ಮೊಳಕಾಲ್ಮೂರು: ಸದೃಢ ಸಮಾಜ ಕಟ್ಟಲು ಪೂರಕವಾಗುವ ಮೌಲ್ಯಾಧಾರಿತ ಶಿಕ್ಷಣ ನೀಡಲು ಶಿಕ್ಷಕರು ಶ್ರಮಿಸಬೇಕು ಎಂದು ಸಿದ್ದಯ್ಯನಕೋಟೆ ಮಠದ ಶ್ರೀ ಬಸವಲಿಂಗ ಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ಸಿದ್ದಯ್ಯನಕೋಟೆ ಚಿತ್ತರಗಿ ವಿಜಯ ಮಹಾಂತೇಶ್ವರ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಶಿಬಿರದ ಸಾನ್ನಿಧ್ಯ ಮಾತನಾಡಿದರು.
ಈ ಪುಣ್ಯ ಭೂಮಿಯಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿ ಶಿಸ್ತು, ಶ್ರದ್ಧೆ, ಸಂಯಮ ಬೆಳೆಸಿಕೊಳ್ಳಬೇಕು. ನಾಯಕತ್ವದ ಮೌಲ್ಯಾಧಾರಿತ ಸೂತ್ರಗಳು ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ಅಡಕವಾಗಿವೆ ಎಂದರು.
ಸ್ಕೌಟ್ಸ್ ಜಿಲ್ಲಾ ಆಯುಕ್ತೆ ಸುನಿತಾ ಮಲ್ಲ್ಲಿಕಾರ್ಜುನ್ ಮಾತನಾಡಿ, ಇಂದಿನ ಮಕ್ಕಳೇ ದೇಶ ಕಟ್ಟುವ ನಾಳಿನ ನಾಯಕರು. ಶಾಲೆ ಎಂಬ ಗರಡಿಯಲ್ಲಿ ತಿದ್ದಿ ಉತ್ತಮ ರೀತಿ ಬದುಕು ಕಟ್ಟಿಕೊಳ್ಳುವ ಕಲೆ ಕಲಿಸುವ ಗುರುವಿನ ಮಾರ್ಗದರ್ಶನ ಅತೀ ಮುಖ್ಯ ಎಂದು ತಿಳಿಸಿದರು.
ಲೇಖಕ ಜಿ.ಎಸ್.ಉಜ್ಜಿನಪ್ಪ, ಶಿಕ್ಷಣಾಧಿಕಾರಿ ಎಂ.ಸೋಮಶೇಖರ್, ಸಂಸ್ಥೆಯ ಪದಾಧಿಕಾರಿಗಳಾದ ಟಿ.ರೇವಣ್ಣ, ನಾರಾಯಣಪ್ಪ, ಬಿ.ಬಡಯ್ಯ, ಎ.ಸಿ.ರೇವಣ್ಣ, ರಹಮತ್‌ಉಲ್ಲಾ, ಸಿ.ಚಂದ್ರಶೇಖರ್, ಅಬ್ದುಲ್ ಮಾಲೀಕ್, ದೇವೇಂದ್ರಪ್ಪ, ತಿಪ್ಪೇರುದ್ರಪ್ಪ, ಓ.ಶಿವಣ್ಣ ಇದ್ದರು.
