ಚಿಕ್ಕಬಳ್ಳಾಪುರ: ದಾಸ್ತಾನಿಟ್ಟಿದ್ದ ಮದ್ಯದಲ್ಲಿ 21 ಟಿನ್ ಬಿಯರ್ ಅನ್ನು ಕೋತಿಗಳು ಕುಡಿದಿವೆ ಎಂದು ನಂದಿ ಗಿರಿಧಾಮದಲ್ಲಿರುವ ಮಯೂರ ಪೈನ್ಟಾಪ್ ಹೋಟೆಲ್ ವ್ಯವಸ್ಥಾಪಕರು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಕೇಂದ್ರ ಕಚೇರಿ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಎಣ್ಣೆ ಪ್ರಿಯರಿಗೆ ಇಲ್ಲಿದೆ ಗುಡ್ ನ್ಯೂಸ್: ಸೋಮವಾರದಿಂದ ಮದ್ಯ ಮಾರಾಟಕ್ಕೆ ಸಿಕ್ತು ಅನುಮತಿ
ಲಾಕ್ಡೌನ್ ಹಿನ್ನೆಲೆ ಏ.21ರಂದು ಹೋಟೆಲ್ನಲ್ಲಿದ್ದ ಮದ್ಯದ ದಾಸ್ತಾಸು ಪರಿಶೀಲಿಸಿ ಲೆಕ್ಕ ಇಡಲಾಗಿತ್ತು. ಶನಿವಾರ ಪರಿಶೀಲಿಸಿದಾಗ 300 ಎಂಎಲ್ನ 21 ಟಿನ್ ಕಡಿಮೆ ಇರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಶ್ನಿಸಿದಾಗ, ಕೋತಿಗಳು ಹಾಳು ಮಾಡಿವೆ ಎಂದಿದ್ದಾರೆ. ಮದ್ಯವನ್ನು ದುಬಾರಿ ಬೆಲೆಗೆ ಮಾರಿಕೊಳ್ಳಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ನಂದಿ ಪುರುಷೋತ್ತಮ್ ಆರೋಪಿಸಿದ್ದಾರೆ.

ಮದ್ಯದಂಗಡಿ ತೆರೆಸುವಂತೆ ದೇವರ ಮೊರೆ ಹೋದ ಯುವಕ, ಎಂಎಸ್ಐಎಲ್ ಮಳಿಗೆ ಬಾಗಿಲಿಗೆ ಪೂಜೆ