‘ಮೊಮೊ’ ಡೆಡ್ಲಿ ಗೇಮ್​ಗೆ ಬಲಿಯಾದಳೇ ಭಾರತದ 10ನೇ ತರಗತಿ ವಿದ್ಯಾರ್ಥಿನಿ?

ಅಜ್ಮೀರ್: ಬ್ಲ್ಯೂ ವೇಲ್​ ನಂತರ ದೇಶಕ್ಕೆ ಕಾಲಿಟ್ಟಿರುವ ಆನ್​ಲೈನ್​ ಡೆಡ್ಲಿ ಗೇಮ್​ ‘ಮೊಮೊ’ ಭಾರತದಲ್ಲಿ ಮೊದಲನೇ ಬಲಿ ತೆಗೆದುಕೊಂಡಿದೆ.

ಪ್ರಾಥಮಿಕ ತನಿಖೆಯಲ್ಲಿ ಮೃತ ಬಾಲಕಿ ನೇಣು ಬಿಗಿದುಕೊಳ್ಳುವ ಮೊದಲು ತನ್ನ ಕೈ ಕಟ್​ ಮಾಡಿಕೊಂಡಿರುವುದು ತಿಳಿದು ಬಂದಿದೆ. ಆದರೆ, ಈ ಹಿಂದೆಯೂ ಲೈನ್​ ಗೇಮ್​ ಆಡಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳನ್ನು ಭೇದಿಸಿರುವುದರಿಂದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ಹತ್ತನೇ ತರಗತಿ ವಿದ್ಯಾರ್ಥಿನಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದು, ಪಾಲಕರು ಪೊಲೀಸರಿಗೆ ಮಗಳು ಆಡುತ್ತಿದ್ದ ಆನ್​ಲೈನ್​ ಗೇಮ್​ಗಳ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ಬಾಲಕಿಯ ಇಂಟರ್​ನೆಟ್​ ಬಳಕೆ ಹಾಗೂ ವೈಯಕ್ತಿಕ ವಸ್ತುಗಳನ್ನು ಪರಿಶೀಲಿಸಿದಾಗ ಆಕೆಯ ಸಾವಿನಲ್ಲಿ ಮೊಮೊ ಪಾತ್ರ ಇರುವುದು ಕಂಡು ಬಂದಿದೆ. ಆದರೆ, ತನಿಖೆ ನಡೆದ ನಂತರವಷ್ಟೇ ಬಾಲಕಿ ಮೊಮೊ ಆನ್​ಲೈನ್​ ಗೇಮ್​ನಿಂದ ಮೃತಪಟ್ಟಳೆ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂದು ತಿಳಿದು ಬರಲಿದೆ ಎಂದು ಮತ್ತೊಬ್ಬ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ನನ್ನ ಸೋದರಿ ಮೊಮೊ ಆನ್​ಲೈನ್​ ಚಾಲೆಂಜ್​ ತೆಗೆದುಕೊಳ್ಳುತ್ತಿದ್ದಳು ಎಂದಿರುವ ಮೃತಳ ಸೋದರ, ಮನೆಯಲ್ಲಿ ಹಾಗೂ ಶಾಲೆಯಲ್ಲಿ ಬಿಡುವಿದ್ದಾಗಲೆಲ್ಲಾ ಮೊಮೊ ಗೇಮ್​ ಆಡುತ್ತಿದ್ದಳು ಎಂದಿದ್ದಾರೆ.

ಮೊಮೊ ಭಾರತಕ್ಕೆ ಕಾಲಿಡುವ ಮುಂಚೆ ಅಮೆರಿಕಾ, ಅರ್ಜೆಂಟೀನಾ, ಫ್ರಾನ್ಸ್​, ಮೆಕ್ಸಿಕೊ ಮತ್ತು ಜರ್ಮನಿಯಲ್ಲಿ ತಲೆ ಎತ್ತಿತ್ತು. ಮೊಮೊ ಚಾಲೆಂಜ್​ ತೆಗೆದುಕೊಂಡು ಅರ್ಜೆಂಟೀನಾದ 12 ವರ್ಷದ ಬಾಲಕಿ ಮೃತಪಟ್ಟಿದ್ದಳು. (ಏಜೆನ್ಸೀಸ್​)

ಬ್ಲ್ಯೂ ವೇಲ್​ ಆಯ್ತು, ಇದೀಗ ಮಕ್ಕಳನ್ನು ಕಾಡಲು ಬಂತು ಡೆಡ್ಲಿ ಗೇಮ್​ ಮೊಮೊ!