More

    ಮನಿಮಾತು| ಇಲೆಕ್ಟ್ರಿಕ್ ವಾಹನಕ್ಕೆ ತೆರಿಗೆ ವಿನಾಯಿತಿ ಎಷ್ಟು?

    ಮನಿಮಾತು| ಇಲೆಕ್ಟ್ರಿಕ್ ವಾಹನಕ್ಕೆ ತೆರಿಗೆ ವಿನಾಯಿತಿ ಎಷ್ಟು?ನಾನು ಸಾಫ್ಚ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಸದ್ಯದಲ್ಲೇ ಇಲೆಕ್ಟ್ರಿಕ್ ವಾಹನ ಖರೀದಿಸುವ ಉದ್ದೇಶವಿದೆ. ಇಲೆಕ್ಟ್ರಿಕ್ ವಾಹನ ಖರೀದಿಸಿದರೆ ತೆರಿಗೆ ವಿನಾಯಿತಿ ಸಿಗುತ್ತೆ ಅಂತ ಶೋರೂಂನವರು ಹೇಳುತ್ತಿದ್ದಾರೆ. ಯಾವ ರೀತಿಯ ತೆರಿಗೆ ಅನುಕೂಲವಾಗುತ್ತದೆ ದಯವಿಟ್ಟು ತಿಳಿಸಿ.

    | ಸಚಿನ್ ಬೆಂಗಳೂರು

    ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಇಇಬಿ ಅಡಿಯಲ್ಲಿ ಇಲೆಕ್ಟ್ರಿಕ್ ವೆಹಿಕಲ್ ಖರೀದಿಗೆ ಪಡೆಯುವ ಸಾಲದ ಮೇಲಿನ ಬಡ್ಡಿಗೆ ರೂ. 1.5 ಲಕ್ಷದ ವರೆಗೆ ವಿನಾಯಿತಿ ಸಿಗಲಿದೆ. ಏಪ್ರಿಲ್ 1,2019 ರಿಂದ ಮಾರ್ಚ್ 2023 ರ ವರೆಗೆ ಪಡೆಯುವ ಸಾಲಗಳಿಗೆ ಈ ನಿಯಮ ಅನ್ವಯ.

    ನಾನು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ರೂ. 11 ಲಕ್ಷ ವಾರ್ಷಿಕ ಆದಾಯ. ತುರ್ತು ನಿಧಿಯಲ್ಲಿ ಎಷ್ಟು ಹಣ ಇಟ್ಟುಕೊಳ್ಳಬೇಕು? ತುರ್ತು ನಿಧಿಯ ಹಣವನ್ನು ಯಾವ ಹೂಡಿಕೆಗಳಲ್ಲಿ ಮೀಸಲಿಟ್ಟರೆ ಒಳಿತು ವಿವರಿಸಿ.

    | ರೂಪೇಶ್ ಕುಮಾರ್ ಪಿರಿಯಾಪಟ್ಟಣ

    ಹಣಕಾಸಿನ ವಿಷಯದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ಬೇರೆ ಬೇರೆ ಆದ್ಯತೆಗಳಿರುತ್ತವೆ. ನಾನು ಮನೆ ಖರೀದಿ ಮಾಡಲೇ? ಹೊಸ ಕಾರ್ ಖರೀದಿಗೆ ಹೂಡಿಕೆ ಮಾಡಬಹುದೇ? ಮಕ್ಕಳ ಶಿಕ್ಷಣಕ್ಕೆ ಹಣ ಉಳಿಸುವುದು ಹೇಗೆ? ನಿವೃತ್ತಿ ಬದುಕಿಗೆ ಯಾವಾಗ ಹೂಡಿಕೆ ಆರಂಭಿಸಬೇಕು? ಹೀಗೆ ಹಣಕಾಸಿನ ಸ್ಥಿತಿಗತಿ ಆಧರಿಸಿ ಪ್ರತಿಯೊಬ್ಬರೂ ತಮ್ಮದೇ ಆದ್ಯತೆಗಳನ್ನು ಹೊಂದಿರುತ್ತಾರೆ. ಇಂತಹ ಆದ್ಯತೆಗಳನ್ನು ಮುಂದೂಡಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ವೈಯಕ್ತಿಕ ಹಣಕಾಸು ನಿರ್ವಹಣೆಯಲ್ಲಿ ತುರ್ತು ನಿಧಿ (ಎಮರ್ಜೆನ್ಸಿ ಫಂಡ್) ಕಡೆಗಣಿಸಬಾರದು. ಹಣಕಾಸಿನ ತುರ್ತು ಅಗತ್ಯ ಹೇಳಿ ಕೇಳಿ ಬರುವುದಿಲ್ಲ. ಗಂಭೀರ ಅನಾರೋಗ್ಯ, ಅಪಘಾತ, ಉದ್ಯೋಗ ನಷ್ಟ, ಬಿಸಿನೆಸ್ ಬಿಕ್ಕಟ್ಟಿನಂತಹ ಸಂದರ್ಭಗಳು ಎದುರಾದಾಗ ಆ ತುರ್ತು ಸಂದರ್ಭವನ್ನು ಎದುರಿಸಲು ನಿಮಗೆ ಹಣಕಾಸಿನ ಅಗತ್ಯ ಬೀಳುತ್ತದೆ. ಹಾಗಾಗಿ ಪ್ರತಿಯೊಬ್ಬರು ವೈಯಕ್ತಿಕ ಹಣಕಾಸು ನಿರ್ವಹಣೆಯಲ್ಲಿ ತುರ್ತು ನಿಧಿಗೆ ಆದ್ಯತೆ ನೀಡಬೇಕು. ನಿಮ್ಮ ತಿಂಗಳ ಖರ್ಚಿನ 6 ಪಟ್ಟು ಹಣ ನಿಮ್ಮ ತುರ್ತು ನಿಧಿಯಲ್ಲಿರಬೇಕು ಎನ್ನುವುದು ಮಾನದಂಡ. ಸರಳವಾಗಿ ಹೇಳುವುದಾದರೆ ನಿಮ್ಮ ತಿಂಗಳ ಖರ್ಚು ರೂ. 50 ಸಾವಿರ ಎಂದಾದರೆ, ನಿಮ್ಮ ತುರ್ತು ನಿಧಿಯಲ್ಲಿ ರೂ. 3 ಲಕ್ಷ ಹಣ ಇರಬೇಕು. ತುರ್ತು ನಿಧಿಯಲ್ಲಿರುವ ಅರ್ಧದಷ್ಟು ಹಣ ಅಂದರೆ ರೂ. 1.5 ಲಕ್ಷ ವನ್ನು ನೀವು ಉಳಿತಾಯ ಖಾತೆಯಲ್ಲಿ ಇಟ್ಟುಕೊಳ್ಳಬೇಕು. ಉಳಿತಾಯ ಖಾತೆಯಲ್ಲಿ ತುರ್ತು ನಿಧಿಯ ಹಣ ಇಡುವುದರಿಂದ ಶೇ 4 ರ ಬಡ್ಡಿ ದರದ ಲಾಭ ಮಾತ್ರ ಸಿಗುತ್ತದೆ. ಆದರೆ ಉಳಿತಾಯ ಖಾತೆಯಲ್ಲಿ ಹಣವಿದ್ದಾಗ ನಿಮಗೆ ಬೇಕೆಂದಾಗ ಹಣ ಸಿಗುತ್ತದೆ. ಇನ್ನು ಇನ್ನುಳಿದ ರೂ. 1.5 ಲಕ್ಷವನ್ನು ನೀವು ಲಿಕ್ವಿಡ್ ಫಂಡ್ ಗಳಲ್ಲಿ ತೊಡಗಿಸಬಹುದು. ಲಿಕ್ವಿಡ್ ಫಂಡ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ನಷ್ಟು, ಅಂದರೆ ಶೇ. 7 ರಷ್ಟು ಬಡ್ಡಿ ಲಾಭ ಲಭಿಸುತ್ತದೆ. ಈ ಫಂಡ್ ನಲ್ಲಿ ಅಗತ್ಯವಿದ್ದಾಗ ತಕ್ಷಣ ಹಣ ಹಿಂಪಡೆಯಲು ಸಾಧ್ಯ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts