಂಗಗಳ ಹಿಡಿದು ದಟ್ಟಾರಣ್ಯಕ್ಕೆ ಬಿಡುವ ವ್ಯವಸ್ಥೆ ಮಾಡಿದಿದ್ದರೆ ಕೃಷಿ ಕೈಬಿಡಬೇಕಾಗುತ್ತದೆ.

|ನಾಗಭೂಷಣ ಭಟ್, ಕೃಷಿಕ ಕಮಲಶಿಲೆ.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...