Tuesday, 11th December 2018  

Vijayavani

Breaking News

ಕೋತಿ ಬಸ್​ ಓಡಿಸ್ತು, ಚಾಲಕನಿಗೆ ಕೆಲಸ ಹೋಯ್ತು…

Saturday, 06.10.2018, 10:28 AM       No Comments

ದಾವಣಗೆರೆ: ಈ ಕೋತಿಗೆ ಬಸ್​ ಓಡಿಸೋದು ಅಂದ್ರೆ ತುಂಬಾ ಇಷ್ಟ. ಹಾಗಾಗಿ ಎಷ್ಟು​ ಹೇಳಿದ್ರು ಕೇಳದೆ ಹೋಗಿ ಬಸ್​ ಸ್ಟೇರಿಂಗ್​ ಮೇಲೆ ಕೂತು ಶಿಸ್ತಾಗಿ ಬಸ್​ ಚಾಲನೆ ಮಾಡಿದೆ.

ಹೌದು, ದಾವಣಗೆರೆ ಡಿಪೋಗೆ ಸೇರಿದ ಬಸ್​ವೊಂದರಲ್ಲಿ ಚಾಲಕನ ಜತೆ ಕೂತ ಕೋತಿ ಬಸ್ ಚಾಲನೆ ಮಾಡಿರುವ ವಿಡಿಯೋ ಇದೀಗ ವೈರಲ್​ ಆಗಿದೆ. ಚಾಲಕನೇನೋ ಖುಷಿಯಿಂದ ಕೋತಿಯನ್ನು ಕೂರಿಸಿಕೊಂಡು ಬಸ್​ ಚಾಲನೆ ಮಾಡಿದ್ದಾನೆ.

ಆದರೆ, ವಿಡಿಯೋ ವೈರಲ್​ ಆಗುತ್ತಿದ್ದಂತೆ ಕೆಎಸ್​ಆರ್​ಟಿಸಿ ಬಸ್​ ಚಾಲಕನ ವಿರುದ್ಧ ಕ್ರಮ ಜರುಗಿಸಿ ಆತನನ್ನು ಕೆಲಸದಿಂದ ಬಿಡುಗಡೆಗೊಳಿಸಿದೆ.

ಭರಮಸಾಗರ ಆಲಿಕಲ್ಲುಗೆ ತೆರಳುವ ಮಾರ್ಗದಲ್ಲಿ ಅ.1ರಂದು ಘಟನೆ ಸಂಭವಿಸಿದ್ದು, ಈ ಕುರಿತು ಹಿರಿಯ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *

Back To Top