More

    ಸೌಲಭ್ಯ ಪಡೆಯಲು ಡಿಜಿಟಲ್ ವ್ಯವಸ್ಥೆ ಸಹಕಾರಿ

    ಮೊಳಕಾಲ್ಮೂರು: ಅಂಗವಿಕಲರು ಯಾರ ಸಹಾಯ ಪಡೆಯದೆ ಡಿಜಿಟಲ್ ವ್ಯವಸ್ಥೆಯಡಿ ತಮ್ಮ ಹಕ್ಕು ಬಾಧ್ಯತಾ ಸವಲತ್ತುಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಹಸೀಲ್ದಾರ್ ಎಂ.ಬಸವರಾಜ್ ತಿಳಿಸಿದರು.

    ತಾಲೂಕು ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಅಂಗವಿಕಲ ಕಾರ್ಯಕರ್ತರ ಸಭೆ ನಡೆಸಿದ ಅವರು, ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಅರ್ಹತಾ ಪ್ರಮಾಣ ಪತ್ರ ಮತ್ತು ವೈದ್ಯಕೀಯ ದೃಢೀಕರಣ ಪತ್ರ ಅಗತ್ಯವಿದ್ದು, ಈ ದಾಖಲಾತಿಗಳನ್ನು ಆನ್‌ಲೈನ್ ಮೂಲಕ ನೋಂದಣಿ ಮಾಡಿಸಿ ಸ್ಮಾರ್ಟ್‌ಕಾರ್ಡ್ ಪಡೆದುಕೊಂಡರೆ ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

    ತಮ್ಮನ್ನು ಯಾರಾದರು ಹೀಯ್ಯಳಿಸುವ, ಹಿಂಸೆ ಕೊಡುವುದು, ಆರೈಕೆಯಲ್ಲಿ ತಾರತಮ್ಯ ಮಾಡಿದರೆ ತಕ್ಷಣ ನಮ್ಮ ಗಮನಕ್ಕೆ ತಂದರೆ ಕ್ರಮಕೈಗೊಳ್ಳತ್ತೇವೆ ಎಂದು ಭರವಸೆ ನೀಡಿದರು.

    ಅಂಗವಿಕಲರ ಕಾರ್ಯಕರ್ತ ದಾದಾಪೀರ್ ಮಾತನಾಡಿ, ತಾಲೂಕಿನಲ್ಲಿ 2541 ಅಂಗವಿಕಲರಿದ್ದು, ಇವರಿಗೆ ಸಕಾಲಕ್ಕೆ ಪ್ರೋತ್ಸಾಹಧನ ಸಿಗುವಂತಾಗಬೇಕು. ಅಗತ್ಯ ಸಾಧನಾ ಸಲಕರಣೆಗಳು ಮತ್ತು ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಶಿಕ್ಷಣ ನೀಡಲು ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಕೋರಿದರು.

    ಶಿರಸ್ತೇದಾರ್ ಅಂಜಿನಪ್ಪ, ಕಂದಾಯ ಅಧಿಕಾರಿ ಉಮೇಶ್, ಅಂಗವಿಕಲರ ಕಾರ್ಯಕರ್ತರಾದ ಟಿ.ಸುರೇಶ್, ಡಿ.ಟಿ.ರಾಮಪ್ಪ, ಎನ್.ಶಿವಣ್ಣ, ಶರಣಪ್ಪ, ಎನ್.ಶಿವಮ್ಮ, ವೆಂಕಟೇಶ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts