ಮೊಳಕಾಲ್ಮೂರು: ಸಮಾಜ ಸೇವೆಯೇ ನನ್ನ ಮನೋಧರ್ಮ ಎಂಬ ಸಮರ್ಥ ನಾಯಕನ ಆಯ್ಕೆ ವಿಚಾರದಲ್ಲಿ ಸರ್ವರು ಪಾರದರ್ಶಕತೆ ತೋರಬೇಕು ಎಂದು ಸಿವಿಲ್ ನ್ಯಾಯಾಧೀಶೆ ಎಸ್.ನಿರ್ಮಲಾ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷಣಿಕ ಆಸೆಗಾಗಿ ಮತದಾರರು ಬಲಿಯಾಗಬಾರದು ಎಂದರು.
ತಹಸೀಲ್ದಾರ್ ಎಂ.ಬಸವರಾಜ್, ವಕೀಲರ ಸಂಘದ ಅಧ್ಯಕ್ಷ ಪಿ.ಪಾಪಯ್ಯ, ಕಾರ್ಯದರ್ಶಿ ಜಿ.ಮಂಜುನಾಥ, ಮಾಜಿ ಅಧ್ಯಕ್ಷ ಪಿ.ಜಿ.ವಸಂತಕುಮಾರ್, ಪ್ರಾಂಶುಪಾಲ ಡಿ.ಸೂರಯ್ಯ, ವಕೀಲರಾದ ಕೆ.ಆನಂದ್, ಅನಂತಮೂರ್ತಿ, ಕೆ.ವಿನೋದ, ಕೆ.ಎಂ.ರಾಮಾಂಜಿನಿ, ಉಪನ್ಯಾಸಕರಾದ ಕೆ.ವಿ.ಪ್ರಜ್ಞಾ, ಸುಮಾ, ಸಮಂಗಲಾ, ಟಿ.ತಿಮ್ಮಣ್ಣ, ಲಲಿತಾ, ಬಿ.ರಾಮಸ್ವಾಮಿ ಇದ್ದರು.