ನವದೆಹಲಿ: ಕ್ರಿಕೆಟ್ ಜಗತ್ತಿನಲ್ಲಿ ಎಲ್ಲರ ಗಮನ ಸೆಳೆಯುವ ಪ್ರಮುಖ ವಿಚಾರ ಏನೆಂದರೆ ಅದು ದಾಖಲೆಗಳು. ವಿಶ್ವ ಕ್ರಿಕೆಟ್‌ನಲ್ಲಿ ಭರ್ಜರಿಯ ದಾಖಲೆಗಳ ಜತೆ ಕೆಲವೊಮ್ಮೆ ಕಳಪೆ ದಾಖಲೆಗಳು ಕೂಡ ಸೃಷ್ಟಿಯಾಗುತ್ತವೆ. 2023ರ ಏಷ್ಯನ್ ಗೇಮ್ಸ್‌ನಲ್ಲಿ ಮಂಗೋಲಿಯಾ ವಿರುದ್ಧ ನಡೆದ ಟಿ20 ಪಂದ್ಯದಲ್ಲಿ ನೇಪಾಳ ತಂಡ 314 ರನ್ ಗಳಿಸಿದ್ದು, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೇ ಅತ್ಯಧಿಕ ಸ್ಕೋರ್ ಎಂಬ ದಾಖಲೆಯನ್ನು ಹೊಂದಿದೆ. ಇದೀಗ ಅತ್ಯಂತ ಕಡಿಮೆ ಮೊತ್ತ ಗಳಿಸಿದ ಕಳಪೆ ದಾಖಲೆ ಕೂಡ ನಿರ್ಮಾಣವಾಗಿದೆ.
ಹೌದು, ಅಂದು ನೇಪಾಳ ಆಟಗಾರರಿಂದ 314 ರನ್ ಚೆಚ್ಚಿಸಿಕೊಂಡಿದ್ದ ಅದೇ ಮಂಗೋಲಿಯಾ ತಂಡ ಇಂದು ಕಳಪೆ ದಾಖಲೆಯನ್ನು ಬರೆದಿದೆ. ಕೇವಲ 10 ರನ್ಗೆ ಆಲೌಟ್ ಆಗುವ ಮೂಲಕ ಟಿ20 ಇತಿಹಾಸದಲ್ಲೇ ಕಡಿಮೆ ಮೊತ್ತಕ್ಕೆ ಆಲೌಟ್ ಆದ ತಂಡ ಎಂಬ ಕಳಪೆ ದಾಖಲೆ ಬರೆದಿದೆ. ಮಲೇಶಿಯಾದ ಬಾಂಗಿಯಲ್ಲಿ ನಡೆದ ಟಿ20 ವಿಶ್ವಕಪ್ ಏಷ್ಯಾ ಕ್ವಾಲಿಫೈಯರ್ ಎ ನಲ್ಲಿ ಮಂಗೋಲಿಯಾ ತಂಡ ಸಿಂಗಾಪುರ ವಿರುದ್ಧ ಕೇವಲ 10 ರನ್ಗೆ ಆಲೌಟ್ ಆಯಿತು.
ಮೊದಲು ಬ್ಯಾಟಿಂಗ್ ಮಾಡಿದ ಮಂಗೋಲಿಯಾ ತಂಡವನ್ನು ಸಿಂಗಾಪೂರ್ ಕೇವಲ 10 ರನ್‌ಗಳಿಗೆ ಆಲೌಟ್ ಮಾಡಿತು. 10 ಓವರ್‌ಗಳಿಗೆ ಮಂಗೋಲಿಯಾ ತಂಡ 10 ರನ್ ಗಳಿಸಿತು. ತಂಡದ ಐವರು ಬ್ಯಾಟ್ಸ್‌ಮನ್‌ಗಳು ಡಕ್‌ಔಟ್ ಆದರೆ, ಉಳಿದ ನಾಲ್ವರು ಕೇವಲ ಒಂದು ರನ್ ಮಾತ್ರ ಗಳಿಸಿದರು. ಉಳಿದ ಇಬ್ಬರು ತಲಾ 2 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರು.
MONGOLIA Created Unwanted & Embarrassing Record As Today While Playing vs Singapore In Asia Sub Qualifier A They Bundled Out At Score Of Just 10 After Playing Almost 10 Overs
This is Lowest Ever Score Of T20I Equalling Record Of Isle Of Man (10) vs Spain#CricketTwitter pic.twitter.com/vOat25zAg0
— Daily Cricket (@dailycricketDC) September 5, 2024
ಸಿಂಗಾಪುರ ಬೌಲರ್‌ಗಳ ಪೈಕಿ ಹರ್ಷ ಭಾರದ್ವಾಜ್ 6 ವಿಕೆಟ್ ಪಡೆದು ಮಿಂಚಿದರು. ಬಳಿಕ 10 ರನ್‌ಗಳ ಸರಳ ಗುರಿಯನ್ನು ಸಿಂಗಾಪುರ 5 ಎಸೆತಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು ಮುರಿಯಿತು. ಈ ಪಂದ್ಯ ಟಿ20 ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದಿದೆ. (ಏಜೆನ್ಸೀಸ್)
ಮಹಿಳಾ ಕಾಲೇಜಿನ ಟಾಯ್ಲೆಟ್ ಒಳಗೆ ವಿಷಕಾರಿ ಹಾವುಗಳ ರಾಶಿ! ಸಿಡಿದೆದ್ದ ನಟ, ಸಂಗೀತ ನಿರ್ದೇಶಕ ಜಿವಿ ಪ್ರಕಾಶ್
ಸಾಯೋಕು ಮುನ್ನ ರೇಣುಕಾಸ್ವಾಮಿ ಕಣ್ಣೀರಿಟ್ಟು ಪ್ರಾಣಭಿಕ್ಷೆ ಕೇಳ್ತಿರೋ ಫೋಟೋ ವೈರಲ್