Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಗುಂಪು ಜೀವ ವಿಮೆ ವರ್ಗಾವಣೆ ಸಾಧ್ಯವೇ?

Monday, 15.10.2018, 3:01 AM       No Comments

ಉತ್ತರಿಸುವವರು: ಸಿ.ಎಸ್​.ಸುಧೀರ್​

ನಾನು ಮಂಗಳೂರಿನ ಬಹುರಾಷ್ಟ್ರೀಯ ಕಂಪನಿಯೊಂದಕ್ಕೆ ಕೆಲಸ ಮಾಡುತ್ತಿದ್ದೇನೆ. ಮಾಸಿಕ ಸಂಬಳ 1 ಲಕ್ಷ ರೂ. ಅಲ್ಲಿ ಕಂಪನಿ ವತಿಯಿಂದ 50 ಲಕ್ಷ ರೂ. ಮೌಲ್ಯದ ಜೀವ ವಿಮೆ ಒದಗಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ನಾನು ಆ ಕಂಪನಿ ತೊರೆಯುತ್ತಿದ್ದು, ಆ 50 ಲಕ್ಷ ರೂ. ವಿಮೆಯನ್ನು ನನ್ನ ವೈಯಕ್ತಿಕ ವಿಮೆಯಾಗಿ ವರ್ಗಾಯಿಸಿಕೊಳ್ಳಬಹುದೆ? ಒಂದೊಮ್ಮೆ ವರ್ಗಾವಣೆ ಸಾಧ್ಯವಾದರೆ ಇನ್ಶೂರೆನ್ಸ್ ಪ್ರೀಮಿಯಂ ಎಷ್ಟಿರುತ್ತದೆ? ಹೀಗೆ ವಿಮೆ ವರ್ಗಾವಣೆ ಮಾಡಿಕೊಳ್ಳುವುದು ಒಳಿತೇ ಅಥವಾ ಹೊಸದಾಗಿ ಟಮ್ರ್ ಟೈಫ್ ಇನ್ಶೂರೆನ್ಸ್ ಖರೀದಿಸುವುದು ಸರಿಯೇ?

ಗುಂಪು ಜೀವ ವಿಮೆಯನ್ನು ವೈಯಕ್ತಿಕ ಜೀವ ವಿಮೆಯನ್ನಾಗಿ ವರ್ಗಾಯಿಸಲು ಸಾಧ್ಯವಿಲ್ಲ. ಜೀವ ವಿಮೆಗಳಲ್ಲಿ ಈ ಅವಕಾಶ ಕಲ್ಪಿಸಿಲ್ಲ. ಕೆಲ ಜೀವ ವಿಮೆಗಳಲ್ಲಿ ವರ್ಗಾವಣೆ (ಪೋರ್ಟೆಬಲಿಟಿ) ಸಾಧ್ಯವಿದ್ದರೂ ಅದರಿಂದ ಹೆಚ್ಚಿನ ಲಾಭವಿಲ್ಲ. ಹೊಸದಾಗಿ ವಿಮೆ ಮಾಡಿಸಿದರೂ ಹಳೆಯ ವಿಮೆಯಲ್ಲಿರುವ ಎಲ್ಲ ಅನುಕೂಲಗಳು ನಿಮಗೆ ಸಿಗುತ್ತವೆ. ಜೀವ ವಿಮೆಯಲ್ಲಿ ವೇಯ್ಟಿಂಗ್ ಪೀರಿಯಡ್ ಇಲ್ಲ. ಹಾಗಾಗಿ, ಹಳೆಯ ಕಂಪನಿಯ ಇನ್ಶೂರೆನ್ಸ್ ಪೋರ್ಟೆಬಲಿಟಿ ಚಿಂತೆ ಬಿಟ್ಟು ನೀವು ಹೊಸದಾಗಿ ಇನ್ಶೂರೆನ್ಸ್ ಮಾಡಿಸಿಕೊಳ್ಳುವುದು ಉತ್ತಮ.

ಆಕಸ್ಮಿಕ ಸನ್ನಿವೇಶಗಳನ್ನು ನಾವು ಎದುರಿಸಬೇಕಾದರೆ ನಮ್ಮ ಆದಾಯದ 10ರಿಂದ 15 ಪಟ್ಟು ವಿಮೆ ಪಡೆಯಬೇಕು. ಪ್ರತಿಯೊಂದು ಕುಟುಂಬವೂ ಜೀವ ವಿಮೆ, ಆರೋಗ್ಯ ವಿಮೆಯನ್ನು ಕಡ್ಡಾಯವಾಗಿ ಹೊಂದಿರಲೇಬೇಕು. ನಿಮ್ಮ ಪರಿಸ್ಥಿತಿಯನ್ನು ಅವಲೋಕಿಸಿದಾಗ ನೀವು 1ರಿಂದ 2 ಕೋಟಿ ರೂ. ಮೊತ್ತದ ಇನ್ಶೂರೆನ್ಸ್ ಕವರೇಜ್ ಹೊಂದಿರಬೇಕು. ಸುಮಾರು 13ರಿಂದ 23 ಸಾವಿರ ರೂ. ಮೊತ್ತದ ವಾರ್ಷಿಕ ಪ್ರೀಮಿಯಂ ಕಟ್ಟಿದರೆ 1ರಿಂದ 2 ಕೋಟಿ ರೂ. ಮೊತ್ತದ ಟಮ್ರ್ ಲೈಫ್ ಇನ್ಶೂರೆನ್ಸ್ ಸಿಗುತ್ತದೆ. ಇದನ್ನು ಪಡೆದುಕೊಳ್ಳುವುದು ಅಗತ್ಯ ಎನ್ನುವುದು ನನ್ನ ಸಲಹೆ. ಮದುವೆಯಾಗಿ ಮಕ್ಕಳಿರುವವರು, ನಿವೃತ್ತಿ ಹೊಂದಿರುವ ಪಾಲಕರ ಹೊಣೆ ಹೊತ್ತಿರುವವರು, ಹೆಚ್ಚು ಸಾಲ ಮಾಡಿರುವವರು ಮತ್ತು ಬಿಸಿನೆಸ್ ಮಾಡುವವರು ಹೆಚ್ಚು ಪ್ರಮಾಣದಲ್ಲಿ ಇನ್ಶೂರೆನ್ಸ್ ಹೊಂದಿರಬೇಕೆಂಬುದು ನಿಯಮ. ಅದೇ ನಿಯಮ ನಿಮಗೂ ಅನ್ವಯಿಸುತ್ತದೆ. ಕೂಡಲೇ ಸೂಕ್ತ ವಿಮೆ ಖರೀದಿಸಿ ನೆಮ್ಮದಿಯಿಂದಿರಿ.

ಮದುವೆಯ ಸಮಯದಲ್ಲಿ ಪಡೆಯುವ ಉಡುಗೊರೆಗೆ ಆದಾಯ ತೆರಿಗೆ ಅನ್ವಯಿಸುವುದೇ? ಇದನ್ನು ಆದಾಯ ತೆರಿಗೆ ರಿಟರ್ನ್್ಸ ಸಲ್ಲಿಸುವಾಗ ನಮೂದಿಸಬೇಕೆ?

| ಹೆಸರು, ಊರು ಬೇಡ

ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಮದುವೆ ಸಮಾರಂಭಗಳಲ್ಲಿ ಪಡೆಯುವ ಉಡುಗೊರೆ ತೆರಿಗೆ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೂ ನೀವು ಪಡೆದ ಎಲ್ಲ ಉಡುಗೊರೆಗಳ ವಿವರಗಳನ್ನು ನಮೂದಿಸಿ ಇಡುವುದು ಒಳ್ಳೆಯದು. ಅದರಲ್ಲೂ ದುಬಾರಿ ಗಿಫ್ಟ್​ಗಳನ್ನು ಪಡೆದಿದ್ದ ಪಕ್ಷದಲ್ಲಿ ಗಿಫ್ಟ್ ಡೀಡ್ ಮಾಡಿಸಿಕೊಳ್ಳುವುದು ಉತ್ತಮ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೇಳಿದ ಪಕ್ಷದಲ್ಲಿ ನೀವು ದಾಖಲೆಗಳನ್ನು ಒದಗಿಸಲು ಇದು ಅನುಕೂಲವಾಗುತ್ತದೆ.

ನನ್ನ ವಯಸ್ಸು 29 ವರ್ಷ. ನಾನು 2ರಿಂದ 2.5 ಲಕ್ಷ ರೂ.ಹಣವನ್ನು ಎರಡರಿಂದ ಮೂರು ವರ್ಷಗಳ ಅವಧಿಗೆ ಹೂಡಿಕೆ ಮಾಡಲು ಚಿಂತಿಸಿದ್ದೇನೆ. ಫಿಕ್ಸೆಡ್ ಡೆಪಾಸಿಟ್​ಗಿಂತ ಹೆಚ್ಚು ಹಣ ಗಳಿಕೆಗೆ ಅವಕಾಶವಿರುವ ಕಡೆ ಹೂಡಿಕೆ ಮಾಡಬೇಕು. ಲಿಕ್ವಿಡ್ ಫಂಡ್​ಗಳಲ್ಲಿ ಹಂತಹಂತವಾಗಿ ಹೂಡಿಕೆ ಮಾಡುವುದು ಸರಿಯಾದ ನಿರ್ಧಾರವೇ ? ಆಯ್ಕೆಗಳೇನು ತಿಳಿಸಿ.

| ಮೈಸೂರು ಸುರೇಶ್

ಮೂರು ವರ್ಷಗಳ ಕಾಲ ಡೆಟ್ ಫಂಡ್​ಗಳಲ್ಲಿ ಹೂಡಿಕೆ ಮಾಡಿದರೆ ನಿಮಗೆ ಕ್ಯಾಪಿಟಲ್ ಗೇನ್ ತೆರಿಗೆ ಕಡಿಮೆಯಾಗುತ್ತದೆ. ಇದು ಪರೋಕ್ಷವಾಗಿ ಎಫ್​ಡಿಗಿಂತ ಹೆಚ್ಚು ಹಣ ಗಳಿಸಲು ಸಹಕಾರಿಯಾಗುತ್ತದೆ. ವಿವಿಧ ಕಂಪನಿಗಳ ಶಾರ್ಟ್ ಟಮ್ರ್ ಡೆಟ್ ಫಂಡ್​ಗಳನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಇವುಗಳಲ್ಲಿ ನೀವು ಹಂತಹಂತವಾಗಿ ಹೂಡಿಕೆ ಮಾಡುವುದು ಬೇಕಿಲ್ಲ. ಒಂದೇ ಬಾರಿಗೆ ಗರಿಷ್ಠ ಹಣ ಹೂಡಿಕೆ ಮಾಡಲು ಇಲ್ಲಿ ಅವಕಾಶವಿದೆ.

30 ವರ್ಷದ ನಾನು ಅವಿವಾಹಿತನಾಗಿದ್ದು ಬೆಂಗಳೂರಿನಲ್ಲಿ ವಾಸವಿದ್ದೇನೆ. ಇತ್ತೀಚೆಗಷ್ಟೇ ಒಂದು ಹೆಲ್ತ್ ಇನ್ಶೂರೆನ್ಸ್ ಮಾಡಿಸಲು ಮುಂದಾದೆ. ಅರ್ಜಿ ಭರ್ತಿ ಮಾಡುತ್ತಿದ್ದಂತೆಯೇ ಹೆಲ್ತ್ ಚೆಕ್ ಮಾಡಿಸಿದ್ದೀರಾ ಎಂದು ಇನ್ಶೂರೆನ್ಸ್ ಕಂಪನಿಯ ಎಕ್ಸಿಕ್ಯೂಟಿವ್ ಪ್ರಶ್ನಿಸಿದ. ಕಳೆದ 5 ವರ್ಷಗಳ ಲ್ಯಾಬ್ ರಿಪೋರ್ಟ್, ಮೆಡಿಕಲ್ ಸ್ಕ್ಯಾನಿಂಗ್ ಇತ್ಯಾದಿ ದಾಖಲೆಗಳ ಬಗ್ಗೆ ಆತನಿಗೆ ಮಾಹಿತಿ ಬೇಕಿತ್ತು. ಅರ್ಜಿಯಲ್ಲಿ ಈ ಬಗ್ಗೆ ಕೇಳಿದ್ದೇಕೆ ಎಂದು ತಿಳಿದುಕೊಳ್ಳಲು ನಾನು ಕಾತುರನಾಗಿದ್ದೇನೆ.

| ಭರತ್, ಬೆಂಗಳೂರು

ಇದು ರೂಢಿಯಲ್ಲಿರುವ ಸಹಜ ಪದ್ಧತಿ. ಆತಂಕಪಡುವ ಅಗತ್ಯವಿಲ್ಲ.ಹೆಚ್ಚಿನ ವಿಮಾ ಸಂಸ್ಥೆಗಳು ವಿಮೆ ನೀಡುವ ಮೊದಲು ಸಂಪೂರ್ಣ ಆರೋಗ್ಯ ತಪಾಸಣೆ ಮಾಡುತ್ತವೆ. ನಿಮ್ಮ ಪ್ರಸ್ತುತ ಆರೋಗ್ಯದ ಬಗ್ಗೆ ಅವರು ತಿಳಿದುಕೊಳ್ಳಲು ಬಯಸುತ್ತಾರೆ ಮತ್ತು ಯಾವುದಾದರೂ ದೀರ್ಘಕಾಲಿಕ ಕಾಯಿಲೆಗಳಿವೆಯೇ ಎಂದು ಪರಿಶೀಲಿಸುತ್ತಾರೆ. ಕೆಲವು ರೋಗಗಳಿಗೆ ವಿಮಾ ರಕ್ಷಣೆ ಸಿಗುವುದೇ ಇಲ್ಲ. ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ಕೆಲವು ರೋಗಗಳು ನಿಮ್ಮ ಪ್ರೀಮಿಯಂ ಮೊತ್ತದಲ್ಲಿ ಏರಿಕೆ ಉಂಟುಮಾಡಬಹುದು. ಈ ದೃಷ್ಟಿಯಿಂದ ಆರೋಗ್ಯ ತಪಾಸಣೆಗೆ ಒಳಗಾಗುವುದು ಅಥವಾ ಆರೋಗ್ಯ ತಪಾಸಣೆಯ ದಾಖಲೆಗಳನ್ನು ಒದಗಿಸುವುದು ಪ್ರಕ್ರಿಯೆಯ ಒಂದು ಭಾಗವಾಗಿದೆ. ವಯಸ್ಸು ಚಿಕ್ಕದಿದ್ದಾಗ ಆರೋಗ್ಯ ತಪಾಸಣೆಗೆ ಪರಿಗಣಿಸುವ ಅಂಶಗಳು ಕಡಿಮೆ ಇರುತ್ತವೆ. ವಯಸ್ಸಾದಂತೆ ಆರೋಗ್ಯ ತಪಾಸಣೆಗೆ ಪರಿಗಣಿಸುವ ಮಾನದಂಡಗಳಲ್ಲಿ ವ್ಯತ್ಯಾಸವಾಗುತ್ತದೆ.

ವಾರನ್ ಬಫೆಟ್ ಮನಿ ಟಿಪ್ಸ್
  1. ನಾನು ಶ್ರೀಮಂತ ವ್ಯಕ್ತಿಯಾಗುವೆನೆಂದು ನನಗೆ ಯಾವತ್ತೂ ಚೆನ್ನಾಗಿ ಗೊತ್ತಿತ್ತು; ಅದನ್ನು ನಾನು ಒಂದು ಕ್ಷಣಕ್ಕಾದರೂ ಶಂಕಿಸಿರಲಿಲ್ಲ.
  2. ಔದ್ಯಮಿಕ ಜಗತ್ತಿನಲ್ಲಿ ಯಾವತ್ತೂ ಹಿಂಬದಿಯ ದೃಶ್ಯ ಕಾಣಿಸುವ ಕನ್ನಡಿ ಸ್ಪಷ್ಟವಾಗಿರುತ್ತದೆ. ಆದರೆ ಎದುರುಗಡೆಯ ದೃಶ್ಯ ನೋಡುವ ವಿಂಡ್ ಸ್ಕ್ರೀನ್ ಅಸ್ಪಷ್ಟವಾಗಿರುತ್ತದೆ.
  3. ನೀವೇನು ಪಾವತಿಸುವಿರೋ ಅದು ಬೆಲೆ, ನೀವೇನು ಪಡೆಯುವಿರೋ ಅದು ಮೌಲ್ಯ.

ನೀವೂ ಪ್ರಶ್ನೆ ಕೇಳಬಹುದು

ಮನಿ ಮಾತು ಅಂಕಣದಲ್ಲಿ ಆರ್ಥಿಕ ವಿಚಾರಗಳ ಬಗ್ಗೆ ಮಾಹಿತಿ ವಿಶ್ಲೇಷಣೆಗಳನ್ನು ನೀಡುವುದು ಮಾತ್ರವಲ್ಲ, ಓದುಗರ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಲಾಗುತ್ತದೆ. ಹೂಡಿಕೆ, ಉಳಿತಾಯ, ತೆರಿಗೆ, ವಿಮೆ, ಷೇರು ಮಾರುಕಟ್ಟೆ ಹೀಗೆ ವಿತ್ತರಂಗಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕಳುಹಿಸಬಹುದು. ನಮ್ಮ ತಜ್ಞರ ತಂಡದವರು ಉತ್ತರ ನೀಡುತ್ತಾರೆ. ಪ್ರಶ್ನೆ ಕಳಿಸುವವರು ಕಡ್ಡಾಯವಾಗಿ ಮೊಬೈಲ್ ಸಂಖ್ಯೆ ನಮೂದಿಸಿ. ಪ್ರಶ್ನೆ ಕಳಿಸಬೇಕಾದ ಇಮೇಲ್: [email protected]

Leave a Reply

Your email address will not be published. Required fields are marked *

Back To Top