More

    ಮನಿಮಾತು| ಕಾರ್ ಲೋನ್ ಇದ್ದಾಗ ಹೋಮ್ ಲೋನ್ ಸಿಗುವುದೇ?

    ಮನಿಮಾತು| ಕಾರ್ ಲೋನ್ ಇದ್ದಾಗ ಹೋಮ್ ಲೋನ್ ಸಿಗುವುದೇ?ಪ್ರಿವೆಂಟಿವ್ ಹೆಲ್ತ್ ಚೆಕ್ ಅಪ್ (ಮುನ್ನೆಚ್ಚರಿಕೆ ವಹಿಸಲು ಮಾಡುವ ಆರೋಗ್ಯ ತಪಾಸಣೆ) ಮಾಡಿಸಿದರೆ ಸೆಕ್ಷನ್ 80 ಡಿ ಅಡಿಯಲ್ಲಿ ವಿನಾಯಿತಿ ಲಭ್ಯವಾಗುವುದೇ? ಇದು ಹೆಲ್ತ್ ಇನ್ಶೂರೆನ್ಸ್ ವಿನಾಯಿತಿಯ ಭಾಗವೇ ಅಥವಾ ಹೆಚ್ಚುವರಿಯಾಗಿ ಸಿಗುವ ಅನುಕೂಲವೇ? | ವಿದ್ಯಾ ಉಡುಪಿ

    ನಿಮ್ಮ ಪತಿ ಮಕ್ಕಳಿಗೆ ಮಾಡಿಸುವ ಆರೋಗ್ಯ ವಿಮೆಗೆ ನೀವು ರೂ. 25,000ರ ವರೆಗೆ ಸೆಕ್ಷನ್ 80 ಡಿ ಅಡಿಯಲ್ಲಿ ವಿನಾಯಿತಿ ಪಡೆಯಬಹುದು. ಹಿರಿಯ ನಾಗರಿಕರಿಗೆ ಮಾಡಿಸುವ ಆರೋಗ್ಯ ವಿಮೆ ಪ್ರೀಮಿಯಂ ಮೇಲೆ ರೂ. 50 ಸಾವಿರದ ವರೆಗೆ ವಿನಾಯಿತಿ ಸಿಗುತ್ತದೆ. ಇದಲ್ಲದೆ ಪ್ರಿವೆಂಟಿವ್ ಹೆಲ್ತ್ ಚೆಕ್ ಅಪ್ ( ಮುನ್ನೆಚ್ಚರಿಕೆಗಾಗಿ ಆರೋಗ್ಯ ತಪಾಸಣೆ) ಮಾಡಿಸಿದರೆ ಸೆಕ್ಷನ್ 80 ಡಿ ಅಡಿಯಲ್ಲಿ ಹೆಚ್ಚುವರಿಯಾಗಿ ರೂ. 5 ಸಾವಿರದ ವರೆಗೆ ವಿನಾಯಿತಿ ಸಿಗುತ್ತದೆ.

    ನಾನು ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು ವಾರ್ಷಿಕ ಆದಾಯ ರೂ. 11 ಲಕ್ಷ. ಈಗಾಗಲೇ ನಾನು ಕಾರ್ ಲೋನ್ ಪಡೆದಿದ್ದು ಮಾಸಿಕ ರೂ. 15 ಸಾವಿರ ಇಎಂಐ ಪಾವತಿಸುತ್ತಿದ್ದೇನೆ. ಇದಲ್ಲದೆ ಪರ್ಸನಲ್ ಲೋನ್ ಪಡೆದಿದ್ದು ಅದಕ್ಕೆ ರೂ. 10,000 ಕಟ್ಟುತ್ತಿದ್ದೇನೆ. ನಮ್ಮದೊಂದು 3040 ಸೈಟ್ ಇದ್ದು ಮನೆ ನಿರ್ಮಾಣ ಮಾಡುವ ಆಲೋಚನೆ ಇದೆ. ಈಗ ಗೃಹ ಸಾಲ ಪಡೆಯುವುದು ಸೂಕ್ತವೇ ತಿಳಿಸಿ.

    | ಶ್ರೀನಿವಾಸ ಕುಲಕರ್ಣಿ ಧಾರವಾಡ

    ಸಾಲ ಮಾಡುವುದು ತಪ್ಪಲ್ಲ, ಆದರೆ ಶೂಲಕ್ಕೆ ಸಿಲುಕುವಂತೆ ಸಾಲ ಮಾಡುವುದು ತಪ್ಪು. ನಿಮ್ಮ ನಿವ್ವಳ ಮಾಸಿಕ ಆದಾಯದ ಶೇ. 30ರಷ್ಟು ಮಾತ್ರ ನಿಮ್ಮ ಗೃಹ ಸಾಲದ ಇಎಂಐ ಆಗಿರಬೇಕು. ಹಾಗೆಯೇ ನಿಮ್ಮ ಕಾರ್ ಸಾಲ ನಿಮ್ಮ ನಿವ್ವಳ ಆದಾಯದ ಶೇ. 10ಕ್ಕಿಂತ ಜಾಸ್ತಿ ಇರಬಾರದು. ಇನ್ನು ಪರ್ಸನಲ್ ಲೋನ್ (ವೈಯಕ್ತಿಕ ಸಾಲ) ಕೂಡ ನಿಮ್ಮ ನಿವ್ವಳ ಆದಾಯದ ಶೇ. 10ಕ್ಕಿಂತ ಹೆಚ್ಚಿಗೆ ಇರಬಾರದು. ಸರಳವಾಗಿ ಹೇಳುವುದಾದರೆ ನಿಮ್ಮ ಎಲ್ಲಾ ಸಾಲಗಳ ಒಟ್ಟು ಮಾಸಿಕ ಕಂತು (ಇಎಂಐ) ಮಾಸಿಕ ನಿವ್ವಳ ಆದಾಯದ ಶೇ. 50ಕ್ಕಿಂತ ಹೆಚ್ಚಿರಬಾರದು. ಈ ನಿಯಮ ಪಾಲಿಸಿದಲ್ಲಿ ಸಾಲವಿದ್ದಾಗಲೂ ನೀವು ನೆಮ್ಮದಿಯಿಂದ ಇರಲು ಸಾಧ್ಯ.

    ವೈಯಕ್ತಿಕ ಅಪಘಾತ ವಿಮೆಯಿಂದ ಏನು ಅನುಕೂಲ. ಇದರ ಪ್ರೀಮಿಯಂ ಮೊತ್ತ ಎಷ್ಟು? ಯಾರಿಗೆ ಇದು ಹೆಚ್ಚು ಉಪಯುಕ್ತ?

    | ಬಸವರಾಜಪ್ಪ ಮಂಡ್ಯ

    ಅಪಘಾತದ ಸಂದರ್ಭದಲ್ಲಿ ನಿಮ್ಮ ಆದಾಯಕ್ಕೆ ಧಕ್ಕೆಯಾದರೆ ವೈಯಕ್ತಿಕ ಅಪಘಾತ ವಿಮೆಯು ಸುರಕ್ಷತೆಯನ್ನು ಒದಗಿಸುತ್ತದೆ. ಅಪಘಾತದಿಂದ ಸಾವು ಸಂಭವಿಸಿದಾಗ ಅಥವಾ ಗಾಯಗೊಂಡರೆ ಎದುರಾಗುವ ಆರ್ಥಿಕ ಸಮಸ್ಯೆಗೆ ಪರಿಹಾರ ಒದಗಿಸುವಲ್ಲಿ ಈ ವಿಮೆ ನೆರವಾಗುತ್ತದೆ. ಘಟನೆ ನಡೆದ 365 ದಿನಗಳ ಒಳಗೆ ಶಾಶ್ವತ ಅಥವಾ ಭಾಗಶಃ ಅಂಗವಿಕಲರಾದರೆ ಈ ವಿಮೆ ವ್ಯಾಪ್ತಿಗೆ ಒಳಪಡಬಹುದಾಗಿದೆ. ಕೆಲ ಇನ್ಶೂರೆನ್ಸ್ ಕಂಪನಿಗಳು ಮಕ್ಕಳ ಶಿಕ್ಷಣ ವೆಚ್ಚ ಮತ್ತು 30 ದಿನಗಳ ಆಸ್ಪತ್ರೆ ವೆಚ್ಚವನ್ನೂ ಭರಿಸುವ ಅನುಕೂಲ ನೀಡುತ್ತವೆ. ನಿಮ್ಮ ವಾರ್ಷಿಕ ಆದಾಯದ 2 ರಿಂದ 3 ಪಟ್ಟು ಕವರೇಜ್ ಪಡೆಯುವುದು ಒಳಿತು. ರೂ. 1 ಕೋಟಿ ಕವರೇಜ್ ಗೆ ರೂ. 5 ರಿಂದ 6 ಸಾವಿರ ಪ್ರೀಮಿಯಂ ಇರುತ್ತದೆ. ಕ್ಲೇಮ್ ಸೆಟಲ್ಮೆಂಟ್ ರೇಷಿಯೋ ಶೇ 90 ಕ್ಕಿಂತ ಜಾಸ್ತಿ ಇರುವ ಇನ್ಶೂರೆನ್ಸ್ ಕಂಪನಿಯಿಂದ ಕವರೇಜ್ ಪಡೆಯಿರಿ. ಹೆಚ್ಚುವರಿ ಕವರೇಜ್ ಮತ್ತು ಕವರೇಜ್ ಪರಿಗಣಿಸದ ಸಂದರ್ಭಗಳ ಬಗ್ಗೆ ಸ್ಪಷ್ಟತೆ ಪಡೆದುಕೊಳ್ಳಿ. ವಿದೇಶ ಪ್ರಯಾಣ ಮಾಡಿದ ಸಂದರ್ಭದಲ್ಲಿ ಈ ಕವರೇಜ್ ಅನ್ವಯವಾಗುವುದೇ ಅರಿಯಿರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts