ಶೃಂಗೇರಿ ಕ್ಷೇತ್ರದಲ್ಲಿ ಹೆಚ್ಚಿದ ಭ್ರಷ್ಟಾಚಾರ

ಬಾಳೆಹೊನ್ನೂರು: ಶೃಂಗೇರಿ ಕ್ಷೇತ್ರದಲ್ಲಿ ಎಂಟು ತಿಂಗಳಿನಿಂದ ಹಕ್ಕುಪತ್ರ ವಿತರಣೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ಆರೋಪಿಸಿದರು.

ಎಂಟು ತಿಂಗಳಿನಿಂದ ಶೃಂಗೇರಿ ಕ್ಷೇತ್ರದಲ್ಲಿ ಹೊಸ ಯೋಜನೆಗಳು, ಕಾರ್ಯಕ್ರಮಗಳು ನಡೆಯುತ್ತಿಲ್ಲ. ಈ ಹಿಂದಿನ ಅವಧಿಯಲ್ಲಿ ಮಂಜೂರಾದ, ಬಿಡುಗಡೆಯಾದ ಯೋಜನೆಗಳು ಇಂದಿಗೂ ಮುಂದುವರಿಯುತ್ತಿವೆ ಎಂದು ಸುದ್ದಿಗಾರರಿಗೆ ತಿಳಿಸಿದರು.

ನನ್ನ ಅವಧಿಯಲ್ಲಿಯಲ್ಲಿ ಬಾಕಿ ಇದ್ದ ಫಾರಂ ನಂ.50, 53, 94ಸಿ ಹಕ್ಕುಪತ್ರಗಳನ್ನು ಶಾಸಕರು ವಿತರಿಸುತ್ತಿದ್ದಾರೆ. ಫಾರಂ ನಂ.50, 53ರ ಅಡಿ ಸಲ್ಲಿಸಿದ ಅರ್ಜಿ ಪರಿಶೀಲನೆಗೆ ಸರ್ಕಾರದಿಂದ ರಚಿಸಿರುವ ಹೊಸ ಸಮಿತಿಯ ನೂತನ ಸದಸ್ಯರ ಬಗ್ಗೆ ಶಾಸಕರು ಮಾಹಿತಿ ನೀಡಬೇಕು ಎಂದರು.

ಎನ್.ಆರ್.ಪುರ ಬೈಪಾಸ್ ರಸ್ತೆಗೆ ಸಿಆರ್​ಎಫ್ ಯೋಜನೆ ಅಡಿ 12 ಕೋಟಿ ರೂ. ಹಣ ಮಂಜೂರಾಗಿ ಟೆಂಡರ್ ಕರೆದಿದ್ದರೂ ಇನ್ನೂ ಕಾಮಗಾರಿ ಪ್ರಾರಂಭವಾಗಿಲ್ಲ. ಆ ರಸ್ತೆ ಸಂಪೂರ್ಣ ಹದಗೆಟ್ಟು ಸಾರ್ವಜನಿಕರು ತಿರುಗಾಡದ ಸ್ಥಿತಿ ನಿರ್ವಣವಾಗಿದೆ. ಕ್ಷೇತ್ರದ ವಿವಿಧೆಡೆ ಅರಣ್ಯ ಇಲಾಖೆ ಸಿಬ್ಬಂದಿ ಕಾಂಗ್ರೆಸ್ ಮುಖಂಡರ ಒತ್ತಾಯಕ್ಕೆ ಮಣಿದು, ಬಡವರು ಮಾಡಿರುವ ಒತ್ತುವರಿಗೆ ಟ್ರೆಂಚ್ ನಿರ್ವಿುಸುತ್ತಿದ್ದಾರೆ ಎಂದು ಆರೋಪಿಸಿದರು.

ನನ್ನ ಅವಧಿಯಲ್ಲಿ ಶೃಂಗೇರಿ ಕ್ಷೇತ್ರದ ವಿವಿಧ ಕಾಮಗಾರಿಗೆ ಸಿಆರ್​ಎಫ್ ಯೋಜನೆಯಡಿ 48 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಕೂಡಲೇ ಅದರ ಟೆಂಡರ್ ಕರೆದು ಕಾಮಗಾರಿ ನಡೆಸಬೇಕಿದೆ. ಕೇವಲ ತನ್ನ ಅವಧಿಯಲ್ಲಿ ಮಂಜೂರಾದ ಕಾಮಗಾರಿ ನಡೆಸದೆ ಶಾಸಕರು ಸರ್ಕಾರದಿಂದ ಕ್ಷೇತ್ರಕ್ಕೆ ಇನ್ನಷ್ಟು ಅನುದಾನ ಬಿಡುಗಡೆ ಮಾಡಿಸಿ ಹೊಸ ಕಾಮಗಾರಿ ನಡೆಸಬೇಕು ಎಂದರು.

ಸ್ವ ಪಕ್ಷಕ್ಕೆ ಬ್ಲಾಕ್​ವೆುೕಲ್: ಬಿಜೆಪಿ ನಮ್ಮನ್ನು ಪಕ್ಷಕ್ಕೆ ಆಹ್ವಾನಿಸುತ್ತಿದೆ ಎಂದು ಕೆಲವು ವೀಕ್​ವುನಸ್ಥಿತಿ ಹೊಂದಿರುವ ಶಾಸಕರು ವಿನಾಕಾರಣ ಸುಳ್ಳು ಹೇಳುತ್ತ ತಾವಿರುವ ಪಕ್ಷಕ್ಕೆ ಬ್ಲಾಕ್​ವೆುೕಲ್ ಮಾಡುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ಲೇವಡಿ ಮಾಡಿದರು.

ಚುನಾವಣಾ ಫಲಿತಾಂಶ ಬಂದ ತಕ್ಷಣ ಹಾಗೂ ನಂತರ ವಿರೋಧ ಪಕ್ಷ ನಮ್ಮನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿಕೆ ನೀಡಿ ಪ್ರಚಾರ ಪಡೆದರು. ನಾನು, ಸಿ.ಟಿ.ರವಿ ಮೂರು ಬಾರಿ ಶಾಸಕರಾದಾಗ ಬೇರೆ ಯಾವುದೇ ಪಕ್ಷ ನಮ್ಮನ್ನು ಸೆಳೆಯುವ ಪ್ರಯತ್ನ ಮಾಡಿಲ್ಲ. ಕೆಲವು ವೀಕ್ ಮನಸ್ಥಿತಿಯ ಶಾಸಕರು ಆ ಪಕ್ಷ ನಮ್ಮನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ತಮ್ಮ ಪಕ್ಷಕ್ಕೇ ತಾವೇ ಬ್ಲಾಕ್ ಮಾಡುವ ತಂತ್ರ ಅನುಸರಿಸುತ್ತಿದ್ದಾರೆ ಎಂದು ದೂರಿದರು.