ಮೊಳಕಾಲ್ಮೂರು: ತಾಲೂಕಿನ ಉಚ್ಚಂಗಿದುರ್ಗ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಸಿಡಿಲಿಗೆ 8 ಮೇಕೆ ಸಾವಿಗೀಡಾಗಿದ್ದು, ಒಬ್ಬ ಕುರಿಗಾಹಿ ಅಸ್ವಸ್ಥಗೊಂಡಿದ್ದಾರೆ.
ಮೇಕೆಗಳು ಬಚ್ಚ ಬೊಮ್ಮಯ್ಯ ಅವರಿಗೆ ಸೇರಿದ್ದು, ಈತನ ಮಗ ಬೊಮ್ಮಯ್ಯ ಸಿಡಿಲ ಹೊಡೆತಕ್ಕೆ ಅಸ್ವಸ್ಥಗೊಂಡಿದ್ದು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ: ಸೋಮವಾರ ಮಧ್ಯಾಹ್ನ ಬಿರುಗಾಳಿ ಸಹಿತ ಮಳೆ ಆರಂಭವಾಗಿದ್ದು, ಈ ವೇಳೆ ರಕ್ಷಣೆಗಾಗಿ ಬೊಮ್ಮಯ್ಯ ಮೇಕೆಗಳನ್ನು ಹೊಡೆದುಕೊಂಡು ಮರದಡಿ ನಿಂತಿದ್ದಾಗ ಸಿಡಿಲು ಬಡಿದಿದೆ. ರಾಂಪುರ ಪಿಎಸ್‌ಐ ಗುಡ್ಡಪ್ಪ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.